bengaluru | Boy dies after eating Tangaluta cake kept in the fridge: couple sick - admitted to hospital! ಬೆಂಗಳೂರು : ಫ್ರಿಜ್ ನಲ್ಲಿದ್ದ ತಂಗಳೂಟ ಕೇಕ್ ಸೇವಿಸಿ ಬಾಲಕ ಸಾವು : ದಂಪತಿ ಅಸ್ವಸ್ಥ – ಆಸ್ಪತ್ರೆಗೆ ದಾಖಲು!

bengaluru | ಬೆಂಗಳೂರು : ಫ್ರಿಜ್ ನಲ್ಲಿದ್ದ ತಂಗಳೂಟ, ಕೇಕ್ ಸೇವಿಸಿ ಬಾಲಕ ಸಾವು : ದಂಪತಿ ಅಸ್ವಸ್ಥ – ಆಸ್ಪತ್ರೆಗೆ ದಾಖಲು!

ಬೆಂಗಳೂರು (bengaluru), ಅ. 8: ಫ್ರಿಜ್ ನಲ್ಲಿಟ್ಟಿದ್ದ ತಂಗಳೂಟು ಹಾಗೂ ಕೇಕ್ ಸೇವಿಸಿದ್ದ ಬಾಲಕ ಮೃತಪಟ್ಟು, ದಂಪತಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬೆಂಗಳೂರಿನ ಭುವನೇಶ್ವರಿ ನಗರದಲ್ಲಿ ನಡೆದಿದೆ.

ಧೀರಜ್ (5) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಬಾಲಕನ ತಂದೆ ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮೀ ಅಸ್ವಸ್ಥಗೊಂಡಿದ್ದು, ಖಾಸಗಿ ಆಸ್ಪತ್ರೆಯ ತೀವ್ರ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬಾಲರಾಜ್ ಅವರು ಫುಡ್ ಡೆಲಿವರಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಪಿತೃ ಪಕ್ಷ ಪೂಜೆ ನಡೆಸಿದ್ದು, ಉಳಿದಿದ್ದ ಆಹಾರವನ್ನು ಫ್ರಿಜ್ ನಲ್ಲಿಟ್ಟಿದ್ದರು. ಹಾಗೆಯೇ ಗ್ರಾಹಕರಿಂದ ಆರ್ಡರ್ ಆಗಿ ರದ್ದಾಗಿದ್ದ ಕೇಕ್ ನ್ನು ಸಹ ಬಾಲರಾಜ್ ಮನೆಗೆ ತಂದು ಫ್ರಿಜ್ ನಲ್ಲಿರಿಸಿದ್ದರು.

ಕಳೆದ ಭಾನುವಾರ ರಾತ್ರಿ ಮೂವರು ಫ್ರಿಜ್ ನಲ್ಲಿಟ್ಟಿದ್ದ ಆಹಾರ ಹಾಗೂ ಕೇಕ್ ಸೇವಿಸಿ ಮಲಗಿದ್ದರು. ಸೋಮವಾರ ಮುಂಜಾನೆ ಮೂವರಿಗೂ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಮೂವರನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದಾನೆ ಎಂದು ವರದಿಗಳು ಹೇಳಿವೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

CM instructs to fill 34863 vacancies within time limit 34863 ಖಾಲಿ ಹುದ್ದೆಗಳನ್ನು ಕಾಲಮಿತಿಯಲ್ಲಿ ಭರ್ತಿಗೆ ಸಿಎಂ ಸೂಚನೆ Previous post job news | 34,863 ಖಾಲಿ ಹುದ್ದೆಗಳ ಭರ್ತಿಗೆ ಸಿಎಂ ಸೂಚನೆ
thirthahalli : The fire brigade saved the woman who fell into the well! ತೀರ್ಥಹಳ್ಳಿ : ಬಾವಿಗೆ ಬಿದ್ದಿದ್ದ ಮಹಿಳೆಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ! Next post thirthahalli | ತೀರ್ಥಹಳ್ಳಿ : ಬಾವಿಗೆ ಬಿದ್ದಿದ್ದ ಮಹಿಳೆಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ!