shimoga news update | ಶಿವಮೊಗ್ಗ : ರಸ್ತೆ ಅಪಘಾತದಲ್ಲಿ ಯುವಕ ಸಾ**ವು | ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ ಕಳವು |
ಹಿಟ್ ಅಂಡ್ ರನ್ ಕೇಸ್ : ಮೆಡಿಕಲ್ ರೆಪ್ ಸ್ಥಳದಲ್ಲಿಯೇ ಸಾವು!
ಶಿವಮೊಗ್ಗ (shivamogga), ಜು. 22: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲಿಯೇ ಮೃ**ತಪಟ್ಟ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬೇಡರ ಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕ್ಯಾತಿನಕೊಪ್ಪ ಗ್ರಾಮದ ನಿವಾಸಿ ಸಚಿನ್ (25) ಮೃ**ತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಇವರು ಮೆಡಿಕಲ್ ರೆಪ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕೆಲಸ ಮುಗಿಸಿಕೊಂಡು ಬೈಕ್ ನಲ್ಲಿ ಸಚಿನ್ ಮನೆಗೆ ತೆರಳುವಾಗ ಬೇಡರಹೊಸಹಳ್ಳಿ ಸಮೀಪ ಹನವೊಂದು ಇವರ ಬೈಕ್ ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ ಕಳವು!
ಶಿವಮೊಗ್ಗ (shimoga), ಜು. 22: ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್’ವೊಂದನ್ನು ಕಳವು ಮಾಡಿರುವ ಘಟನೆ, ಶಿವಮೊಗ್ಗ ನಗರದ ಸಿಟಿ ಸೆಂಟರ್ ಮಾಲ್ ಎದುರಿನ ರಸ್ತೆಯಲ್ಲಿ ನಡೆದಿದೆ.
ಗಾಡಿಕೊಪ್ಪದ ನಿವಾಸಿ ಉಮೇಶ್ ಎಂಬುವರಿಗೆ ಸೇರಿದ ಕೆಎ 14 ಇ ಎಲ್ 4968 ನೊಂದಣೆಯ ಸ್ಪ್ಲೆಂಡರ್ ಪ್ರೋ ಬೈಕ್ ಕಳುವಾದದ್ದೆಂದು ಗುರುತಿಸಲಾಗಿದೆ.
ಉಮೇಶ್ ಅವರು ಜುಲೈ 20 ರಂದು ರಾತ್ರಿ ಬೈಕ್ ನಿಲ್ಲಿಸಿದ್ದು, ಮಾರನೇ ದಿನ ಬೆಳಿಗ್ಗೆ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಬೈಕ್ ಕಳುವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅವರು ನೀಡಿದ ದೂರಿನ ಆಧಾರದ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
#shimoganews, #shivamogga, #shivamogganews, #accident, #crimenews, #shimoganewsupdate, #fir, shimogapolice, #accidentnews, #theft, #theftnews, #arrest, #arrestnews,
