Sagar POCSO case: Youth - homestay owner - room boy sentenced to 20 years in prison! ಸಾಗರದ ಪೋಕ್ಸೋ ಪ್ರಕರಣ : ಯುವಕ - ಹೋಂ ಸ್ಟೇ ಮಾಲೀಕ - ರೂಂ ಬಾಯ್’ಗೆ 20 ವರ್ಷ ಜೈಲು ಶಿಕ್ಷೆ!

pocso act | ಸಾಗರದ ಪೋಕ್ಸೋ ಪ್ರಕರಣ : ಯುವಕ, ಹೋಂ ಸ್ಟೇ ಮಾಲೀಕ, ರೂಂ ಬಾಯ್’ಗೆ 20 ವರ್ಷ ಜೈಲು ಶಿಕ್ಷೆ!

ಶಿವಮೊಗ್ಗ (shivamogga), ಡಿಸೆಂಬರ್ 21: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಪೋಕ್ಸೋ ಪ್ರಕರಣದಲ್ಲಿ ಮೂವರಿಗೆ 20 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ, ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ – 1 ತೀರ್ಪು ನೀಡಿದೆ.

26 ವರ್ಷದ ಯುವಕ, 58 ವರ್ಷದ ಹೋಂ ಸ್ಟೇ ಮಾಲೀಕ ಹಾಗೂ ಹೋಂ ಸ್ಟೇಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ರೂಂ ಬಾಯ್ (ಪೋಕ್ಸೋ ಪ್ರಕರಣದಲ್ಲಿ ಹೆಸರು, ವೈಯಕ್ತಿಕ ವಿವರ ಬಹಿರಂಗಪಡಿಸುವಂತಿಲ್ಲ) ಜೈಲು ಶಿಕ್ಷೆಗೆ ಗುರಿಯಾದವರು ಎಂದು ಗುರುತಿಸಲಾಗಿದೆ.

ಜೈಲು ಶಿಕ್ಷೆಯ ಜೊತೆಗೆ 26 ವರ್ಷದ ಯುವಕನಿಗೆ 71 ಸಾವಿರ ರೂ. ದಂಡ ಹಾಗೂ ಉಳಿದಿಬ್ಬರಿಗೆ ತಲಾ 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ನ್ಯಾಯಾಧೀಶರಾದ ನಿಂಗನಗೌಡ ಭ ಪಾಟೀಲ್ ರವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಧರ್ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : 11-9-2023 ನೇ ಸಾಲಿನಲ್ಲಿ 16 ವರ್ಷದ ಬಾಲಕಿಯನ್ನು 26 ವರ್ಷದ ಯುವಕನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು, ಅನದಿಕೃತವಾಗಿ ನಡೆಸಲಾಗುತ್ತಿದ್ದ ಹೋಂ ಸ್ಟೇನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತಂತೆ ನೊಂದ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.  

ಇದರ ಆಧಾರದ ಮೇಲೆ ದೌರ್ಜನ್ಯ ಎಸಗಿದ್ದ ಯುವಕ, ಬಾಲಕಿಯ ವಯಸ್ಸು ಹಾಗೂ ಇತರೆ ದಾಖಲಾತಿ ಪರಿಶೀಲಿಸದೆ ಕೊಠಡಿಯಲ್ಲಿ ಪದೆ ಪದೇ ಉಳಿದುಕೊಳ್ಳಲು ಅವಕಾಶ ಕಲ್ಪಿಸಿ, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಸಹಕಾರ ನೀಡಿದ್ದ ಹೋಂ ಸ್ಟೇ ಮಾಲೀಕ ಹಾಗೂ ರೂಂ ಬಾಯ್ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಅನದಿಕೃತವಾಗಿ ಹೋಂ ಸ್ಟೇ ನಡೆಸುತ್ತಿದ್ದುದು ಪೊಲೀಸರ ತನಿಖೆಯಲ್ಲಿ ಕಂಡುಬಂದಿತ್ತು. ಅಂದಿನ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಅವರು ಪ್ರಕರಣದ ತನಿಖೆ ನಡೆಸಿ, ಮೂವರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.

Shivamogga, December 21: The Additional District and Sessions Court (FTSC-1) has sentenced three people to 20 years in prison in a POCSO case of sexual assault on a girl.

shimoga APMC vegetable prices | Details of vegetable prices for December 21 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 21 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 21 ರ ತರಕಾರಿ ಬೆಲೆಗಳ ವಿವರ