
thirthahalli | ತೀರ್ಥಹಳ್ಳಿ : ಬಾವಿಗೆ ಬಿದ್ದಿದ್ದ ಮಹಿಳೆಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ!
ತೀರ್ಥಹಳ್ಳಿ (thirthahalli), ಅ. 8: ಬಾವಿಗೆ ಬಿದ್ದಿದ್ದ ಮಹಿಳೆಯೋರ್ವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಸಮೀಪ ಅ. 7 ರ ಸೋಮವಾರ ನಡೆದಿದೆ.
ಕುಡುಮಲ್ಲಿಗೆ ಸಮೀಪದ ನಿವಾಸಿಯಾದ 58 ವರ್ಷ ವಯೋಮಾನದ ಮಹಿಳೆಯೇ, ಬಾವಿಗೆ ಬಿದ್ದವರೆಂದು ಗುರುತಿಸಲಾಗಿದೆ. ಇಂದಿರಾನಗರದ ಚೌಡಿಕಟ್ಟೆ ಸಮೀಪದ ಬಾವಿಗೆ ಮಧ್ಯಾಹ್ನದ ವೇಳೆ ಮಹಿಳೆಯು ಆಕಸ್ಮಿಕವಾಗಿ ಬಿದ್ದಿದ್ದರು. ಬಾವಿಯಲ್ಲಿದ್ದಂತ ಗಿಡದ ಬೇರುಗಳನ್ನಿಡಿದು ಕುಳಿತ್ತಿದ್ದರು.
ಸಂಜೆ ವೇಳೆ ಮಹಿಳೆಯೋರ್ವರು ಬಾವಿಯಲ್ಲಿ ಬಿದ್ದಿರುವ ಸಂಗತಿ ಸಾರ್ವಜನಿಕರಿಗೆ ಗೊತ್ತಾಗಿದೆ. ಈ ಸಂಬಂಧ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದರು.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ತಂಡ ಸ್ಥಳೀಯರ ನೆರವಿನೊಂದಿಗೆ ಬಾವಿಯಿಂದ ಮಹಿಳೆಯನ್ನು ಮೇಲಕ್ಕೆತ್ತುವಲ್ಲಿ ಸಫಲವಾಗಿದೆ.
ಸದರಿ ಸಾಹಸ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಸಂತೋಷ್ ಶೆಟ್ಟಿ, ಸಿ ಪ್ರಶಾಂತ್ ಕುಮಾರ್, ಶರತ್ ಎಂ, ಶಶಿಕುಮಾರ್, ನಿಂಗಪ್ಪ ಇಟ್ಟಣ್ಣವರ್ ಭಾಗಿಯಾಗಿದ್ದರು.
The incident took place on Monday near Kudumallige in Tirthahalli taluk where fire brigade personnel rescued a woman who had fallen into a well. A 58-year-old woman, a resident of Kudumallige, has been identified as the person who fell into the well. The woman accidentally fell into a well near Chaudikatte in Indiranagar in the afternoon. she was sitting on the roots of a plant as if he were in a well.