ಶಿವಮೊಗ್ಗ (shivamogga), ಮೇ 09: ಶಿವಮೊಗ್ಗ – ಭದ್ರಾವತಿ ನಗರಗಳ ನಡುವೆ ಸಂಚರಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ksrtc) ದ ಸರ್ಕಾರಿ ಸಿಟಿ ಬಸ್ ಗಳಲ್ಲಿ, 4 ಬಸ್ ಗಳ ಸಂಚಾರಿ ಮಾರ್ಗ ಬದಲಾವಣೆ ಕುರಿತಂತೆ ಪ್ರಯಾಣಿಕರಿಗೆ ಕೆಎಸ್ಆರ್’ಟಿಸಿ ಮಾಹಿತಿ ನೀಡಿದೆ.
ಎರಡೂ ನಗರಗಳ ನಡುವೆ ಸಂಚರಿಸುವ ಶಿವಮೊಗ್ಗ ಘಟಕ ಹಾಗೂ ಭದ್ರಾವತಿ ಘಟಕದ ಒಟ್ಟಾರೆ 4 ಸರ್ಕಾರಿ ಸಿಟಿ ಬಸ್ ಗಳು ಸಿದ್ದಾಪುರ, ಮಿಲ್ಟ್ರಿ ಕ್ಯಾಂಪ್ ಹಾಗೂ ಜಯಶ್ರೀ ಸರ್ಕಲ್ ಮಾರ್ಗವಾಗಿ ಸಂಚರಿಸಲಿವೆ.
ಸದರಿ 4 ಬಸ್ ಗಳು ಎರಡೂ ನಗರಗಳ ನಡುವೆ ಒಟ್ಟಾರೆ 20 ಟ್ರಿಪ್ ಗಳ ಸಂಚಾರ ನಡೆಸಲಿವೆ. ಸದರಿ ಸಾರಿಗೆಯ ಪ್ರಯೋಜನವನ್ನು ಪ್ರಯಾಣಿಕರು ಪಡೆದುಕೊಳ್ಳುವಂತೆ ಶಿವಮೊಗ್ಗ ವಿಭಾಗದ ಕೆಎಸ್ಆರ್’ಟಿಸಿ ಡಿಸಿ ನವೀನ್ ಅವರು ತಿಳಿಸಿದ್ದಾರೆ.
Shivamogga, May 09: KSRTC has informed passengers about the change in the route of 4 buses of the Karnataka State Road Transport Corporation (KSRTC) government city buses plying between Shivamogga and Bhadravati cities.
A total of 4 government city buses of the Shivamogga unit and Bhadravati unit plying between the two cities will ply via Siddapur, Military Camp and Jayashree Circle. The four buses will operate a total of 20 trips between the two cities. Shivamogga division KSRTC DC Naveen has informed that passengers are encouraged to take advantage of the service.

