
shimoga | ಶಿವಮೊಗ್ಗ ವಿಮಾನ ನಿಲ್ದಾಣ : ಕೇಂದ್ರ ಸಚಿವರಿಗೆ ಸಂಸದ ಬಿ.ವೈ.ರಾಘವೇಂದ್ರ ಸಲ್ಲಿಸಿದ ಮನವಿಯೇನು?
ಶಿವಮೊಗ್ಗ (shivamogga), ಸೆ. 5: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂಧನ ಫಾರ್ಮ್ (airport fuel farm) ಸ್ಥಾಪನೆ ಮಾಡಲು ಕ್ರಮಕೈಗೊಳ್ಳುವಂತೆ, ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದಿಪ್ ಸಿಂಗ್ ಪುರಿ ಅವರಿಗೆ ಸೆ. 5 ರ ಗುರುವಾರ ದೆಹಲಿಯಲ್ಲಿ ಸಂಸದ ಬಿ.ವೈ.ರಾಘವೇವಂದ್ರ ಮನವಿ ಪತ್ರ ಅರ್ಪಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣ (shimoga airport) ದಲ್ಲಿ ಇಂಧನ ಫಾರ್ಮ್ ಸ್ಥಾಪನೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ಇಂಧನ ಫಾರ್ಮ್ ಸ್ಥಾಪನೆಯಾದರೆ, ವಿಮಾನಯಾನ ಸಂಸ್ಥೆಗಳಿಗೆ ವಿಮಾನಗಳ ಇಂಧನ (aeroplane fuel) ಭರ್ತಿಗೆ ತಗಲುವ ಕಾರ್ಯಾಚರಣೆಯ ವೆಚ್ಚ ಕಡಿಮೆಯಾಗಲಿದೆ. ಇದರಿಂದ ಪ್ರಯಾಣಿಕರ ಪ್ರಯಾಣ ವೆಚ್ಚದಲ್ಲಿಯೂ ಇಳಿಕೆಯಾಗಲಿದೆ.
ಈಗಾಗಲೇ ಶಿವಮೊಗ್ಗ ವಿಮಾನ ನಿಲ್ದಾಣ (airport) ನಿರ್ವಹಣೆ ಮಾಡುತ್ತಿರುವ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮವು (kssidcl), ಐಓಸಿಎಲ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇಂಧನ ಫಾರ್ಮ್ (fuel farm) ಮಂಜೂರು ಮಾಡುವಂತೆ ಕೋರಿ ಸಲ್ಲಿಸಿರುವ ಪ್ರಸ್ತಾವನೆಯು, ಐಓಸಿಎಲ್ ಅಧ್ಯಕ್ಷರ ಬಳಿ ಅನುಮತಿಗೆ ಬಾಕಿಯಿದೆ. ಶೀಘ್ರಗತಿಯಲ್ಲಿ ಅನುಮತಿ ದೊರಕಿಸಿಕೊಡಬೇಕು ಎಂದು ಸಂಸದರು ಸಚಿವರಿಗೆ ಮನವಿ ಮಾಡಿದ್ದಾರೆ.
ಸಂಸದರ ಮನವಿ ಆಲಿಸಿದ ಕೇಂದ್ರ ಸಚಿವರು, ಈ ಸಂಬಂಧ ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಮಾತನಾಡಿ ಕಾಲಮಿತಿಯೊಳಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ಅನುಕೂಲ : ಶಿವಮೊಗ್ಗ ವಿಮಾನ ನಿಲ್ದಾಣ (shimoga airport ) ದಲ್ಲಿ ಇಂಧನ ಫಾರ್ಮ್ ಆರಂಭವಾದರೆ, ವಿಮಾನಗಳಿಗೆ ಅಗತ್ಯ ಇಂಧನ ಲಭ್ಯತೆ ಸುಲಭವಾಗಲಿದೆ. ಇದರಿಂದ ಪ್ರಯಾಣದ ವೆಚ್ಚ ಕೂಡ ಕಡಿಮೆಯಾಗಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (mp b y raghavendra) ತಿಳಿಸಿದ್ದಾರೆ.