shimoga | ಶಿವಮೊಗ್ಗ : ಗಂಡು ಮಗುವಿಗೆ ಜನ್ಮವಿತ್ತ 9 ನೇ ತರಗತಿ ವಿದ್ಯಾರ್ಥಿನಿ!

shimoga | Shivamogga: 9th grade student gives birth to a baby boy! ಶಿವಮೊಗ್ಗ : ಗಂಡು ಮಗುವಿಗೆ ಜನ್ಮವಿತ್ತ 9 ನೇ ತರಗತಿ ವಿದ್ಯಾರ್ಥಿನಿ!

ಶಿವಮೊಗ್ಗ (shivamogga), ಆಗಸ್ಟ್ 31: ಪ್ರೌಢಶಾಲೆ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿಯೇ, ಗಂಡು ಮಗುವಿಗೆ ಜನ್ಮವಿತ್ತ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಸದ್ಯ ಬಾಲಕಿ ಹಾಗೂ ಮಗು ಆರೋಗ್ಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರೌಢಶಾಲೆಯೊಂದರಲ್ಲಿ ಬಾಲಕಿಯು 9 ನೇ ತರಗತಿ ಅಭ್ಯಾಸ ಮಾಡುತ್ತಿದ್ದು, ಸುಮಾರು 15 ವರ್ಷ ವಯೋಮಾನದವಳಾಗಿದ್ದಾಳೆ ಎಂದು ತಿಳಿದುಬಂದಿದೆ.

ಕಳೆದ ಎರಡು ದಿನಗಳ ಹಿಂದೆ ಬಾಲಕಿಗೆ ಮನೆಯಲ್ಲಿಯೇ ಹೆರಿಗೆಯಾಗಿದೆ. ಮಗುವು 1. 8 ಕೆಜಿ ತೂಕವಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಾಲಕಿಯನ್ನು ಮಕ್ಕಳ ತಜ್ಞರು ಆಪ್ತ ಸಮಾಲೊಚನೆಗೊಳಪಡಿಸಿದ್ದಾರೆ. ದೌರ್ಜನ್ಯ ಎಸಗಿದವರ ವಿವರ ಕಲೆ ಹಾಕುವ ಕಾರ್ಯ ನಡೆಸಲಾಗುತ್ತಿದೆ. ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. 

Shivamogga, August 31: A high school girl student gave birth to a baby boy at home in Shivamogga city. It is reported that the girl and the child are currently healthy and are being treated at the hospital.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →