Shimoga : Punugu cat that has aroused curiosity among the citizens?! ಶಿವಮೊಗ್ಗ : ನಾಗರೀಕರಲ್ಲಿ ಕುತೂಹಲ ಮೂಡಿಸಿದ ಪುನುಗು ಬೆಕ್ಕು?!

shimoga | ಶಿವಮೊಗ್ಗ : ನಾಗರೀಕರಲ್ಲಿ ಕುತೂಹಲ ಮೂಡಿಸಿದ ಪುನುಗು ಬೆಕ್ಕು?!

ಶಿವಮೊಗ್ಗ (shivamogga), ಸೆ. 9: ಶಿವಮೊಗ್ಗ ನಗರದ ವಾದಿ ಎ ಹುದಾ ಬಡಾವಣೆ (shimoga wadi e huda extension) ಯ 2 ನೇ ಮೇನ್ ರಸ್ತೆಯ ಮರವೊಂದರಲ್ಲಿ, ಅಪರೂಪದ ಪುನುಗು ಬೆಕ್ಕು (Punugu cat) ಮಾದರಿಯ ಪ್ರಾಣಿಯೊಂದು ಭಾನುವಾರ ಕಾಣಿಸಿಕೊಂಡಿದೆ.

ಸದರಿ ಪ್ರಾಣಿ ಹಾಗೂ ಅದರ ಮರಿಗಳು, ರಸ್ತೆ ಪಕ್ಕದ ಮರವೊಂದರ ಮೇಲೆ ಬೀಡುಬಿಟ್ಟಿವೆ. ಸುತ್ತಮುತ್ತ ಓಡಾಡುತ್ತಿರುವುದು ಕಂಡುಬರುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಅಪರೂಪದ ಪ್ರಾಣಿಯ ಬಗ್ಗೆ ಸಮರ್ಪಕ ಮಾಹಿತಿಯಿಲ್ಲದೆ ನಾಗರೀಕರು ಗೊಂದಲಕ್ಕೆ ಒಳಗಾಗುವಂತಾಗಿದೆ. ಸದರಿ ಪ್ರಾಣಿಯ ವೀಡಿಯೋವೊಂದನ್ನು ಸ್ಥಳೀಯರು ಸೋಶಿಯಲ್ ಮೀಡಿಯಾ (social media) ದಲ್ಲಿ ಅಪ್’ಲೋಡ್ ಮಾಡಿದ್ದಾರೆ. ಸಂರಕ್ಷಣೆಗೆ ಮನವಿ ಮಾಡಿಕೊಂಡಿದ್ದಾರೆ.

ಸದರಿ ಪ್ರಾಣಿಯು ಪುನುಗು ಬೆಕ್ಕು (punugu cat) ಆಗಿದೆ ಎಂದು ಕೆಲ ನಾಗರೀಕರು ಅಭಿಪ್ರಾಯಪಟ್ಟಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ (forest department) ಯು ಸದರಿ ಪುನುಗು ಬೆಕ್ಕು ಮಾದರಿ ಪ್ರಾಣಿಯ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ನಾಗರೀಕರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

bengaluru : bhadravati leaders joined Congress in the presence of Siddaramaiah! ಬೆಂಗಳೂರು : ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಭದ್ರಾವತಿ ಮುಖಂಡರು! Previous post bengaluru | ಬೆಂಗಳೂರು : ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಭದ್ರಾವತಿ ಮುಖಂಡರು!
Shivamogga: The body of an unidentified woman was found near a bar! ಶಿವಮೊಗ್ಗ : ಬಾರ್ ಸಮೀಪ ಅಪರಿಚಿತ ಮೃತ ಮಹಿಳೆಯ ಮೃತದೇಹ ಪತ್ತೆ! Next post  shimoga | ಶಿವಮೊಗ್ಗ : ಒಳ ಚರಂಡಿಯಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ!