
shimoga | ಶಿವಮೊಗ್ಗ – ಉಕ್ಕಿ ಹರಿದ ಕೆರೆಗಳು : ಜಲಾವೃತವಾದ ಬಡಾವಣೆ ; ಗಮನಹರಿಸುವುದೆ ಜಿಲ್ಲಾಡಳಿತ?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಆ. 19: ಭಾರೀ ಮಳೆಯಿಂದ (heavy rainfall) ಕೆರೆಗಳು ಉಕ್ಕಿ ಹರಿದ ಪರಿಣಾಮ, ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪ ಕೆ.ಹೆಚ್.ಬಿ ಪ್ರೆಸ್ ಕಾಲೋನಿಯು (sominakoppa khb press colony) ಆಗಸ್ಟ್ 19 ರ ಸೋಮವಾರ ಸಂಜೆ ಜಲಾವೃತವಾದ (flooded) ಘಟನೆ ನಡೆದಿದೆ.
ಸೋಮವಾರ ಮಧ್ಯಾಹ್ನ ಬಿದ್ದ ಭಾರೀ ಮಳೆಗೆ (rain), ಬಸವನಗಂಗೂರು (basavanaganguru) ಹಾಗೂ ಗೆಜ್ಜೇನಹಳ್ಳಿ (gejjenahalli) ಗ್ರಾಮದ ಎರಡು ಕೆರೆಗಳು (lakes) ಉಕ್ಕಿ ಹರಿಯಲಾರಂಭಿಸಿವೆ. ಏರಿಯ ಮಟ್ಟಕ್ಕೆ ನೀರು ಬಂದಿದೆ.
ಎರಡು ಕೆರೆಗಳಿಂದ ಭಾರೀ ಪ್ರಮಾಣದ ನೀರು (outflow) ಹೊರಬರುತ್ತಿರುವುದು ಹಾಗೂ ಅವ್ಯವಸ್ಥಿತ ಕೆರೆ ಕಾಲುವೆಯಿಂದ, ತಗ್ಗು ಪ್ರದೇಶದಲ್ಲಿರುವ (low lying area) ಕೆ.ಹೆಚ್.ಬಿ ಕಾಲೋನಿಗೆ ಭಾರೀ ಪ್ರಮಾಣದ ನೀರು ಬರುತ್ತಿದೆ. ಬಡಾವಣೆಯ ರಸ್ತೆಗಳು ಜಲಾವೃತವಾಗಿವೆ. ಕೆಲ ಮನೆಗಳಿಗೂ ನೀರು ನುಗ್ಗಿದೆ.
‘ಈಗಾಗಲೇ ಮಹಾನಗರ ಪಾಲಿಕೆ (corporation) ಆಡಳಿತವು ಬಡಾವಣೆಯ ಒಂದು ಬದಿಯಲ್ಲಿ ಮಳೆ ನೀರು ಹರಿದು ಹೋಗಲು ರಾಜಕಾಲುವೆ (rajakaluve) ನಿರ್ಮಾಣ ಮಾಡಿದೆ. ಆದರೆ ಕೆರೆಯಿಂದ ಕಾಲೋನಿಯವರೆಗೆ ಕೆರೆ ಕಾಲುವೆಯು ಕಿರಿದಾಗಿದೆ.
ಭಾರೀ ಪ್ರಮಾಣದ ಕೆರೆ ನೀರು ಹರಿದು ಬಂದ ವೇಳೆ ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಬಡಾವಣೆಯ ಎಲ್ಲೆಂದರಲ್ಲಿ ನುಗ್ಗುತ್ತಿದೆ. ಈ ನಿಟ್ಟಿನಲ್ಲಿ ಪಾಲಿಕೆ ಆಡಳಿತ, ಸಣ್ಣ ನೀರಾವರಿ ಇಲಾಖೆ (minor irrigation department) ಹಾಗೂ ಜಿಲ್ಲಾ ಪಂಚಾಯ್ತಿ (zilla panchayat) ಆಡಳಿತ ಅಗತ್ಯ ಗಮನಹರಿಸಬೇಕಾಗಿದೆ’ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಪ್ರಸ್ತುತ ಹಲವೆಡೆ ಚರಂಡಿಗಳಲ್ಲಿ ಕಸಕಡ್ಡಿ ತುಂಬಿಕೊಂಡು ಸರಾಗವಾಗಿ ಮಳೆ ನೀರು ಹರಿದು ಹೋಗುತ್ತಿಲ್ಲ. ತಕ್ಷಣವೇ ಆಡಳಿತ ತುರ್ತು ಪರಿಹಾರಕ ಕ್ರಮಕೈಗೊಳ್ಳಬೇಕು. ಶಾಶ್ವತವಾಗಿ ಜಲಾವೃತ ಸಮಸ್ಯೆ ಪರಿಹರಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಹೋರಾಟದ ಎಚ್ಚರಿಕೆ : ಬಡಾವಣೆಯಲ್ಲಿನ ಜಲಾವೃತ ಸಮಸ್ಯೆ ಪರಿಹಾರವಾಗದಿದ್ದರೆ ಮುಂದಿನ ದಿನಗಳಂದು ಬೀದಿಗಿಳಿದು ಹೋರಾಟ ನಡೆಸಲಾಗುವುದು. ಜೊತೆಗೆ ಮುಖ್ಯಮಂತ್ರಿಗಳನ್ನು (chief minister) ಭೇಟಿಯಾಗಿ ಮನವಿ ನೀಡಲಾಗುವುದು ಎಂದು ಸ್ಥಳೀಯ ನಿವಾಸಿಗಳು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.