Parking of vehicles is prohibited even in the Shivamogga ZP office premises! ಶಿವಮೊಗ್ಗ ಜಿಪಂ ಕಚೇರಿ ಆವರಣದಲ್ಲಿಯೂ ವಾಹನಗಳ ನಿಲುಗಡೆ ನಿಷೇಧ!

shimoga zp news | ಶಿವಮೊಗ್ಗ ಜಿಪಂ ಕಚೇರಿ ಆವರಣದಲ್ಲಿಯೂ ವಾಹನಗಳ ನಿಲುಗಡೆ ನಿಷೇಧ!

ಶಿವಮೊಗ್ಗ (shivamogga), ಅಕ್ಟೋಬರ್ 16: ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ. ಈ ಮೂಲಕ ಕಚೇರಿ ಆವರಣದಲ್ಲಿ ಕಂಡುಬರುತ್ತಿದ್ದ ಅವ್ಯವಸ್ಥಿತ ವಾಹನಗಳ ನಿಲುಗಡೆಗೆ ಇತಿಶ್ರೀ ಹಾಕಲಾಗಿದೆ. ಇದೀಗ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿಯೂ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ!

ಜಿಪಂ ಕಚೇರಿ ಆವರಣದಲ್ಲಿ ಎಲ್ಲ ರೀತಿಯ ವಾಹನಗಳ ನಿಲುಗಡೆ ನಿರ್ಬಂಧಿಸಿ ಸಿಇಓ ಹೇಮಂತ್ ಎನ್ ಅವರು ಆದೇಶಿಸಿದ್ದಾರೆ. ಕಚೇರಿ ಹಿಂಭಾಗದಲ್ಲಿರುವ ವಿಶಾಲವಾದ ಜಾಗದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿದ್ದಾರೆ.

ಈ ಸಂಬಂಧ ಕಚೇರಿ ಆವರಣದಲ್ಲಿ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ಸದರಿ ಸಿಬ್ಬಂದಿಗಳು ಕಚೇರಿ ಆವರಣದಲ್ಲಿ ವಾಹನ ನಿಲುಗಡೆ ಮಾಡದಂತೆ ಕಚೇರಿಗೆ ಆಗಮಿಸುವವರಿಗೆ ಸೂಚನೆ ನೀಡುತ್ತಿದ್ದಾರೆ.

ಕಿರಿಕಿರಿ : ಈ ಹಿಂದೆ ಡಿಸಿ ಕಚೇರಿ ಆವರಣದಲ್ಲಿ ಕಂಡುಬರುತ್ತಿದ್ದ ವಾಹನಗಳ ದಟ್ಟಣೆ, ಜಿಪಂ ಕಚೇರಿ ಆವರಣದಲ್ಲಿಯೂ ಕಂಡುಬರುತ್ತಿತ್ತು. ಎಲ್ಲೆಂದರಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತಿತ್ತು. ಅದರಲ್ಲಿಯೂ ಸಚಿವರು, ಜನಪ್ರತಿನಿಧಿಗಳ ಸಭೆಗಳಿದ್ದ ವೇಳೆಯಂತೂ ವಾಹನಗಳ ನಿಲುಗಡೆ ಕಿರಿಕಿರಿ ಮತ್ತಷ್ಟು ಹೆಚ್ಚಾಗುತ್ತಿತ್ತು.

ಇದು ಸಾಕಷ್ಟು ಗೊಂದಲ – ಗಡಿಬಿಡಿಗೆ ಎಡೆ ಮಾಡಿಕೊಡುತ್ತಿತ್ತು. ಇದಕ್ಕೆ ಇತಿಶ್ರೀ ಹಾಡಬೇಕೆಂಬ ಉದ್ದೇಶದಿಂದ ಸಿಇಓ ಹೇಮಂತ್ ಎನ್ ಅವರು ಕಚೇರಿ ಆವರಣದಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  

ವಿಶಾಲ ಜಾಗವಿದೆ : ಜಿಪಂ ಕಚೇರಿ ಹಿಂಭಾಗದಲ್ಲಿ ಸುಮಾರು ಒಂದೂವರೆ ಎಕರೆಗೂ ಅಧಿಕ ವಿಸ್ತೀರ್ಣದ ಜಾಗವಿದ್ದು, ಸದರಿ ಜಾಗದಲ್ಲಿ ವಾಹನಗಳ ನಿಲುಗಡೆಗೆ ಸಿಇಓ ಅವಕಾಶ ಕಲ್ಪಿಸಿದ್ದಾರೆ. ಇದು ಸ್ವಾಗತಾರ್ಹ ಕ್ರಮವೆಂದು ಕೆಲ ನಾಗರೀಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸೂಕ್ತ ವ್ಯವಸ್ಥೆ ಮಾಡಲಿ : ಜಿಪಂ ಕಚೇರಿ ಹಿಂಭಾಗದಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ತಂಗುದಾಣದ ವ್ಯವಸ್ಥೆ ಮಾಡಬೇಕು. ಗಿಡಗಂಟೆ ಸ್ವಚ್ಛಗೊಳಿಸಿ ಕೊಡಬೇಕಾಗಿದೆ ಎಂದು ಕೆಲ ವಾಹನ ಮಾಲೀಕರು ಅಭಿಪ್ರಾಯ ಪಡುತ್ತಾರೆ.

*** ‘ಕಚೇರಿ ಆವರಣದಲ್ಲಿ ಇಲಾಖೆಗಳು ಸೇರಿದಂತೆ ಸಾರ್ವಜನಿಕರ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಲಾಗುತ್ತಿತ್ತು. ಹಲವು ವೇಳೆ ಕಚೇರಿಯಿಂದ ಒಳಗೆ ಹಾಗೂ ಹೊರಗೆ ವಾಹನಗಳನ್ನು ಕೊಂಡೊಯ್ಯಲು ಸಾಧ್ಯವಾಗುತ್ತಿರಲಿಲ್ಲ. ಸಾಕಷ್ಟು ಕಿರಿಕಿರಿ ಉಂಟಾಗುತ್ತಿತ್ತು. ಈ ಕಾರಣದಿಂದ ಕಚೇರಿ ಹಿಂಭಾಗದಲ್ಲಿ ಸುಮಾರು 2 ಎಕರೆಯಷ್ಟು ಜಾಗವಿದೆ. ಆ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕಚೇರಿಗೆ ಆಗಮಿಸುವ ಎಲ್ಲರಿಗೂ ಅನುಕೂಲವಾಗಿದೆ. ಕಚೇರಿ ಹಿಂಭಾಗದ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೆ ಅಗತ್ಯವಾದ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಹೇಮಂತ್ ಎನ್ ಅವರು ಅಕ್ಟೋಬರ್ 16 ರಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

shivamogga, october 16: Parking of vehicles has been restricted in the Shivamogga District Commissioner’s office premises. This has put an end to the unorganized parking of vehicles that used to be seen in the office premises. Now, parking of vehicles has been banned in the Zilla Panchayat office premises as well!

Shivamogga : When will the potholes on the roads be solved?! ಶಿವಮೊಗ್ಗ : ರಸ್ತೆಗಳ ಗುಂಡಿ – ಗೊಟರುಗಳಿಗೆ ಮುಕ್ತಿ ಯಾವಾಗ?! Previous post shimoga news | ಶಿವಮೊಗ್ಗ : ರಸ್ತೆಗಳ ಗುಂಡಿ – ಗೊಟರುಗಳಿಗೆ ಮುಕ್ತಿ ಯಾವಾಗ?!
Shivamogga : Power outages in various places on October 18th ಶಿವಮೊಗ್ಗ : ಅಕ್ಟೋಬರ್ 18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ Next post shimoga | power cut | ಶಿವಮೊಗ್ಗ : ಅಕ್ಟೋಬರ್ 18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ