Shivamogga: Train halts at Arasalu and Kumsi stations to continue ಶಿವಮೊಗ್ಗ : ಅರಸಾಳು, ಕುಂಸಿ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮುಂದುವರಿಕೆ

shimoga | ಶಿವಮೊಗ್ಗ – ಬನಾರಸ್ ರೈಲಿನಲ್ಲಿ ಉಪವಾಸದಿಂದ ಬಳಲುತ್ತಿರುವ ಕುಂಭಮೇಳಕ್ಕೆ ಹೊರಟವರು ; ಗಮನಹರಿಸುವುದೆ ರೈಲ್ವೆ ಇಲಾಖೆ?

ಶಿವಮೊಗ್ಗ (shivamogga), ಫೆ. 23: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ, ಶಿವಮೊಗ್ಗ – ಬನಾರಸ್ ನಡುವೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಫೆ. 22 ರಂದು ಸಂಜೆ ಸದರಿ ರೈಲು ಶಿವಮೊಗ್ಗದಿಂದ ಬನಾರಸ್ ಗೆ ಪ್ರಯಾಣ ಬೆಳೆಸಿತು. ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ.

ಆದರೆ ಸದರಿ ವಿಶೇಷ ರೈಲಿನಲ್ಲಿ ಊಟೋಪಚಾರದ ವ್ಯವಸ್ಥೆಯೇ ಇಲ್ಲವಾಗಿದೆ! ಇದರಿಂದ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿನ್ನೆ ರಾತ್ರಿ ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ಉಪವಾಸದಿಂದ ಬಳಲುವಂತಾಗಿದೆ ಎಂದು ಸದರಿ ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ದೂರದ ಊರಿಗೆ ತೆರಳುತ್ತಿರುವ ವಿಶೇಷ ರೈಲು ಆಗಿರುವುದರಿಂದ, ಸರ್ವೇ ಸಾಮಾನ್ಯವಾಗಿ ಇತರೆ ರೈಲುಗಳಲ್ಲಿ ಲಭ್ಯವಾಗುವ ಊಟ – ತಿಂಡಿ, ಕಾಫೀ, ಟೀ, ಹಾಲು, ನೀರು ಸಿಗುವ ನಿರೀಕ್ಷೆಯಿತ್ತು. ಹಣ ಕೊಟ್ಟ ಪಡೆಯಬಹುದು ಎಂದು ಭಾವಿಸಿದ್ದೆವು. ಆದರೆ ರೈಲಿನಲ್ಲಿ ಪ್ರಯಾಣಿಸಿದ ನಂತರ ಊಟೋಪಚಾರ, ತಿಂಡಿ-ತಿನಿಸು, ಪಾನೀಯಗಳ ಯಾವುದೇ ವ್ಯವಸ್ಥೆ ಮಾಡಿಲ್ಲದಿರುವುದು ಗೊತ್ತಾಯಿತು’ ಎಂದು ಶಿವಮೊಗ್ಗ ನಗರದ ನಿವಾಸಿಯಾದ, ಸಿನಿಮಾ – ಧಾರವಾಹಿ ಕಲಾವಿದರೂ ಆದ ಪ್ರಸನ್ನ ಎನ್ ಜಿ ವಿ ಅವರು ತಿಳಿಸಿದ್ದಾರೆ.

ಸದರಿ ರೈಲು ಯಾವ ನಿಲ್ದಾಣದಲ್ಲಿ ಎಷ್ಟು ಹೊತ್ತು ನಿಲುಗಡೆ ಮಾಡಲಿದೆ ಎಂಬುವುದರ ಮಾಹಿತಿಯೂ ಸಮರ್ಪಕವಾಗಿ ಇಲ್ಲವಾಗಿದೆ. ಇದರಿಂದ ನಿಲ್ದಾಣಗಳಲ್ಲಿ ಇಳಿದು ಊಟ – ತಿಂಡಿ ಖರೀದಿಸಿ ತರಲು ಸಂಕಷ್ಟ ಪಡುವಂತಾಗಿದೆ. ನಮ್ಮಗಳ ಗೋಳು ಹೇಳತೀರದಾಗಿದೆ ಎಂದು ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.

ಕೆಲ ಪ್ರಯಾಣಿಕರು ಮನೆಯಿಂದ ತಿಂಡಿ – ತಿನಿಸು ತಂದಿದ್ದಾರೆ. ಅದು ಕೂಡ ಖಾಲಿಯಾಗುವ ಹಂತದಲ್ಲಿದೆ. ತಕ್ಷಣವೇ ರೈಲ್ವೆ ಇಲಾಖೆಯು ಸದರಿ ರೈಲಿನಲ್ಲಿ ಊಟ, ತಿಂಡಿ, ಪಾನೀಯ ಮಾರಾಟದ ವ್ಯವಸ್ಥೆಗೆ ಕ್ರಮಕೈಗೊಳ್ಳಬೇಕು. ಈ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಸಂಕಷ್ಟ : ಅನಾರೋಗ್ಯ ಸಮಸ್ಯೆಯಿಂದ ನಿಯಮಿತವಾಗಿ ಮಾತ್ರೆ ಸೇವಿಸಬೇಕಾದವರು, ಸಮಯಕ್ಕೆ ಸರಿಯಾಗಿ ಊಟ – ತಿಂಡಿ ಲಭಿಸದೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಕೆಲ ಪ್ರಯಾಣಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪ್ರಯಾಣಿಕರಿಂದ ಭರ್ತಿಯಾಗಿರುವ ರೈಲಿಗೆ ರೈಲ್ವೆ ಇಲಾಖೆಯು ಸೂಕ್ತ ಆಹಾರ ಪದಾರ್ಥ, ಪಾನೀಯಗಳನ್ನು ಲಭಿಸುವ ವ್ಯವಸ್ಥೆ ಮಾಡಬೇಕಾಗಿತ್ತು. ಈ ನಿಟ್ಟಿನಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು. ಆದರೆ ಇವ್ಯಾವುದೆ ಕ್ರಮವಾಗದಿರುವುದರಿಂದ ತೊಂದರೆ ಪಡುವಂತಾಗಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಕ್ಷಣವೇ ರೈಲ್ವೆ ಇಲಾಖೆಯು ಶಿವಮೊಗ್ಗ – ಬನಾರಸ್ ವಿಶೇಷ ರೈಲಿನ ಪ್ರಯಾಣಿಕರಿಗೆ ಊಟೋಪಚಾರ, ತಿಂಡಿ-ತಿನಿಸು, ಪಾನೀಯಗಳು ಲಭಿಸುವ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

Shimoga, Feb 23: A special train has been arranged between Shimoga and Banaras for the Kumbh Mela going on in Prayagraj. On February 22nd evening, the train started its journey from Shimoga to Banaras. The train is full of passengers.

But there is no catering system in this special train! Due to this, hundreds of passengers are in trouble. Passengers traveling in the said train expressed their lamentation that a large number of passengers were suffering from hunger last night.

Difficulty: Some passengers have lamented that those who have to take pills regularly due to illness, do not get timely meals and snacks.

shimoga | Shimoga: Heavy tax unnecessary restrictions - what is the minister's instruction to the commercial tax department? shimoga | ಶಿವಮೊಗ್ಗ : ಭಾರೀ ತೆರಿಗೆ, ಅನಗತ್ಯ ನಿರ್ಬಂಧ - ವಾಣಿಜ್ಯ ತೆರಿಗೆ ಇಲಾಖೆಗೆ ಸಚಿವರ ಸೂಚನೆಯೇನು? Previous post shimoga | ಶಿವಮೊಗ್ಗ : ಭಾರೀ ತೆರಿಗೆ, ಅನಗತ್ಯ ನಿರ್ಬಂಧ – ವಾಣಿಜ್ಯ ತೆರಿಗೆ ಇಲಾಖೆಗೆ ಸಚಿವರ ಸೂಚನೆಯೇನು?
Employing children under the age of 14 and employing minors under the age of 18 in hazardous industries is a punishable offense. Next post shikaripur | ಶಿಕಾರಿಪುರ – ಆಟೋಮೊಬೈಲ್ ಶಾಪ್ ಮೇಲೆ ದಾಳಿ : ಕಿಶೋರ ಕಾರ್ಮಿಕ ಪತ್ತೆ