Shimoga: Dog attack on boy! ಶಿವಮೊಗ್ಗ : ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ನಾಯಿ ದಾಳಿ!Shimoga: Dog attack on boy! ಶಿವಮೊಗ್ಗ : ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ನಾಯಿ ದಾಳಿ!

shimoga | ಶಿವಮೊಗ್ಗ : ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ನಾಯಿ ದಾಳಿ!

ಶಿವಮೊಗ್ಗ (shivamogga), ಜು. 13: ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನೋರ್ವನ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ, ಶಿವಮೊಗ್ಗ ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿ ಜು. 13 ರ ಬೆಳಿಗ್ಗೆ ನಡೆದಿದೆ.

ಮಹಮ್ಮದ್ ತಸ್ಲೀಮ್ ಎಂಬುವರ ಪುತ್ರ, 4 ವರ್ಷ ವಯೋಮಾನದ ಮಹಮ್ಮದ್ ತಮೀಮ್ ಗಾಯಗೊಂಡ ಬಾಲಕ ಎಂದು ಗುರುತಿಸಲಾಗಿದೆ.

ನಾಯಿ ದಾಳಿಯಿಂದ ಬಾಲಕನ ತುಟಿ ಭಾಗ ಬಳಿ ಗಂಭೀರ ಗಾಯವಾಗಿದೆ. ಆತನಿಗೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬಾಲಕನ ಮುಖದ ಮೇಲೆಯೇ ದಾಳಿ ನಾಯಿ ದಾಳಿ ನಡೆಸಿದೆ. ತಕ್ಷಣವೇ ಸುತ್ತಮುತ್ತಲಿನ ನಿವಾಸಿಗಳು ನಾಯಿಯನ್ನು ಓಡಿಸಿ, ಬಾಲಕನ ರಕ್ಷಣೆ ಮಾಡಿದ್ದಾರೆ.

‘ಸೋಮಿಕೊಪ್ಪ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಜಾನುವಾರುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿವೆ. ಇದೀಗ ಬಾಲಕನೋರ್ವನ ಮೇಲೆ ನಾಯಿಯೊಂದು ದಾಳಿ ನಡೆಸಿ ಗಾಯಗೊಳಿಸಿದೆ. ತಕ್ಷಣವೇ ಪಾಲಿಕೆ ಆಡಳಿತ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು’ ಎಂದು ಸೋಮಿನಕೊಪ್ಪದ ನಿವಾಸಿ ಮಕ್ಬುಲ್ ಅಹ್ಮದ್ ಅವರು ಆಗ್ರಹಿಸಿದ್ದಾರೆ.

Shimoga, Ju. 13: A dog attacked and injured a boy who was walking on the road in Sominakoppa extension of Shimoga city. It happened on the morning of the july 13th.

shimoga APMC vegetable prices | Details of vegetable prices for November 09 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 12 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 13 ರ ತರಕಾರಿ ಬೆಲೆಗಳ ವಿವರ
Shimoga : Accused who enetered into the house and stole Mangalasutra was arrested! ಶಿವಮೊಗ್ಗ : ಮನೆಗೆ ನುಗ್ಗಿ ಮಾಂಗಲ್ಯ ಸರ ಅಪಹರಿಸಿದ್ದ ಆರೋಪಿ ಅರೆಸ್ಟ್! Next post shimoga news | ಶಿವಮೊಗ್ಗ : ಮನೆಗೆ ನುಗ್ಗಿ ಮಾಂಗಲ್ಯ ಸರ ಅಪಹರಿಸಿದ್ದ ಆರೋಪಿ ಅರೆಸ್ಟ್!