
cricket news | ‘0’ ರನ್ ಗೆ 5 ಬ್ಯಾಟ್ಸ್’ಮನ್ ಗಳು ಔಟ್ – ಕಳಪೆ ದಾಖಲೆಗೆ ಸಾಕ್ಷಿಯಾದ ಭಾರತದ ಕ್ರಿಕೆಟ್ ತಂಡ!
ಬೆಂಗಳೂರು (bengaluru), ಅ. 17: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ – ನ್ಯೂಜಿಲೆಂಡ್ ತಂಡದ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಗುರುವಾರ, ಭಾರತದ 5 ಜನ ಬ್ಯಾಟ್ಸ್’ಮನ್ ಗಳು ‘0’ ರನ್ ಗೆ ಔಟ್ ಆಗಿದ್ದಾರೆ!
ಈ ಮೂಲಕ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿಯೇ, ಭಾರತ ಕ್ರಿಕೆಟ್ ತಂಡ ಕಳಪೆ ದಾಖಲೆಗೆ ಸಾಕ್ಷಿಯಾಗಿದೆ. ಅಂತಿಮವಾಗಿ ಕೇವಲ 46 ರನ್ ಗೆ ಭಾರತ ಆಲೌಟ್ ಆಗಿದೆ.
ತದನಂತರ ಬ್ಯಾಂಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ ತಂಡವು, 1 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿದೆ (4 ಗಂಟೆ ಮಾಹಿತಿಯಂತೆ).
ಶೂನ್ಯಕ್ಕೆ ಔಟ್ ಆದವರು : ವಿರಾಟ್ ಕೊಹ್ಲಿ 0, ಸರ್ಫರಾಜ್ ಖಾನ್ 0, ಕೆ.ಎಲ್.ರಾಹುಲ್ 0, ರವಿಚಂದ್ರನ್ ಅಶ್ವಿನ್ 0 ಹಾಗೂ ರವೀಂದ್ರ ಜಡೇಜಾ 0 ಗೆ ನಿರ್ಗಮಿಸಿದ್ದಾರೆ.
ಉಳಿದಂತೆ ಯಶಸ್ವಿ ಜೈಸ್ವಾಲ್ 13, ರೋಹಿತ್ ಶರ್ಮಾ 2, ರಿಷಬ್ ಪಂತ್ 20, ಕುಲದೀಪ್ ಯಾದವ್ 2, ಜಸ್ಪಿತ್ ಬುಮ್ರಾ 1 ಹಾಗೂ ಸಿರಾಜ್ ಅವರು ಔಟ್ ಆಗದೆ 4 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ 5 ವಿಕೆಟ್ ಹಾಗೂ ವಿಲ್ ಓ ರೂರ್ಕ್ 4 ವಿಕೆಟ್ ಸಂಪಾದಿಸಿದ್ದಾರೆ.
ದಾಖಲೆ : ಸ್ವದೇಶದಲ್ಲಿ ನಡೆದ ಪಂದ್ಯವೊಂದರಲ್ಲಿ ಭಾರತದ 7 ಟಾಪ್ ಬ್ಯಾಟರ್ ಗಳ ಪೈಕಿ 5 ಬ್ಯಾಟರ್ ಗಳು ಶೂನ್ಯಕ್ಕೆ ಔಟಾಗಿರುವುದು ಇದೇ ಮೊದಲು.1969 ರಿಂದೀಚೆಗೆ ಭಾರತ ತಂಡ ಇಂತಹ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿರಲಿಲ್ಲ.
In the first innings of the first Test match between India and New Zealand at the Chinnaswamy Stadium here on Thursday, 5 Indian batsmen were out for ‘0’ runs!