Shimoga : Accused who enetered into the house and stole Mangalasutra was arrested! ಶಿವಮೊಗ್ಗ : ಮನೆಗೆ ನುಗ್ಗಿ ಮಾಂಗಲ್ಯ ಸರ ಅಪಹರಿಸಿದ್ದ ಆರೋಪಿ ಅರೆಸ್ಟ್!

shimoga news | ಶಿವಮೊಗ್ಗ : ಮನೆಗೆ ನುಗ್ಗಿ ಮಾಂಗಲ್ಯ ಸರ ಅಪಹರಿಸಿದ್ದ ಆರೋಪಿ ಅರೆಸ್ಟ್!

ಶಿವಮೊಗ್ಗ (shivamogga), ಜು. 13: ಮನೆಗೆ ನುಗ್ಗಿ ಮಹಿಳೆಯೋರ್ವರ ಮಾಂಗಲ್ಯ ಸರ ಅಪಹರಿಸಿದ್ದ ಆರೋಪದ ಮೇರೆಗೆ, ಓರ್ವನನ್ನು ಶಿವಮೊಗ್ಗ ನಗರದ ಕೋಟೆ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಭದ್ರಾವತಿ ನಗರದ ಹೊಸಮನೆಯ ಭೋವಿ ಕಾಲೋನಿ 4 ನೇ ತಿರುವಿನ ನಿವಾಸಿ, ಅಡುಗೆ ತಯಾರಿಸುವ ಕೆಲಸ ಮಾಡುತ್ತಿದ್ದ ವಸಂತ್ ರಾಜ್ (40) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಆರೋಪಿಯಿಂದ 4. 40 ಲಕ್ಷ ರೂ. ಮೌಲ್ಯದ  45 ಗ್ರಾಂ 720 ಮಿಲಿ ತೂಕದ ಬಂಗಾರದ ಮಾಂಗಲ್ಯ ಸರ, ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಪ್ಲೆಂಡರ್ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ಸ್’ಪೆಕ್ಟರ್ ಹರೀಶ್ ಕೆ ಪಟೇಲ್, ಸಬ್ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಬಾಗೋಜಿ, ಸಿಬ್ಬಂದಿಗಳಾದ ವಸಂತ್, ಕಾಂತರಾಜ್, ಕಿಶೋರ, ಗೊರವರ ಅಂಜಿನಪ್ಪ, ಜಯಶ್ರೀ, ಶಿವರಾಜ್, ಪ್ರಕಾಶ್, ಎಎನ್’ಸಿ ವಿಭಾಗದ ಸಿಬ್ಬಂದಿಗಳಾದ ಗುರುರಾಜ್, ಇಂದ್ರೇಶ್, ವಿಜಯಕುಮಾರ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ಹಿನ್ನೆಲೆ : ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗಣಪತಿ ಲೇಔಟ್ 2 ನೇ ತಿರುವಿನ ನಿವಾಸಿ ನಾಗರಾಜ್ ಎಂಬುವರ ಮನೆಗೆ ನುಗ್ಗಿದ್ದ ಆರೋಪಿ, ಅವರ ಪತ್ನಿಯ ಮಾಂಗಲ್ಯ ಸರ ಸುಲಿಗೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ನಾಗರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದರು.

Shimoga, Ju. 13: There was an incident where a man was arrested by the Kote police of Shimoga city on the charge of stealing a mangalasutra from a woman.

Shimoga: Dog attack on boy! ಶಿವಮೊಗ್ಗ : ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ನಾಯಿ ದಾಳಿ!Shimoga: Dog attack on boy! ಶಿವಮೊಗ್ಗ : ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ನಾಯಿ ದಾಳಿ! Previous post shimoga | ಶಿವಮೊಗ್ಗ : ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ನಾಯಿ ದಾಳಿ!
Sigandur Bridge inauguration: CM Siddaramaiah writes to Gadkari to postpone the program! ಸಿಗಂದೂರು ಸೇತುವೆ ಉದ್ಘಾಟನೆ : ಸಾಗರ ಕಾರ್ಯಕ್ರಮ ಮುಂದೂಡಲು ಗಡ್ಕರಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ! Next post sigandur bridge | ಸಿಗಂದೂರು ಸೇತುವೆ ಉದ್ಘಾಟನೆ : ಕಾರ್ಯಕ್ರಮ ಮುಂದೂಡಲು ಗಡ್ಕರಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ!