The Shimoga Police have turned their backs on the ‘baniyan gang’ - the night patrol system has been tightened further! ‘ಬನಿಯನ್ ಗ್ಯಾಂಗ್’ ಬೆನ್ನು ಬಿದ್ದ ಶಿವಮೊಗ್ಗ ಪೊಲೀಸರು – ರಾತ್ರಿ ಗಸ್ತು ವ್ಯವಸ್ಥೆ ಮತ್ತಷ್ಟು ಬಿಗಿ!

shimoga news | ‘ಬನಿಯನ್ ಗ್ಯಾಂಗ್’ ಬೆನ್ನು ಬಿದ್ದ ಶಿವಮೊಗ್ಗ ಪೊಲೀಸರು – ರಾತ್ರಿ ಗಸ್ತು ವ್ಯವಸ್ಥೆ ಮತ್ತಷ್ಟು ಬಿಗಿ!

ಶಿವಮೊಗ್ಗ (shivamogga), ಜು. 21: ಶಿವಮೊಗ್ಗ ನಗರದ ಹೊರವಲಯ ವಡ್ಡಿನಕೊಪ್ಪದ ಪುಟ್ಟಪ್ಪ ಕ್ಯಾಂಪ್ ಬಡಾವಣೆಯಲ್ಲಿ, ಜುಲೈ 20 ರ ಮುಂಜಾನೆ ಮಾರಕಾಸ್ತ್ರಗಳನ್ನಿಡಿದು ಆರು ಜನ ಆಗಂತುಕ ಯುವಕರ ತಂಡವೊಂದು ರಸ್ತೆಗಳಲ್ಲಿ ಓಡಾಡಿರುವುದು ಸಿ ಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಬಡಾವಣೆಯ ಹಲವೆಡೆ ಸದರಿ ತಂಡ ಓಡಾಡಿದೆ. ತಂಡದಲ್ಲಿರುವವರು ಅಂಗಿ ಧರಿಸಿಲ್ಲ. ಕೇವಲ ಬನಿಯನ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.  ಎಲ್ಲರು ಮುಖ ಮರೆಮಾಚಲು ಬಟ್ಟೆ ಕಟ್ಟಿಕೊಂಡಿದ್ದಾರೆ.

ಸೊಂಟದಲ್ಲಿ ಶಸ್ತ್ರಾಸ್ತ್ರ, ಕೈಯಲ್ಲಿ ಟಾರ್ಚ್ ಗಳನ್ನಿಡಿದು ಓಡಾಡಿದ್ದಾರೆ. ಇದರಲ್ಲಿ ಓರ್ವ ಕೈಗೆ ಗ್ಲೌಸ್ ಧರಿಸಿದ್ದರೆ, ಮತ್ತೋರ್ವ ಬ್ಯಾಗ್ ಹಾಕಿಕೊಂಡಿರುವುದು ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಯಿಂದ ಕಂಡುಬರುತ್ತದೆ.

ಇದು ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಆದರೆ ಸದರಿ ಪ್ರದೇಶದಲ್ಲಿ ಯಾವುದೇ ಅಪರಾಧ ಕೃತ್ಯಗಳು ವರದಿಯಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ತುಂಗಾನಗರ ಠಾಣೆ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ಅವರು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲಿಸಿದ್ದಾರೆ. ಸದರಿ ತಂಡದ ಕುರಿತಂತೆ ಮಾಹಿತಿ ಕಲೆ ಹಾಕುವ ಕಾರ್ಯ ನಡೆಸುತ್ತಿದ್ದಾರೆ.

ಸದರಿ ತಂಡದ ಹಿನ್ನೆಲೆಯ ಕುರಿತಂತೆ ಯಾವುದೇ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ಇವರೆಲ್ಲ ಸ್ಥಳೀಯರೇ ಅಥವಾ ಹೊರಗಿನ ಜಿಲ್ಲೆ, ರಾಜ್ಯದವರೇ ಎಂಬಿತ್ಯಾದಿ ವಿವರ ಕಲೆ ಹಾಕುವ ಕಾರ್ಯದಲ್ಲಿ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಿದೆ.

ಆಗುಂತಕ ತಂಡದ ಸಂಚಾರ ಹಿನ್ನೆಲೆಯಲ್ಲಿ, ಶಿವಮೊಗ್ಗ ನಗರ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. ರಾತ್ರಿ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ ತೆರೆದು ಪರಿಶೀಲಿಸುತ್ತಿದ್ದಾರೆ.

ಶಸ್ತ್ರಧಾರಿ ಪೊಲೀಸರನ್ನು ಗಸ್ತು ಕಾರ್ಯಕ್ಕೆ ನಿಯೋಜಿಸಲಾಗಿದೆ. ವಿಶೇಷವಾಗಿ ನಗರದ ಹೊರವಲಯದ ಪ್ರದೇಶಗಳಲ್ಲಿ  ರಾತ್ರಿ ವೇಳೆ ಪೊಲೀಸರ ಸಂಚಾರವನ್ನು ಹೆಚ್ಚಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಈಗಾಗಲೇ ರಾಜ್ಯದ ಕೆಲವೆಡೆ ಇದೇ ಮಾದರಿಯ ತಂಡಗಳು, ದರೋಡೆ ಮತ್ತೀತರ ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವ ಮಾಹಿತಿಗಳಿವೆ. ಕೆಲ ತಂಡಗಳು ಹೊರ ರಾಜ್ಯಕ್ಕೆ ಸೇರಿದವುಗಳಾಗಿವೆ ಎಂಬ ಮಾಹಿತಿಗಳು ಪೊಲೀಸ್ ಇಲಾಖೆಯಿಂದ ಕೇಳಿಬರುತ್ತದೆ.

ಒಟ್ಟಾರೆ ‘ಬನಿಯನ್’ಧಾರಿ ಆಗುಂತಕರ ತಂಡದ ಸಂಚಾರವು ಶಿವಮೊಗ್ಗ ನಗರ ಪೊಲೀಸರ ನಿದ್ದೆಗೆಡುವಂತೆ ಮಾಡಿದ್ದು, ಸದರಿ ತಂಡದ ಹಿನ್ನೆಲೆಯ ಕುರಿತಂತೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Shivamogga, Jul. 21: A group of six unknown persons were caught on CCTV cameras roaming the streets of Puttappa Camp area in Vaddinakoppa, on the outskirts of Shivamogga city, on the morning of July 20. The group has been roaming around the area. The members of the group are not wearing shirts. They are only wearing vests and jeans. Everyone is wearing clothes to hide their faces.

shimoga APMC vegetable prices | Details of vegetable prices for November 09 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 09 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 21 ರ ತರಕಾರಿ ಬೆಲೆಗಳ ವಿವರ
Decision to release water from Bhadra Reservoir to canals ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ನಿರ್ಧಾರ Next post shimoga | bhadra dam | ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ನಿರ್ಧಾರ