shimoga | kumsi | ಶಿವಮೊಗ್ಗ : ಕುಂಸಿ ಗ್ರಾಮದಲ್ಲಿ ಒಂಟಿ ಮಹಿಳೆಯ ಕೊಲೆ!
ಶಿವಮೊಗ್ಗ (shivamogga), ಅಕ್ಟೋಬರ್ 3: ಮನೆಯಲ್ಲಿಯೇ ಮಹಿಳೆಯೋರ್ವರನ್ನು ಇರಿದು ಹತ್ಯೆ ಮಾಡಿರುವ ಘಟನೆ, ಶಿವಮೊಗ್ಗ ತಾಲೂಕಿನ ಕುಂಸಿ ಗ್ರಾಮದ ರಜಪೂತರ ಬೀದಿಯಲ್ಲಿ ನಡೆದಿದ್ದು, ಅಕ್ಟೋಬರ್ 2 ರ ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದೆ.
ಬಸಮ್ಮ (65) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ಮಹಿಳೆಯು ಒಬ್ಬಂಟಿಯಾಗಿ ಮನೆಯಲ್ಲಿ ವಾಸವಿದ್ದರು. ಬೆಳಿಗ್ಗೆ ಬಸಮ್ಮರವರು ಮನೆಯಿಂದ ಹೊರಬರದ ಹಿನ್ನೆಲೆಯಲ್ಲಿ, ನೆರೆಹೊರೆಯವರು ಮನೆ ಬಳಿ ಆಗಮಿಸಿ ಪರಿಶೀಲಿಸಿದಾಗ, ಕೊಲೆ ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್, ಡಿವೈಎಸ್ಪಿ ಸಂಜೀವ್ ಕುಮಾರ್, ಇನ್ಸ್’ಪೆಕ್ಟರ್ ದೀಪಕ್, ಸೇರಿದಂತೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಂಡ ಭೇಟಿಯಿತ್ತು ಪರಿಶೀಲನೆ ನಡಸಿದ್ದಾರೆ.
ಆಸ್ತಿ ವಿವಾದ, ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಬಸಮ್ಮರ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಸಂಬಂಧ ಮೃತಳ ಸಹೋದರ ನೀಡಿರುವ ದೂರಿನ ಆಧಾರದ ಮೇಲೆ ಕುಂಸಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.
Shivamogga, October 3: The incident of stabbing a woman to death in her home took place on Rajputara Street in Kumsi village in Shivamogga taluk. The crime came to light on the morning of October 2.
More Stories
news update | ವಿಭಾಗ ಪತ್ರ ಗೊಂದಲ ಸರಿಪಡಿಸಲು ಕಂದಾಯ ಸಚಿವರಿಗೆ ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಆಗ್ರಹ!
Legislative Council MLA DS Arun urges Revenue Minister to rectify division letter confusion!
ವಿಭಾಗ ಪತ್ರ ಗೊಂದಲ ಸರಿಪಡಿಸಲು ಕಂದಾಯ ಸಚಿವರಿಗೆ ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಆಗ್ರಹ!
shimoga news | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ – ವಾರ್ಡ್ ಮೀಸಲಾತಿ ನಿಗದಿ ವಿಳಂಬ : ಸರ್ಕಾರಕ್ಕೆ ಶಾಸಕ ಚನ್ನಬಸಪ್ಪ ಆಗ್ರಹವೇನು?
Shimoga Corporation area revision, ward reservation determination: Urban Development Minister’s important answer to MLA Channabasappa’s question!
ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ, ವಾರ್ಡ್ ಮೀಸಲಾತಿ ನಿಗದಿ : ಶಾಸಕ ಚನ್ನಬಸಪ್ಪ ಪ್ರಶ್ನೆಗೆ ನಗರಾಭಿವೃದ್ದಿ ಸಚಿವರ ಮಹತ್ವದ ಉತ್ತರ!
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 18 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for December 18 in shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 18 ರ ತರಕಾರಿ ಬೆಲೆಗಳ ವಿವರ
shimoga news | ಶಿವಮೊಗ್ಗದಲ್ಲಿ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪನೆ ಮತ್ತೆ ಚರ್ಚೆಯ ಮುನ್ನೆಲೆಗೆ!
shimoga news | ಶಿವಮೊಗ್ಗದಲ್ಲಿ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪನೆ ಮತ್ತೆ ಚರ್ಚೆಯ ಮುನ್ನೆಲೆಗೆ!
The establishment of a police commissionerate office in Shivamogga is back in the spotlight!
*Home Minister Parameshwar gave a positive response to legislator Channabasappa’s demand
shimoga news | ಶಿವಮೊಗ್ಗದ ಹನುಮಂತ ನಗರ ನಿವಾಸಿಗಳ ಗೋಳು ಆಲಿಸದ ಪಾಲಿಕೆ ಆಡಳಿತ!
The municipal administration does not listen to the concerns of the residents of Hanumanth Nagar in Shivamogga!
ಶಿವಮೊಗ್ಗದ ಹನುಮಂತ ನಗರ ನಿವಾಸಿಗಳ ಗೋಳು ಆಲಿಸದ ಪಾಲಿಕೆ ಆಡಳಿತ!
shimoga news | ಶಿವಮೊಗ್ಗ ನಗರ ಕುಡಿಯುವ ನೀರು ಪೂರೈಕೆ : ಹೊಸ ಯೋಜನೆ ಅನುಷ್ಠಾನದತ್ತ ಹರಿಯುವುದೆ ಜನಪ್ರತಿನಿಧಿಗಳ ಚಿತ್ತ?
Shivamogga city drinking water supply: Will the will of the people’s representatives flow towards the implementation of the new project?
ಶಿವಮೊಗ್ಗ ನಗರ ಕುಡಿಯುವ ನೀರು ಪೂರೈಕೆ : ಹೊಸ ಯೋಜನೆ ಅನುಷ್ಠಾನದತ್ತ ಹರಿಯುವುದೆ ಜನಪ್ರತಿನಿಧಿಗಳ ಚಿತ್ತ?
