Shimoga : The body of an anonymous man was found in the channel water! ಶಿವಮೊಗ್ಗ : ಚಾನಲ್ ನೀರಿನಲ್ಲಿ ಅನಾಮಧೇಯ ಪುರುಷನ ಶವ ಪತ್ತೆ!

shimoga | ಶಿವಮೊಗ್ಗ : ಅಪರಿಚಿತ ಯುವಕ ಸಾವು – ಕೈ ಮೇಲಿದೆ ‘ದಿವ್ಯಾ’ ಹೆಸರಿನ ಹಚ್ಚೆ!

ಶಿವಮೊಗ್ಗ (shivamogga), ಸೆ. 12: ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ (shimoga private bus stand) ದ ಬಳಿ ಸುಸ್ತಾಗಿ ಮಲಗಿದ್ದ, ಸುಮಾರು 25 ರಿಂದ 30 ವರ್ಷ ವಯಸ್ಸಿನ ಅಪರಿಚಿತ ಯುವಕ (unknown young man) ನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ (govt meggan hospital) ಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೆ.07 ರಂದು ಮೃತಪಟ್ಟಿರುತ್ತಾನೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಈ ಸಂಬಂಧ ಪೊಲೀಸ್ ಇಲಾಖೆ (police department) ಯು ಗುರುವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಮೃತ ವ್ಯಕ್ತಿಯು ಆಸ್ಪತ್ರೆಗೆ ದಾಖಲಾದ ವೇಳೆ ತನ್ನ ಹೆಸರು ಮನೋಜ್ ಎಂದು ತಿಳಿಸಿರುತ್ತಾನೆ. ಮೃತನು ಸುಮಾರು 5.10 ಅಡಿ ಎತ್ತರ, ಕೋಲುಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ಬಲಗೈ ಮೇಲೆ ‘ದಿವ್ಯಾ’ ಎಂಬ ಹಚ್ಚೆ (tattoo) ಗುರುತಿದೆ.

3 ಇಂಚು ಉದ್ದದ ಕಪ್ಪು ಕೂದಲು ಮತ್ತು 2 ಇಂಚು ಉದ್ದ ಕಪ್ಪು ಗಡ್ಡ, ಮೀಸೆ ಬಿಟ್ಟಿದ್ದಾನೆ. ನೀಲಿ ಬಣ್ಣದ ಬಿಳಿ ಚುಕ್ಕೆಗಳಿರುವ ತುಂಬು ತೋಳಿನ ಶರ್ಟ್, ಕಪ್ಪು ಮತ್ತು ಬಿಳಿ ಬಣ್ಣದ ತುಂಬು ತೋಳಿನ ಟೀ ಶರ್ಟ್ ಮತ್ತು ಕಂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.

ಸದರಿ ವ್ಯಕ್ತಿಯ ವಾರಸುದಾರರು ಯಾರದರು ಇದ್ದಲ್ಲಿ ದೊಡ್ಡಪೇಟೆ ಪೋಲಿಸ್ ಠಾಣೆ (doddapete police station) ದೂ.ಸಂ. 08182 261414 ಅಥವಾ ಮೊ.ನಂ. 99168-82544 ನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

bhadravati | Which routes of Bhadravati taluk will the huge human chain pass through? ಭದ್ರಾವತಿ ತಾಲೂಕಿನ ಯಾವ್ಯಾವ ಮಾರ್ಗಗಳಲ್ಲಿ ಹಾದು ಹೋಗಲಿದೆ ಬೃಹತ್ ಮಾನವ ಸರಪಳಿ? Previous post bhadravati | ಭದ್ರಾವತಿ ತಾಲೂಕಿನ ಯಾವ್ಯಾವ ಮಾರ್ಗಗಳಲ್ಲಿ ಹಾದು ಹೋಗಲಿದೆ ಬೃಹತ್ ಮಾನವ ಸರಪಳಿ?
thirthahalli | Theerthahalli: A rare Garuda style beheading memorial sculpture found in Araga! ಅಪರೂಪದ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆ! ಹಂಪಿಯ ಪುರಾತತ್ವ ಇಲಾಖೆ ನಿರ್ದೇಶಕ ಡಾ.ಆರ್.ಶೇಜೇಶ್ವರ ತಂಡದ ಸಂಶೋಧನೆ ವರದಿ : ಬಿ. ರೇಣುಕೇಶ್ Next post thirthahalli | ತೀರ್ಥಹಳ್ಳಿ : ಆರಗದಲ್ಲಿ ಅಪರೂಪದ ಗರುಡ ಪದ್ಧತಿಯ ಶಿರ ಛೇದನ ಸ್ಮಾರಕ ಶಿಲ್ಪ ಪತ್ತೆ!