bhadravati | ಭದ್ರಾವತಿ : ಮನೆಯಲ್ಲಿ ಕಳ್ಳತನ – ಬೆಂಗಳೂರಿನ ಇಬ್ಬರು ಆರೋಪಿಗಳ ಬಂಧನ!
ಭದ್ರಾವತಿ (bhadravati), ಆಗಸ್ಟ್ 31: ಭದ್ರಾವತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ಯುವತಿ ಸೇರಿದಂತೆ ಇಬ್ಬರನ್ನು ಭದ್ರಾವತಿ ಪೇಪರ್ ಟೌನ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬೆಂಗಳೂರಿನ ಕೆಂಗೇರಿ ನಿವಾಸಿಗಳಾದ ಮಂಜುಳಾ (21) ಹಾಗೂ ಸುಜೈನ್ ಖಾನ್ (24) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳಿಂದ 7,82,000 ರೂ. ಮೌಲ್ಯದ 83 ಗ್ರಾಂ ತೂಕದ ಮಾಂಗಲ್ಯ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡಿವೈಎಸ್ಪಿ ಕೆ ಆರ್ ನಾಗರಾಜ್ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ನಾಗಮ್ಮ ಕೆ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ಐ ರತ್ನಾಕರ್, ಪ್ರಕಾಶ್, ಅರುಣ್, ನಾಗರಾಜ್ ಎಂ, ಹನುಮಂತ, ಆಸ್ಮಾ, ಸ್ವೀಕೃತ, ಅನುರೂಪ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಪ್ರಕರದ ಹಿನ್ನೆಲೆ : 18/8/2025 ರಂದು ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ 5 ನೇ ವಾರ್ಡ್ ನಲ್ಲಿ ವಾಸವಾಗಿರುವ ಚಂದ್ರಮ್ಮ ಎಂಬುವರ ಮನೆಯಲ್ಲಿ ಕಳ್ಳತನ ನಡೆಸಲಾಗಿತ್ತು. 95 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳರು ಅಪಹರಿಸಿದ್ದರು. ಈ ಕುರಿತಂತೆ ಚಂದ್ರಮ್ಮ ಅವರು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Bhadravati, August 31: Bhadravati Paper Town police have arrested two people, including a young woman from Bengaluru, in connection with a house burglary case in Bhadravati.
