Shivamogga: Man stabbed in mobile shop – Three arrested! ಶಿವಮೊಗ್ಗ : ಮೊಬೈಲ್ ಶಾಪ್ ನಲ್ಲಿ ವ್ಯಕ್ತಿಗೆ ಚೂರಿ ಇರಿತ ಪ್ರಕರಣ – ಮೂವರ ಬಂಧನ!

shimog news | ಶಿವಮೊಗ್ಗ : ಮೊಬೈಲ್ ಶಾಪ್ ನಲ್ಲಿ ವ್ಯಕ್ತಿಗೆ ಚೂರಿ ಇರಿತ ಪ್ರಕರಣ – ಮೂವರ ಬಂಧನ!

ಶಿವಮೊಗ್ಗ (shivamogga), ಡಿಸೆಂಬರ್ 22: ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬಿ ಹೆಚ್ ರಸ್ತೆಯ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರಿಗೆ ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಮೊಹಮ್ಮದ್ ಶಾಬಾಜ್ (22), ಆಕಾಶ್ (20) ಹಾಗೂ ದಾದಾಪೀರ್ ಬಂಧಿತ ಆರೋಪಿಗಳಾಗಿದ್ದಾರೆ. ಇದರಲ್ಲಿ ದಾದಾಪೀರ್ ಮೊದಲಿಬ್ಬರು ಆರೋಪಿಗಳಿಗೆ ಚಾಕು ನೀಡಿದ್ದ.

ಎಸ್ಎಎಸ್ ಕಲೆಕ್ಷನ್ ಮೊಬೈಲ್ ಶಾಪ್ ನಲ್ಲಿದ್ದ ಸೈಯದ್ ಬರ್ಕತ್ (32) ಎಂಬುವರಿಗೆ ಇಬ್ಬರು ಆರೋಪಿಗಳು ಚಾಕುವಿನಿಂದ ಇರಿದಿದ್ದರು. ಸೈಯದ್ ಬರ್ಕತ್ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈಯಕ್ತಿಕ ವೈಷಮ್ಯದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ. ಗಾಯಾಳು ಹಾಗೂ ಆರೋಪಿಗಳು ಪರಸ್ಪರ ಪರಿಚಯದವರಾಗಿದ್ದಾರೆ ಎಂದು ಎಸ್ಪಿ ಅವರು ಡಿಸೆಂಬರ್ 22 ರಾತ್ರಿ ವ್ಯಾಟ್ಸಾಪ್ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

Three accused have been arrested in connection with the stabbing of a man working at a mobile shop on BH Road under the jurisdiction of Doddapet police station in Shivamogga.

Shivamogga: A married young man who left home mysteriously disappears! ಶಿವಮೊಗ್ಗ : ಮನೆಯಿಂದ ಹೊರ ತೆರಳಿದ ವಿವಾಹಿತ ಯುವಕ ನಿಗೂಢ ಕಣ್ಮರೆ! Previous post shimoga news | ಶಿವಮೊಗ್ಗ : ಮನೆಯಿಂದ ಹೊರ ತೆರಳಿದ ವಿವಾಹಿತ ಯುವಕ ನಿಗೂಢ ಕಣ್ಮರೆ!