bhadravati | ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪ : ಎಸ್ಪಿ ಹೇಳಿದ್ದೇನು?
ಶಿವಮೊಗ್ಗ (shivamogga), ಸೆಪ್ಟೆಂಬರ್ 9: ‘ಭದ್ರಾವತಿಯಲ್ಲಿ ನಿನ್ನೆ (ಸೆಪ್ಟೆಂಬರ್ 8) ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಸದರಿ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸುವ ಕಾರ್ಯ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತಂತೆ ಸೆಪ್ಟೆಂಬರ್ 9 ರಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತಂತೆ ಎಫ್ಐಆರ್ ದಾಖಲಿಸಿ, ವಿಡಿಯೋದಲ್ಲಿರುವ ವ್ಯಕ್ತಿಗಳನ್ನು ಗುರುತಿಸಲಾಗುತ್ತಿದೆ ಎಂದು ಎಂದು ಸ್ಪಷ್ಟಪಡಿಸಿದ್ದಾರೆ.
ಹಾಗೆಯೇ ವಿಡಿಯೋ ಚಿತ್ರೀಕರಿಸಿದ್ದು ಎಲ್ಲಿ? ಯಾವಾಗ? ಯಾರೆಲ್ಲ ವಿಡಿಯೋದಲ್ಲಿದ್ದಾರೆ? ಎಂಬುವುದು ಸೇರಿದಂತೆ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಲಾಗುವುದು. ಈ ಕುರಿತಂತೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.
ಏನೀದು ವಿಡಿಯೋ? : ಸೆಪ್ಟೆಂಬರ್ 8 ರಂದು ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ, ಕೆಲವರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆಂಬ ವಿಡಿಯೋ ತುಣುಕೊಂದು ವೈರಲ್ ಆಗಿದೆ. ಈ ಕುರಿತಂತೆ ಪೊಲೀಸ್ ತನಿಖೆಯಿಂದ ಹೆಚ್ಚಿನ ವಿವರಗಳ ಲಭ್ಯವಾಗಬೇಕಾಗಿದೆ.
More Stories
shimoga palike news | ಶಿವಮೊಗ್ಗ ಪಾಲಿಕೆಯಿಂದ ಇ-ಆಸ್ತಿ ಆಂದೋಲನ : ಯಾವಾಗ? ಎಲ್ಲೆಲ್ಲಿ?
E-Asti Movement by Shivamogga Corporation: When? Where?
ಶಿವಮೊಗ್ಗ ಪಾಲಿಕೆಯಿಂದ ಇ-ಆಸ್ತಿ ಆಂದೋಲನ : ಯಾವಾಗ? ಎಲ್ಲೆಲ್ಲಿ?
special article | ‘ಕಾನೂನಿನಡಿ ಪಡೆದ ದತ್ತು – ಜೀವನವಿಡಿ ಸುಖದ ಸಂಪತ್ತು’
Special Article : Tajuddin Khan – Chairman – Child Welfare Committee (Children’s Court) – Shivamogga District
‘Adoption under the law – a lifetime of happiness’
‘ಕಾನೂನಿನಡಿ ಪಡೆದ ದತ್ತು – ಜೀವನವಿಡಿ ಸುಖದ ಸಂಪತ್ತು’
ವಿಶೇಷ ಲೇಖನ : ತಾಜುದ್ದೀನ್ ಖಾನ್ – ಅಧ್ಯಕ್ಷರು – ಮಕ್ಕಳ ಕಲ್ಯಾಣ ಸಮಿತಿ (ಮಕ್ಕಳ ನ್ಯಾಯ ಪೀಠ) ಶಿವಮೊಗ್ಗ ಜಿಲ್ಲೆ
shimoga news | ಶಿವಮೊಗ್ಗ : ಫ್ಲೈ ಓವರ್ ಬಳಿಯಿದ್ದ ನೂರಾರು ಲೋಡ್ ಕಸದ ರಾಶಿಗೆ ಮುಕ್ತಿ!
Shivamogga : Hundreds of loads of garbage piled up near the flyover are now free!
ಶಿವಮೊಗ್ಗ : ಫ್ಲೈ ಓವರ್ ಬಳಿಯಿದ್ದ ನೂರಾರು ಲೋಡ್ ಕಸದ ರಾಶಿಗೆ ಮುಕ್ತಿ!
shimoga news | ಶಿವಮೊಗ್ಗ | ಪಾಲಿಕೆ ಸೇರ್ಪಡೆ, ರಸ್ತೆ ದುರಸ್ತಿ ಕೋರಿ ಗ್ರಾಮಾಂತರ ಶಾಸಕರಿಗೆ ಮನವಿ
Shimoga: Petition to rural MLAs for addition of corporation, road repair
ಶಿವಮೊಗ್ಗ : ಪಾಲಿಕೆ ಸೇರ್ಪಡೆ, ರಸ್ತೆ ದುರಸ್ತಿ ಕೋರಿ ಗ್ರಾಮಾಂತರ ಶಾಸಕರಿಗೆ ಮನವಿ
shimoga news | ಶಿವಮೊಗ್ಗ : ರಾಜಕಾಲುವೆ ಕೊಳಚೆ ನೀರಲ್ಲಿ ಕುಡಿಯುವ ನೀರು ಪೈಪ್ ಗಳು – ಎಚ್ಚೆತ್ತುಕೊಳ್ಳುವುದೆ ಜಲ ಮಂಡಳಿ?
Shivamogga: Drinking water pipes in Rajakaluve sewage – will the water board wake up?
ಶಿವಮೊಗ್ಗ : ರಾಜಕಾಲುವೆ ಕೊಳಚೆ ನೀರಲ್ಲಿ ಕುಡಿಯುವ ನೀರು ಪೈಪ್ ಗಳು – ಎಚ್ಚೆತ್ತುಕೊಳ್ಳುವುದೆ ಜಲ ಮಂಡಳಿ?
shimoga crime news | ಶಿವಮೊಗ್ಗ : ರೀಲ್ಸ್ ಅಭಿಮಾನಿ ಎಂದು ಕರೆಯಿಸಿಕೊಂಡು ಶಿಕ್ಷಕನ ದರೋಡೆ ಮಾಡಿದ ಆರೋಪಿಗಳು!
Shivamogga : Accused robbed a teacher by pretending to be a Reels fan!
ಶಿವಮೊಗ್ಗ : ರೀಲ್ಸ್ ಅಭಿಮಾನಿ ಎಂದು ಕರೆಯಿಸಿಕೊಂಡು ಶಿಕ್ಷಕನ ದರೋಡೆ ಮಾಡಿದ ಆರೋಪಿಗಳು!
