
sigandur bridge | ಸಿಗಂದೂರು ಸೇತುವೆ ಉದ್ಘಾಟನೆ : ಕಾರ್ಯಕ್ರಮ ಮುಂದೂಡಲು ಗಡ್ಕರಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ!
ವರದಿ : ಬಿ. ರೇಣುಕೇಶ್
ಬೆಂಗಳೂರು / ಶಿವಮೊಗ್ಗ, ಜು. 13: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಸಿಗಂದೂರು ಸೇತುವೆಯ ಲೋಕಾರ್ಪಣೆ ಸಮಾರಂಭ ಜು. 14 ರಂದು ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ಸಾಗರ ನಗರದ ನೆಹರು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯುತ್ತಿದೆ. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು, ಸಿಗಂದೂರು ಸೇತುವೆ ಉದ್ಘಾಟನೆ ಜೊತೆಯಲ್ಲಿ ಶಿವಮೊಗ್ಗ ಜಿಲ್ಲೆ ಮತ್ತು ರಾಜ್ಯದ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಉದ್ಘಾಟನೆ ಹಾಗೂ ಚಾಲನೆ ನೆರವೇರಿಸಲಿದ್ದಾರೆ.
ಈ ನಡುವೆ ಕೊನೆ ಕ್ಷಣದಲ್ಲಿ ರಾಜಕೀಯ ಹಗ್ಗಜಗ್ಗಾಟ ಕೂಡ ಶುರುವಾಗಿದೆ. ಸಾಗರದ ನೆಹರು ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮ ಮುಂದೂಡುವಂತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಸಿಎಂ ಸಿದ್ದರಾಮಯ್ಯರವರು ಜು. 13 ರಂದು ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ? : ‘ಜು. 14 ರಂದು ಸಾಗರ ಪಟ್ಟಣದ ನೆಹರು ಮೈದಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಿರುವುದು ತಮ್ಮ ಗಮನಕ್ಕೆ ಬಂದಿದೆ. ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಕೂಡ ಮುದ್ರಿಸಲಾಗಿದೆ.
ಆದರೆ ಸದರಿ ಕಾರ್ಯಕ್ರಮದ ಕುರಿತಂತೆ ತಮಗೆ ಮುಂಚಿತವಾಗಿ ಮಾಹಿತಿ ನೀಡುವ ಕಾರ್ಯವಾಗಿಲ್ಲ. ಈ ಕಾರಣದಿಂದ ತಾವು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಜು. 14 ರಂದು ತಮ್ಮ ಅಧ್ಯಕ್ಷತೆಯಲ್ಲಿ ಆಯೋಜಿಸಿರುವ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆನೆ.
ಭೂ ಸಾರಿಗೆ – ಹೆದ್ದಾರಿ ಇಲಾಖೆಯು ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆ ಮಾಡುವ ಮುನ್ನ, ರಾಜ್ಯ ಸರ್ಕಾರದ ಜೊತೆ ಸೂಕ್ತ ಸಮಾಲೋಚನೆ ಮಾಡಬೇಕಾಗಿತ್ತು. ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡುವ ವೇಳೆ, ರಾಜ್ಯ ಸರ್ಕಾರದೊಂದಿಗೆ ಸೂಕ್ತ ಸಮನ್ವಯ – ಸಲಹೆ ಪಡೆಯುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬೇಕು.
ಈ ಕಾರಣದಿಂದ ಸದರಿ ಕಾರ್ಯಕ್ರಮವನ್ನು ಮುಂದೂಡಿ. ನಿಮಗೆ ಅನುಕೂಲಕರವಾದ ಒಂದೆರಡು ದಿನಗಳನ್ನು ನನಗೆ ಒದಗಿಸಿ, ಈ ಮಹತ್ವದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲು ಸಾಧ್ಯವಾಗುವಂತೆ ಆಯೋಜಿಸುವಂತೆ’ ಸಿಎಂ ಸಿದ್ದರಾಮಯ್ಯರವರು ಗಡ್ಕರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕುತೂಹಲ : ಸಿಎಂ ಸಿದ್ದರಾಮಯ್ಯರವರು ಬರೆದಿರುವ ಪತ್ರದ ಕುರಿತಂತೆ, ಸದ್ಯಕ್ಕೆ ಸಚಿವ ನಿತಿನ್ ಗಡ್ಕರಿ ಅವರಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿಎಂ ಪತ್ರಕ್ಕೆ ಅವರು ಮನ್ನಣೆ ನೀಡಲಿದ್ದಾರಾ? ಇಲ್ಲವೇ, ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರಾ? ಎಂಬ ಕುತೂಹಲ ಮನೆ ಮಾಡಿದೆ.
Bengaluru / Shivamogga, Jul. 13: The inauguration ceremony of the Sigandur Bridge, built on the backwaters of Sharavati in Sagar taluk of Shivamogga district, will be held on Jul. 14. All preparations have been made for this. A stage program is being held at Nehru Maidan in Sagar Nagar. Union Minister for Land Transport Nitin Gadkari will inaugurate and launch various national highway works in Shivamogga district and the state along with the inauguration of the Sigandur Bridge. Meanwhile, last-minute political wrangling has also begun. CM Siddaramaiah wrote a letter to Minister Nitin Gadkari on July 13 asking him to postpone the program being organized at Nehru Maidan in Sagar.