shimoga | ಅನ್ನಭಾಗ್ಯ ಯೋಜನೆಯಡಿ ಹಣಕ್ಕೆ ಬದಲಾಗಿ 5 ಕೆಜಿ ಅಕ್ಕಿ ವಿತರಣೆ!
ಶಿವಮೊಗ್ಗ (shivamogga), ಫೆ. 28: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ, ಅಂತ್ಯೋದಯ ಮತ್ತು ಆದ್ಯತಾ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮುಖಾಂತರ ಹಣ ವರ್ಗಾಯಿಸಲಾಗುತ್ತಿದೆ. ಇನ್ನು ಮುಂದೆ ಹಣಕ್ಕೆ ಬದಲಾಗಿ ಅಕ್ಕಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಫೆಬ್ರವರಿ-2025 ರಿಂದ ಜಾರಿಗೆ ಬರುವಂತೆ, 5 ಕೆ.ಜಿ. ಅಕ್ಕಿಯನ್ನು ಮಾರ್ಚ್-2025 ರ ಮಾಹೆಯ ಪಡಿತರ ವಿತರಣೆಯೊಂದಿಗೆ ಸೇರಿಸಿ ವಿತರಿಸಲು ಸರ್ಕಾರ ಆದೇಶಿಸಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಅವರು ಇಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಅಂತ್ಯೋದಯ ಪಡಿತರ ಚೀಟಿಗೆ ಕೇಂದ್ರದಿಂದ 3 ಸದಸ್ಯರವರೆಗಿನ ಪಡಿತರ ಚೀಟಿಗೆ 35 ಕೆ.ಜಿ. ಹಾಗೂ ರಾಜ್ಯದಿಂದ 4 ಸದಸ್ಯ ಮೇಲ್ಪಟ್ಟು ಒಬ್ಬರಿಗೆ,10 ಕೆ.ಜಿ.ಯಂತೆ ಅಕ್ಕಿ ವಿತರಣೆ ಮಾಡಲಾಗುತ್ತದೆ.
ಹಾಗೂ ಆದ್ಯತಾ ಪಡಿತರ ಚೀಟಿಗೆ ಪ್ರತಿ ಸದಸ್ಯರಿಗೆ ಕೇಂದ್ರದಿಂದ ತಲಾ 5 ಕೆ.ಜಿ. ಹಾಗೂ ರಾಜ್ಯದಿಂದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ.ಯಂತೆ ಅಕ್ಕಿಯನ್ನು ಮಾರ್ಚ್-2025 ರ ಮಾಹೆಗೆ ಮಾತ್ರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
Shimoga, Feb. 28: Under the state government’s ambitious Annabhagya scheme, funds are being transferred to Antyodaya and priority beneficiaries through direct cash transfer. Henceforth, the state government has decided to give rice instead of money.
With effect from February-2025, the government has ordered the distribution of 5 kg of rice along with the distribution of the monthly ration of March-2025, Shimoga dc Gurudatta Hegde said.
