Woman's body found in Bhadra River in Bhadravati city! ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ!

bhadravati news | ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ!

ಭದ್ರಾವತಿ (bhadravathi), ಸೆಪ್ಟೆಂಬರ್ 29 : ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರಸಭೆ ಮುಂಭಾಗದ ಭದ್ರಾ ನದಿಯಲ್ಲಿ, ಅಪರಿಚಿತ ಮಹಿಳೆಯೋರ್ವರ ಶವ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸೆಪ್ಟೆಂಬರ್ 26 ರಂದು ನಡೆದಿದೆ.

ಮೃತಯ ಮಹಿಳೆಯ ಪೂರ್ವಾಪರಗಳ ಮಾಹಿತಿ ಲಭ್ಯವಾಗಿಲ್ಲ. ಮೃತರಿಗೆ ಸರಿಸುಮಾರು 60 ರಿಂದ 70 ವರ್ಷ ವಯೋಮಾನವಿದೆ ಎಂದು ಹಳೇನಗರ ಪೊಲೀಸರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಚಹರೆ : ಮೃತ ಮಹಿಳೆಯು 5 ಅಡಿ ಎತ್ತರವಿದ್ದಾರೆ. ತಲೆಯಲ್ಲಿ 6 ಇಂಚು ಬಿಳಿ ಕೂದಲು ಇದ್ದು, ಸೊಂಟಕ್ಕೆ ಡಾಬು ಧರಿಸಿರುತ್ತಾರೆ. ಒಂದು ಕಪ್ಪು ಬಣ್ಣದ ಎಲೆ ಅಡಿಕೆ ಹಾಕುವ ಸಣ್ಣ ಚೀಲ ಸೊಂಟದಲ್ಲಿರುವುದು ಪತ್ತೆಯಾಗಿದೆ.

ಎಡಕೈಯಲ್ಲಿ ತಾಮ್ರದಂತಿರುವ ಬಳೆ ಇದ್ದು, ತೋರು ಬೆರಳಿನಲ್ಲಿ ತಾಮ್ರದಂತಿರುವ ಉಂಗುರು ಇರುತ್ತದೆ. ಎರಡು ಕಾಲು, ಕೈ, ಕಣ್ಣು, ಮುಖ, ಮೂಗು, ಎದೆ ನೀರಿನಲ್ಲಿ ಕೊಳೆತು ಚರ್ಮ ಸುಲಿದಿರುತ್ತೆ. ಮೈಮೇಲೆ ಕೆಂಪು ಸೀರೆ, ಕಪ್ಪು ಜಾಕೆಟ್ ಧರಿಸಿದ್ದಾರೆ.

ಮೃತ ಮಹಿಳೆಯ ವಾರಸುದಾರರು ಪತ್ತೆಯಾದಲ್ಲಿ, ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಸಬ್‌ ಇನ್ಸ್’ಪೆಕ್ಟರ್ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Bhadravati, September 29: The partially decomposed body of an unidentified woman was found in the Bhadra River in front of the municipal council under the Bhadravati Halenagar police station limits on September 26.

low pressure drop in bey of bengal : Rains intensify again in various places in Shivamogga district! ವಾಯುಭಾರ ಕುಸಿತ : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮತ್ತೆ ಮಳೆ ಚುರುಕು! Previous post shimoga rain | ವಾಯುಭಾರ ಕುಸಿತ : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮತ್ತೆ ಮಳೆ ಚುರುಕು!
Shimoga: 'Doddamma Devi National Award' for a person from Indore Madhya Pradesh ಶಿವಮೊಗ್ಗ : ಮಧ್ಯಪ್ರದೇಶದ ಇಂದೋರ್ ನ ವ್ಯಕ್ತಿಗೆ ‘ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ’ Next post shimoga news | ಶಿವಮೊಗ್ಗ : ಮಧ್ಯಪ್ರದೇಶದ ಇಂದೋರ್ ವ್ಯಕ್ತಿಗೆ ‘ದೊಡ್ಡಮ್ಮ ದೇವಿ ರಾಷ್ಟ್ರೀಯ ಪ್ರಶಸ್ತಿ’