Kumbh Mela: Special train service between Shimoga and Banaras shimoga train to kumbamela | ಕುಂಭಮೇಳ : ಶಿವಮೊಗ್ಗ – ಬನಾರಸ್ ನಡುವೆ ವಿಶೇಷ ರೈಲು ಸಂಚಾರ!

shimoga train to kumbh mela | ಪ್ರಯಾಗ್ ರಾಜ್ ಕುಂಭಮೇಳ : ಶಿವಮೊಗ್ಗ – ಬನಾರಸ್ ನಡುವೆ ವಿಶೇಷ ರೈಲು ಸಂಚಾರ!

ಶಿವಮೊಗ್ಗ (shivamogga), ಫೆ. 15: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ, ಶಿವಮೊಗ್ಗ ನಗರದಿಂದ ಬನಾರಸ್ ನಡುವೆ, ವಿಶೇಷ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಫೆಬ್ರವರಿ 22 ರ ಶನಿವಾರ 06223 ಸಂಖ್ಯೆಯ ವಿಶೇಷ ರೈಲು, ಶಿವಮೊಗ್ಗದಿಂದ ಬನಾರಸ್ ಗೆ ಪ್ರಯಾಣ ಬೆಳೆಸಲಿದೆ. ಹಾಗೆಯೇ 06224 ಸಂಖ್ಯೆಯ ರೈಲು, ಫೆ. 25 ರ ಮಂಗಳವಾರ ಬನಾರಸ್ ನಿಂದ ಶಿವಮೊಗ್ಗಕ್ಕೆ ಹಿಂದಿರುಗಲಿದೆ.

ಪ್ರಯಾಣದ ವೇಳಾಪಟ್ಟಿ : ಫೆ. 22 ರಂದು ಸಂಜೆ 4. 40 ನಿಮಿಷಕ್ಕೆ ಶಿವಮೊಗ್ಗದಿಂದ ರೈಲು ಹೊರಡಲಿದೆ. 5 ಗಂಟೆಗೆ ಭದ್ರಾವತಿ ನಿಲ್ದಾಣ ಹಾಗೂ ಸಂಜೆ 6. 10 ಕ್ಕೆ ಬೀರೂರು ನಿಲ್ದಾಣಕ್ಕೆ ಆಗಮಿಸಲಿದೆ.

ಸದರಿ ರೈಲು ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹೊಳೆಆಲೂರು, ಬಾದಾಮಿ ಸೇರಿದಂತೆ ವಿವಿಧ ರೈಲ್ವೆ ನಿಲ್ದಾಣಗಳ ಮೂಲಕ ಫೆ. 24 ರ ಸೋಮವಾರ 11 ಗಂಟೆಗೆ ಪ್ರಯಾಗ್ ರಾಜ್ ರೈಲ್ವೆ ನಿಲ್ದಾಣ ತಲುಪಲಿದೆ.

ಬನಾರಾಸ್ ನಿಂದ ಫೆ. 25 ರ ಮಂಗಳವಾರ ಮುಂಜಾನೆ 1. 30 ಕ್ಕೆ ಹೊರಡಲಿರುವ ರೈಲು, ಪ್ರಯಾಗ್ ರಾಜ್ ಗೆ ಮುಂಜಾನೆ 5. 40 ಆಗಮಿಸಲಿದೆ. 5. 45 ಕ್ಕೆ ಪ್ರಯಾಗ್ ರಾಜ್ ನಿಂದ ಹೊರಡಲಿದೆ. ಫೆ. 27 ರ ಗುರುವಾರ ಮುಂಜಾನೆ 6 ಗಂಟೆ 45 ನಿಮಿಷಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.

ಫೆ. 15 ರ ಮಧ್ಯಾಹ್ನದ ನಂತರ ಸದರಿ ವಿಶೇಷ ರೈಲಿನ ಟಿಕೆಟ್ ಬುಕ್ಕಿಂಗ್ ಸೇವೆ ಆರಂಭವಾಗಲಿದೆ. ಯಾತ್ರಾರ್ಥಿಗಳು ಸದರಿ ರೈಲಿನ ಸದುಪಯೋಗ ಪಡೆದುಕೊಳ್ಳುವಂತೆ ಸಂಸದ ಬಿ ವೈ ರಾಘವೇಂದ್ರ ಮನವಿ ಮಾಡಿದ್ದಾರೆ.

ಪ್ರಯಾಗ್ ರಾಜ್ ಕುಂಭಮೇಳಕ್ಕೆ ಶಿವಮೊಗ್ಗದಿಂದ ವಿಶೇಷ ರೈಲು ಓಡಿಸುವಂತೆ, ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರಿಗೆ ಕೆಲವರು ಮನವಿ ಮಾಡಿದ್ದರು. ಈ ಸಂಬಂಧ ಸಂಸದರು ರೈಲ್ವೆ ಇಲಾಖೆಗೆ ಕೋರಿಕೆ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿರುವ ರೈಲ್ವೆ ಇಲಾಖೆಯು ವಿಶೇಷ ರೈಲು ಓಡಿಸಲು ಮುಂದಾಗಿದೆ.

Shimoga Feb 15: For the Kumbh Mela going on in Uttar Pradesh’s Prayagraj, special train service has been provided between Shimoga city and Banaras.

Special train number 06223 will run from Shimoga to Banaras on Saturday, February 22. Also, train number 06224 will return from Banaras to Shimoga on Tuesday, February 25.

shimoga | Shimoga: Pipe thieves caught on CC camera – will the police notice anything else? shimoga | ಶಿವಮೊಗ್ಗ : ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಪೈಪ್ ಕಳ್ಳರು – ಇನ್ನಾದರೂ ಗಮನಿಸುವರೆ ಪೊಲೀಸರು? Previous post shimoga | ಶಿವಮೊಗ್ಗ : ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಪೈಪ್ ಕಳ್ಳರು – ಇನ್ನಾದರೂ ಗಮನಿಸುವರೆ ಪೊಲೀಸರು?
Shivamogga: Power outage in various places on July 20 th! ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Next post shimoga | ಶಿವಮೊಗ್ಗ : ಫೆ. 17 ರಂದು 50 ಕ್ಕೂ ಅಧಿಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!