Lokayukta team conducts surprise inspection at Shivamogga Municipal Corporation office! ಶಿವಮೊಗ್ಗ ಪಾಲಿಕೆ ಕಚೇರಿಯಲ್ಲಿ ಲೋಕಾಯುಕ್ತ ತಂಡದಿಂದ ದಿಡೀರ್ ತಪಾಸಣೆ!

shimoga palike news | ಶಿವಮೊಗ್ಗ ನಗರದ ಬೀದಿ ಬದಿ ವ್ಯಾಪಾರಸ್ಥರಿಗೆ ಪಾಲಿಕೆ ಎಚ್ಚರಿಕೆಯೇನು?

ಶಿವಮೊಗ್ಗ (shivamogga), ಜನವರಿ 04: ಶಿವಮೊಗ್ಗ ಪಾಲಿಕೆ ವ್ಯಾಪ್ತಿಯ ರಸ್ತೆ, ಫುಟ್ ಪಾತ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಷ್ಕ್ರೀಯ ಹಾಗೂ ಅನುಪಯುಕ್ತ ಸ್ಥಿತಿಯಲ್ಲಿರುವ, ಬೀದಿ ಬದಿ ವ್ಯಾಪಾರಿಗಳಿಗೆ ಸೇರಿದ ಪರಿಕರಗಳನ್ನು ವಶಕ್ಕೆ ಪಡೆಯುವುದಾಗಿ ಪಾಲಿಕೆ ಆಡಳಿತ ಎಚ್ಚರಿಕೆ ನೀಡಿದೆ.

ವಿವಿಧೆಡೆ ಬೀದಿ ಬದಿ ವ್ಯಾಪಾರಿಗಳಿಗೆ ಸೇರಿದ ಕೈಗಾಡಿಗಳು, ಕಬ್ಬಿನ ಹಾಲಿನ ಗಾಡಿಗಳು, ಐಸ್ ಕ್ರೀಂ ಗಾಡಿ ಸೇರಿದಂತೆ ಮಾರಾಟ ಪರಿಕರಗಳು ಹಾಗೂ ತಾತ್ಕಾಲಿಕ ಶೆಡ್‌ಗಳು ನಿಷ್ಕ್ರೀಯ – ಅನುಪಯುಕ್ತ ಸ್ಥಿತಿಯಲ್ಲಿ ಮತ್ತು ಅನಧಿಕೃತವಾಗಿ ಬಿಟ್ಟಿರುವುದು ಕಂಡು ಬಂದಿದೆ.

ಸದರಿ ಸಾರ್ವಜನಿಕ ಪ್ರಕಟಣೆಯ 15 ದಿನದ ಒಳಗೆ ಸಂಬಂಧಿಸಿದವರು, ಕೂಡಲೇ ತಮ್ಮ ಅನುಪಯುಕ್ತ, ನಿಷ್ಕ್ರಿಯ ಅಥವಾ ವ್ಯಾಪಾರ ಮುಗಿದ ನಂತರ ಅಲ್ಲೇ ಬಿಟ್ಟಿರುವ ಗಾಡಿ ಇತ್ಯಾದಿ ಪರಿಕರಗಳನ್ನು ತೆರವುಗೊಳಿಸಬೇಕು.

ತಪ್ಪಿದಲ್ಲಿ ಪೋಲೀಸ್ ಇಲಾಖೆ ಸಹಯೋಗದೊಂದಿಗೆ ಪಾಲಿಕೆ ವತಿಯಿಂದ ಈ ಸಾಮಗ್ರಿಗಳನ್ನು ವಶಪಡಿಸಿಕೊಂಡು ‘ಸ್ಕ್ರಾಪ್’ ಮಾಡಲಾಗುವುದು. ಹಾಗೆಯೇ ಸಂಬಂಧಿಸಿದವರ ಮೇಲೆ ದಂಡ ವಿಧಿಸಿ, ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತರು ಜನವರಿ 3 ರಂದು ಬಿಡುಗಡೆ ಮಾಡಿದ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The Shivamogga Municipal Corporation administration has warned that it will seize equipment belonging to street vendors that are lying idle and unusable on various roads, footpaths and public places within the jurisdiction of the Shivamogga Municipal Corporation.

In various places, street vendors’ handcarts, sugarcane milk carts, ice cream carts, and other sales equipment, as well as temporary sheds, have been found abandoned in an inactive, useless state and illegally.

Shivamogga: 8-foot-long lake snake found in Andi..! ಶಿವಮೊಗ್ಗ : ಅಂಗಡಿಯಲ್ಲಿ ಅಡಗಿದ್ದ 8 ಅಡಿ ಉದ್ದದ ಕೆರೆ ಹಾವು..! Previous post shimoga news | ಶಿವಮೊಗ್ಗ : ಅಂಗಡಿಯಲ್ಲಿ ಅಡಗಿದ್ದ 8 ಅಡಿ ಉದ್ದದ ಕೆರೆ ಹಾವು..!
Shivamogga: Power outages in various places on January 10th! ಶಿವಮೊಗ್ಗ : ಜನವರಿ 10 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Next post shimoga news | ಶಿವಮೊಗ್ಗ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ : ಯಾವಾಗ? ಎಲ್ಲೆಲ್ಲಿ?