Shivamogga : JH Patel Layout UGD work stopped as quickly as it started - when will the stench and misery be resolved? ಶಿವಮೊಗ್ಗ : ಆರಂಭಗೊಂಡಷ್ಟೆ ವೇಗದಲ್ಲಿ ಸ್ಥಗಿತಗೊಂಡ ಜೆ ಹೆಚ್ ಪಟೇಲ್ ಬಡಾವಣೆ ಯುಜಿಡಿ ಕಾಮಗಾರಿ – ದುರ್ನಾತ ದುಃಸ್ಥಿತಿಗೆ ಮುಕ್ತಿ ಯಾವಾಗ?

shimoga news | ಶಿವಮೊಗ್ಗ : ಆರಂಭಗೊಂಡಷ್ಟೆ ವೇಗದಲ್ಲಿ ಸ್ಥಗಿತಗೊಂಡ ಜೆ ಹೆಚ್ ಪಟೇಲ್ ಬಡಾವಣೆ ಯುಜಿಡಿ ಕಾಮಗಾರಿ – ದುರ್ನಾತ ದುಃಸ್ಥಿತಿಗೆ ಮುಕ್ತಿ ಯಾವಾಗ?

ಶಿವಮೊಗ್ಗ (shivamogga), ಅಕ್ಟೋಬರ್ 9 : ಶಿವಮೊಗ್ಗ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ, ಸಾವಿರಾರು ಜನರು ವಾಸಿಸುತ್ತಿರುವ ಜೆ ಹೆಚ್ ಪಟೇಲ್ ಬಡಾವಣೆಯಲ್ಲಿ, ಯುಜಿಡಿ (ಒಳ ಚರಂಡಿ) ಕಾಮಗಾರಿ ಆರಂಭಗೊಂಡಷ್ಟೆ ವೇಗದಲ್ಲಿ ಸ್ಥಗಿತಗೊಂಡಿದೆ! ಇದಕ್ಕೆ ಸ್ಥಳೀಯ ನಾಗರೀಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆಡಳಿತದ ವಿರುದ್ದ ಅಸಮಾಧಾನ ಹೊರಹಾಕಲಾರಂಭಿಸಿದ್ದಾರೆ.

ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ವು, ಕಳೆದ ಸರಿಸುಮಾರು 22 ವರ್ಷಗಳ ಹಿಂದೆ ಜೆ ಹೆಚ್ ಪಟೇಲ್ ಬಡಾವಣೆ ಅಭಿವೃದ್ದಿಪಡಿಸಿತ್ತು. ಆದರೆ ಬಡಾವಣೆಯಲ್ಲಿ ಯುಜಿಡಿ ವ್ಯವಸ್ಥೆಯನ್ನೇ ಕಲ್ಪಿಸಿರಲಿಲ್ಲ. ಇದರಿಂದ ಬಡಾವಣೆಯ ಹಲವೆಡೆ ಮನೆಗಳ ಶೌಚಾಲಯದ ಕೊಳಚೆ ನೀರನ್ನು ನೇರವಾಗಿ ಚರಂಡಿಗೆ ಬಿಡಲಾಗುತ್ತಿದೆ.

ಪ್ರಸ್ತುತ ಬಡಾವಣೆ ವೇಗವಾಗಿ ಅಭಿವೃದ್ದಿ ಹೊಂದುತ್ತಿದೆ. ನೂರಾರು ಮನೆಗಳು ನಿರ್ಮಾಣವಾಗಿವೆ. ಆದರೆ ಯುಜಿಡಿ ವ್ಯವಸ್ಥೆಯಿಲ್ಲದ ಕಾರಣದಿಂದ, ದುರ್ನಾತ ಬೀರುತ್ತಿದೆ. ಕೆಲ ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಹ ದುಃಸ್ಥಿತಿಯಿದೆ. ಕಳೆದ ಎರಡು ದಶಕಗಳಿಂದ ಇದೇ ದುರವಸ್ಥೆ ಬಡಾವಣೆಯಲ್ಲಿದೆ. ಇದು ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ನಾಗರೀಕರು ದೂರುತ್ತಾರೆ.

ಮಂಜೂರು : ಈ ನಡುವೆ ಬಡಾವಣೆಯಲ್ಲಿ ಯುಜಿಡಿ ವ್ಯವಸ್ಥೆ ಅನುಷ್ಠಾನಕ್ಕೆಂದು 83 ಲಕ್ಷ ರೂ. ಮಂಜೂರಾಗಿತ್ತು. ಅಂತೂ ಇಂತೂ ಕೊನೆಗೂ ಪಾಲಿಕೆ ಆಡಳಿತ, ಕಳೆದ ಕೆಲ ತಿಂಗಳ ಹಿಂದೆ ಯುಜಿಡಿ ಕಾಮಗಾರಿ ಆರಂಭಿಸಿತ್ತು. ಇದು ನಾಗರೀಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೆಲ ತಿಂಗಳುಗಳಲ್ಲಿಯೇ ಹಲವು ವರ್ಷಗಳಿಂದ ಎದುರಿಸಿಕೊಂಡು ಬರುತ್ತಿದ್ದ, ದುರ್ನಾತದ ಸಂಕಷ್ಟಕ್ಕೆ ಮುಕ್ತಿ ಸಿಗುವ ನಿರೀಕ್ಷೆಯಲ್ಲಿ ನಾಗರೀಕರಿದ್ದರು.

ಕಾಮಗಾರಿ ಕೂಡ ಸಮರೋಪಾದಿಯಲ್ಲಿ ಸಾಗಿತ್ತು. ಶೇ. 30 ರಿಂದ 40 ರಷ್ಟು ಕೆಲಸ ಪೂರ್ಣಗೊಂಡಿತ್ತು. ಈ ನಡುವೆ ದಿಢೀರ್ ಆಗಿ ಪಾಲಿಕೆ ಆಡಳಿತ ಕಾಮಗಾರಿ ಸ್ಥಗಿತಗೊಳಿಸಿದೆ. ಈ ಕುರಿತಂತೆ ಪಾಲಿಕೆ ಆಡಳಿತದಿಂದ ಯಾವುದೇ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲವೆಂದು ಸ್ಥಳೀಯ ನಿವಾಸಿಗಳು ತಿಳಿಸುತ್ತಾರೆ.

ಕಾರಣವೇನು? : ಲಭ್ಯ ಮಾಹಿತಿ ಅನುಸಾರ, ಜೆ ಹೆಚ್ ಪಟೇಲ್ ಬಡಾವಣೆ ಸಮೀಪವೇ ತುಂಗಾ ಮೇಲ್ದಂಡೆ ನಾಲೆ ಹಾದು ಹೋಗಿದೆ. ಪಾಲಿಕೆ ಆಡಳಿತ ನಾಲೆ ಪಕ್ಕದ ಖಾಲಿ ಜಾಗದಲ್ಲಿ ಯುಜಿಡಿ ಪೈಪ್ ಲೈನ್ ಕಾಮಗಾರಿ ನಡೆಸಿದೆ. ಪೈಪ್ ಲೈನ್ ಅಳವಡಿಸಲು ತಮ್ಮ ಅನುಮತಿ ಪಡೆದಿಲ್ಲವೆಂದು, ಕರ್ನಾಟಕ ನೀರಾವರಿ ನಿಗಮದ ತುಂಗಾ ಮೇಲ್ದಂಡೆ  ವಿಭಾಗದ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಹಾಗೆಯೇ ಟೆಂಡರ್ ಗೊಂದಲದ ಕಾರಣದಿಂದ ವ್ಯಕ್ತಿಯೋರ್ವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆಂಬ ಮಾಹಿತಿಯೂ ಇದ್ದು, ಅದಿಕೃತ ವಿವರಗಳು ಲಭ್ಯವಾಗಿಲ್ಲ. ಈ ಕಾರಣದಿಂದ ಕಳೆದೊಂದು ತಿಂಗಳಿನಿಂದ, ಪಾಲಿಕೆ ಆಡಳಿತ ಯುಜಿಡಿ ಕಾಮಗಾರಿ ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸುತ್ತವೆ.

ಒಟ್ಟಾರೆ ಜನೋಪಯೋಗಿ ಕಾಮಗಾರಿಯೆಂದು, ಆಡಳಿತದಲ್ಲಿನ ಸಮನ್ವಯತೆ ಕೊರತೆಯಿಂದ ಅರ್ಧಕ್ಕೆ ಸ್ಥಗಿತಗೊಳ್ಳುವಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ. ಜೆ ಹೆಚ್ ಪಟೇಲ್ ಬಡಾವಣೆಯಲ್ಲಿ ಎರಡು ದಶಕಗಳ ನಂತರ ಆರಂಭವಾಗಿರುವ ಯುಜಿಡಿ  ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಅವ್ಯವಸ್ಥೆ ಸರಿಪಡಿಸಲು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ ಎಂಬುವುದು ನಾಗರೀಕರ ಆಗ್ರಹವಾಗಿದೆ.

*** ಜೆ ಹೆಚ್ ಪಟೇಲ್ ಬಡಾವಣೆ ಬಳಿ ಹಾದು ಹೋಗಿರುವ ತುಂಗಾ ಮೇಲ್ದಂಡೆ ನಾಲೆಯು ಅವ್ಯವಸ್ಥೆಯ ಆಗರವಾಗಿದೆ. ನಾಲೆಯ ಇಕ್ಕೆಲಗಳಲ್ಲಿ ಭಾರೀ ಪ್ರಮಾಣದ ಗಿಡಗಂಟೆ ಬೆಳೆದುಕೊಂಡಿದೆ. ಕೆಲವೆಡೆ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ನಾಲೆ ಸುತ್ತಮುತ್ತಲಿನ ನಿವಾಸಿಗಳು ನಾನಾ ತೊಂದರೆ ಎದುರಿಸುವಂತಾಗಿದೆ. ವಿಷಜಂತುಗಳು, ಹುಳುಹುಪ್ಪಟ್ಟೆಗಳ ಹಾವಳಿ ಹೆಚ್ಚಾಗುವಂತಾಗಿದೆ. ಮತ್ತೊಂದೆಡೆ, ನಾಲೆಯ ಇಕ್ಕೆಲದಲ್ಲಿನ ಜಾಗವನ್ನು ಕೂಡ ಕೆಲ ಭೂಗಳ್ಳರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಕಲ್ಲು, ಮಣ್ಣು ಕಳವು ನಡೆಯುತ್ತಿದೆ. ಈ ಬಗ್ಗೆ ತುಂಗಾ ಮೇಲ್ದಂಡೆ ನಾಲೆ ಅಧಿಕಾರಿಗಳು ಗಮನಹರಿಸಬೇಕಾಗಿದೆ. ನಾಲೆ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಾಣ, ರಸ್ತೆ ಅಭಿವೃದ್ದಿಗೊಳಿಸುವ ಕಾರ್ಯ ನಡೆಸಬೇಕಾಗಿದೆ. ನಾಲೆ ಇಕ್ಕೆಲದಲ್ಲಿ ಬೀದಿ ದೀಪ ಅಳವಡಿಸಬೇಕಾಗಿದೆ. ಸ್ವಚ್ಛತೆ ಕಾಯ್ದುಕೊಳ್ಳುವ ಕಾರ್ಯ ಮಾಡಬೇಕಾಗಿದೆ ಎಂದು ಸ್ಥಳೀಯ ನಾಗರೀಕರು ಆಗ್ರಹಿಸುತ್ತಾರೆ.

Shivamogga, October 9: In JH Patel Layout, one of the prestigious layouts of Shivamogga city, where thousands of people live, the UGD (internal drainage) work has been stopped as quickly as it started! Local citizens are expressing strong objections to this. Shivamogga – Bhadravati Urban Development Authority (SUDA) developed JH Patel Layout about 22 years ago. But the layout did not have a UGD system. The sewage from the toilets of the houses is being discharged directly into the drain.

Shivamogga: Power outages in various places on October 9th! ಶಿವಮೊಗ್ಗ : ಅಕ್ಟೋಬರ್ 9 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Previous post Shimoga | power cut news | ಶಿವಮೊಗ್ಗ : ಅಕ್ಟೋಬರ್ 11 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ!
shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ