Disruption in drinking water supply in Shivamogga city for two days: When? ಶಿವಮೊಗ್ಗ ನಗರದಲ್ಲಿ ಎರಡು ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ : ಯಾವಾಗ?

shimoga | ಶಿವಮೊಗ್ಗ ನಗರದ ವಿವಿಧೆಡೆ ಆಗಸ್ಟ್ 11 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ!

ಶಿವಮೊಗ್ಗ (shivamogga), ಆಗಸ್ಟ್ 10: ಓವರ್ ಹೆಡ್ ಟ್ಯಾಂಕ್ ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಮಾರ್ಗ ಹಾನಿಯಾಗಿರುವ ಹಿನ್ನೆಲೆಯಲ್ಲಿ, ಆಗಸ್ಟ್ 11 ರಂದು ನಗರದ ವಿವಿಧೆಡೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ತಿಳಿಸಿದೆ.

ಈ ಕುರಿತಂತೆ ಆಗಸ್ಟ್ 10 ರಂದು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಜೀವನ್ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ತುಂಗಾ ನಗರ, ಮಿಳಘಟ್ಟ, ಜಿಲ್ಲಾ ಪಂಚಾಯ್ತಿ ಕಚೇರಿ, ಶಿವಮೂರ್ತಿ ಸರ್ಕಲ್, ಜಯನಗರ, ರವೀಂದ್ರನಗರ, ಟಿಪ್ಪುನಗರ, ಪಿಡಬ್ಲ್ಯೂಡಿ ಕಚೇರಿ, ಶೇಷಾದ್ರಿಪುರಂ ಮತ್ತು ಹಳೇ ಬಸ್ ಸ್ಟ್ಯಾಂಡ್ ಪ್ರದೇಶಗಳ ಓವರ್ ಹೆಡ್ ಟ್ಯಾಂಕ್ (ಮೇಲ್ಮಟ್ಟದ ಜಲ ಸಂಗ್ರಹಾಗಾರ) ಗಳಿಗೆ ನೀರು ಪೂರೈಕೆಯಾಗುತ್ತಿಲ್ಲ.

ಈ ಕಾರಣದಿಂದ ಸದರಿ ಪ್ರದೇಶಗಳ ಸಾರ್ವಜನಿಕರಿಗೆ ಆಗಸ್ಟ್ 11 ರಂದು ದೈನಂದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸೂಕ್ತ ಸಹಕಾರ ನೀಡುವಂತೆ ಎಇಇ ಜೀವನ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Shivamogga, August 10: The Water Board has announced that there will be disruptions in drinking water supply in various parts of the city on August 11 due to damage to the pipeline supplying drinking water to overhead tanks. A notification in this regard was issued by the board’s Assistant Executive Engineer (AEE) Jeevan on August 10.

Water is not being supplied to the overhead tanks (above-ground water storage tanks) in Tunga Nagar, Milaghatta, Zilla Panchayat Office, Shivamurthy Circle, Jayanagar, Ravindranagar, Tippunagar, PWD Office, Seshadripuram and the old bus stand areas.

Shimoga: Fire accident in the garage - burnt cars! ಶಿವಮೊಗ್ಗ : ಗ್ಯಾರೇಜ್ ನಲ್ಲಿ ಬೆಂಕಿ ಅವಘಡ – ಸುಟ್ಟು ಭಸ್ಮವಾದ ಕಾರುಗಳು! Previous post shimoga | ಶಿವಮೊಗ್ಗ : ಗ್ಯಾರೇಜ್ ನಲ್ಲಿ ಬೆಂಕಿ ಅವಘಡ – ಸುಟ್ಟು ಭಸ್ಮವಾದ ಕಾರುಗಳು!
shimoga APMC vegetable prices | Details of vegetable prices for September 26 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 26 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಆಗಸ್ಟ್ 11 ರ ತರಕಾರಿ ಬೆಲೆಗಳ ವಿವರ