shimoga dc | ಅಪಘಾತದಲ್ಲಿ ಗಾಯಗೊಂಡ ಗಾಯಾಳುವಿಗೆ ನೆರವಾದ ಶಿವಮೊಗ್ಗ ಡಿಸಿ!

Shimoga DC helps accident victim! ಅಪಘಾತದಲ್ಲಿ ಗಾಯಗೊಂಡ ಗಾಯಾಳುವಿಗೆ ನೆರವಾದ ಶಿವಮೊಗ್ಗ ಡಿಸಿ!

ಸೊರಬ (sorab), ಫೆಬ್ರವರಿ 04: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳು ಓರ್ವರಿಗೆ, ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಆಸ್ಪತ್ರೆಗೆ ದಾಖಲಿಸಲು ನೆರವಾದ ಘಟನೆ, ಫೆಬ್ರವರಿ 04 ರಂದು ಶಿವಮೊಗ್ಗ ಜಿಲ್ಲೆಯ ಸಾಗರ – ಸೊರಬ ನಡುವಿನ ರಸ್ತೆಯಲ್ಲಿ ನಡೆದಿದೆ.

ಪೂರ್ವ ನಿರ್ಧರಿತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬುಧವಾರ ಜಿಲ್ಲಾಧಿಕಾರಿಗಳು, ಶಿವಮೊಗ್ಗ ನಗರದಿಂದ ಸಾಗರದ ಮಾರ್ಗವಾಗಿ ಸೊರಬ ತಾಲೂಕಿಗೆ ಸರ್ಕಾರಿ ಕಾರಿನಲ್ಲಿ ತೆರಳುತ್ತಿದ್ದರು.

ಈ ವೇಳೆ ಸಾಗರ – ಸೊರಬ ನಡುವಿನ ರಸ್ತೆಯಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತವಾಗಿತ್ತು. ಅವಘಡದಲ್ಲಿ ವ್ಯಕ್ತಿಯೋರ್ವರು ಗಾಯಗೊಂಡಿದ್ದರು.

ಇದನ್ನು ಗಮನಿಸಿದ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಅವರು ತಕ್ಷಣವೇ ತಮ್ಮ ಕಾರನ್ನು ನಿಲ್ಲಿಸಿ, ಗಾಯಾಳುವಿನ ನೆರವಿಗೆ ಧಾವಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗು ಮೂಲಕ ಕರ್ತವ್ಯ ಪ್ರಜ್ಞೆಯ ಜೊತೆಗೆ ಮಾನವೀಯತೆ ಮೆರೆದಿದ್ದಾರೆ. ಡಿಸಿ ಅವರ ಸಕಾಲಿಕ ನೆರವಿನಹಸ್ತವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Shimoga DC helps accident victim!

Soraba, February 04: An incident took place in Soraba taluk of Shimoga district on February 04, where Shimoga Deputy Commissioner Prabhuling Kavalikatti helped an accident victim get admitted to the hospital.

On Wednesday, the Deputy Commissioner was traveling in a government vehicle from Shimoga city towards Soraba via Sagara to attend a pre-scheduled program.

During this journey, a car and a bike collided on the Sagara–Soraba road, leaving one person injured.

Seeing this, DC Prabhuling Kavalikatti immediately stopped his car and rushed to the aid of the injured person. By helping to admit the victim to the hospital, he demonstrated not only a sense of duty but also humanity. The timely assistance extended by the DC has won public appreciation.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →