ಬೆಂಗಳೂರಲ್ಲಿ ಪದವಿ ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!
ಬೆಂಗಳೂರು (bengaluru), ಆ. 18: ಕೊಲ್ಕತ್ತಾ ವೈದ್ಯ ಕಾಲೇಜ್ ವಿದ್ಯಾರ್ಥಿನಿ (kolkata doctor case) ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಇಡೀ ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ನಡುವೆ ಬೆಂಗಳೂರಿನಲ್ಲಿ (bengaluru), ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದೆ.
ಶನಿವಾರ ತಡರಾತ್ರಿ ಘಟನೆ ನಡೆದಿದೆ. ಸಂತ್ರಸ್ತ ವಿದ್ಯಾರ್ಥಿನಿಯು ಹೊರ ರಾಜ್ಯದ ನಿವಾಸಿಯಾಗಿದ್ದು, ಬೆಂಗಳೂರಿನ ಖಾಸಗಿ ಕಾಲೇಜ್ (college) ವೊಂದರಲ್ಲಿ ಅಂತಿಮ ಪದವಿ (final year degree) ಅಭ್ಯಾಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಲೈಂಗಿಕ ದೌರ್ಜನ್ಯದಿಂದ (sexually assaulted) ಅಸ್ವಸ್ಥಗೊಂಡಿರುವ ಯುವತಿಯನ್ನು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಈ ಸಂಬಂಧ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ (police station) ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರಕರಣದ ಹಿನ್ನಲೆ : ಸಂತ್ರಸ್ತ ಯುವತಿಯು ರಾತ್ರಿ ಕೋರಮಂಗಲದ ಪಬ್ (koramangala pub) ವೊಂದರಲ್ಲಿ ಸ್ನೇಹಿತರ ಜೊತೆ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದಳು. ತಡರಾತ್ರಿ ಪಾರ್ಟಿ ಮುಗಿಸಿದ ನಂತರ, ಅಪರಿಚಿತ ದ್ವಿಚಕ್ರ ವಾಹನ ಚಾಲಕನ ಮೂಲಕ ಮನೆಯತ್ತ ಲಿಫ್ಟ್ ಪಡೆದುಕೊಂಡಿದ್ದಳು.
ಈ ವೇಳೆ ಯುವತಿಯು ಮದ್ಯದ ನಶೆಯಲ್ಲಿದ್ದಳು ಎನ್ನಲಾಗಿದೆ. ಬೈಕ್ ಚಾಲಕನು ಯುವತಿಯನ್ನು ಗೋಡೌನ್ ವೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ (rape) ಎಸಗಿದ್ದಾನೆ ಎಂದು ಹೇಳಲಾಗಿದೆ. ನಂತರ ಅರೆಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾನೆ.
ಯುವತಿಯನ್ನು ಹೆಬ್ಬುಗೋಡಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಗೃಹ ಸಚಿವರ ಹೇಳಿಕೆ : ಈ ಕುರಿತಂತೆ ಭಾನುವಾರ ಗೃಹ ಸಚಿವ (home minister) ಪರಮೇಶ್ವರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರ ಯತ್ನ ನಡೆದಿದೆ. ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಕಾನೂನು ರೀತ್ಯ ಪೊಲೀಸರು ಕ್ರಮ ಜರುಗಿಸಲಾಗಿದ್ಧಾರೆ ಎಂದು ತಿಳಿಸಿದ್ದಾರೆ.
ತಂಡ ರಚನೆ : ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಪತ್ತೆಗೆ, ಪೊಲೀಸರು (police) ವ್ಯಾಪಕ ಶೋಧ ಕಾರ್ಯ ನಡೆಸಲಾರಂಭಿಸಿದ್ದಾರೆ. ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಬಿರುಸುಗೊಂಡಿದೆ.
