Increased cold - intense cold winds in Shivamogga city! ಶಿವಮೊಗ್ಗ ನಗರದಲ್ಲಿ ಹೆಚ್ಚಿದ ಚಳಿ - ಶೀತ ಗಾಳಿಯ ತೀವ್ರತೆ!

shimoga news | ಶಿವಮೊಗ್ಗ ನಗರದಲ್ಲಿ ಹೆಚ್ಚಿದ ಚಳಿ, ಶೀತ ಗಾಳಿಯ ತೀವ್ರತೆ!

ಶಿವಮೊಗ್ಗ (shivamogga), ಡಿಸೆಂಬರ್ 20: ಕಳೆದ ಕೆಲ ದಿನಗಳಿಂದ, ಶಿವಮೊಗ್ಗ ನಗರದಲ್ಲಿ ಚಳಿ ಹಾಗೂ ಶೀತಗಾಳಿಯ ತೀವ್ರತೆ ಹೆಚ್ಚಾಗಿದೆ. ಇದು ನಾಗರೀಕರನ್ನು ಅಕ್ಷರಶಃ ಗಡಗಡ ನಡುಗಿಸುವಂತೆ ಮಾಡಿದೆ..!

ಸಂಜೆಯಾಗುತ್ತಿದ್ದಂತೆ ತಾಪಮಾನದ ಪ್ರಮಾಣದಲ್ಲಿ ತೀವ್ರ ಇಳಿಕೆ ಉಂಟಾಗುತ್ತಿದೆ. ರಾತ್ರಿಯ ವೇಳೆ ತಣ್ಣನೆ ವಾತಾವರಣ ನೆಲೆಸುತ್ತಿದ್ದು, ಮನೆಯಿಂದ ಹೊರಬರಲು ಆಗದಷ್ಟು ಥಂಡಿ ಕಂಡುಬರುತ್ತಿದೆ.

ಮುಂಜಾನೆ ವೇಳೆಯಂತೂ ಚಳಿಯ ಪ್ರಮಾಣ ಮತ್ತಷ್ಟು ತೀವ್ರ ಸ್ವರೂಪದಲ್ಲಿರುತ್ತಿದ್ದು, ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗುವಂತಾಗಿದೆ.

ಮತ್ತೊಂದೆಡೆ, ಹಗಲು ವೇಳೆ ತಾಪಮಾನದ ಪ್ರಮಾಣ ಹೆಚ್ಚಾಗುತ್ತಿದೆ. ತೀವ್ರ ಸ್ವರೂಪದ ಚಳಿ ಹಾಗೂ ಬಿಸಿಲಿನಿಂದ ನಾಗರೀಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ.

ಅದರಲ್ಲಿಯೂ ವಯೋವೃದ್ದರು, ಮಕ್ಕಳು ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ. ಶೀತ, ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆಗಳು ಹೆಚ್ಚಾಗುವಂತಾಗಿದೆ ಎಂದು ವೈದ್ಯರು ಹೇಳುತ್ತಾರೆ.

ತೀವ್ರ ಚಳಿಗೆ ಕಾರಣವೇನು? : ಶುಭ್ರ ಆಕಾಶ, ಒಣ ಗಾಳಿ, ಫೆಸಿಫಿಕ್ ಮಹಾಸಾಗರದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಸಮುದ್ರ ಮೇಲ್ಮೈ ತಾಪಮಾನದಿಂದ ಚಳಿಯ ತೀವ್ರತೆ ಹೆಚ್ಚಾಗಲು ಕಾರಣವಾಗಿದೆ. ಇದಕ್ಕೆ ‘ಲಾ-ನಿನಾ’ ಎಫೆಕ್ಟ್ ಎಂದು ಕರೆಯಲಾಗುತ್ತದೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.

Shivamogga, December 19: For the past few days, the intensity of cold and chilly winds has increased in Shivamogga city. This is literally making the citizens shiver..! As the evening approaches, the temperature drops sharply. The weather becomes cold at night, making it too cold to leave the house.

Heartfelt tribute program by the Sacred Heart High School Alumni Association, Shivamogga ಶಿವಮೊಗ್ಗದ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆ ಹಳೇಯ ವಿದ್ಯಾರ್ಥಿಗಳ ಸಂಘದಿಂದ ಹೃದಯಾಂಜಲಿ ಕಾರ್ಯಕ್ರಮ Previous post shimoga news | ಶಿವಮೊಗ್ಗದ ಸೆಕ್ರೇಡ್ ಹಾರ್ಟ್ ಪ್ರೌಢಶಾಲೆ ಹಳೇಯ ವಿದ್ಯಾರ್ಥಿಗಳ ಸಂಘದಿಂದ ಹೃದಯಾಂಜಲಿ ಕಾರ್ಯಕ್ರಮ