Shimoga: Residents celebrate Independence Day in the rain! ಶಿವಮೊಗ್ಗ : ನಿವಾಸಿಗಳಿಂದ ಸ್ವಾತಂತ್ರ್ಯೋತ್ಸವ ಸಂಭ್ರಮ – ರಾಷ್ಟ್ರ ಧ್ವಜಾರೋಹಣ

shimoga | ಶಿವಮೊಗ್ಗ : ನಿವಾಸಿಗಳಿಂದ ಸ್ವಾತಂತ್ರ್ಯೋತ್ಸವ ಸಂಭ್ರಮ – ರಾಷ್ಟ್ರ ಧ್ವಜಾರೋಹಣ

ಶಿವಮೊಗ್ಗ (shivamogga), ಆಗಸ್ಟ್ 15: ಶಿವಮೊಗ್ಗ ನಗರದ ಸೋಮಿನಕೊಪ್ಪ ಕೆಹೆಚ್’ಬಿ ಪ್ರೆಸ್ ಕಾಲೋನಿಯಲ್ಲಿ ಆಗಸ್ಟ್ 15 ರ ಶುಕ್ರವಾರ ಬೆಳಿಗ್ಗೆ, 79 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಮಳೆಯಲ್ಲಿಯೇ ಅತ್ಯಂತ ಸಡಗರ – ಸಂಭ್ರಮದಿಂದ ನಿವಾಸಿಗಳು್ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಭಾಗಿಯಾದರು.

ಛಾಯಾಗ್ರಾಹಕ, ಪರಿಸರ ಪ್ರೇಮಿ ಆರ್ ಎಂ ಕುಶಕುಮಾರ್ ಅವರು ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಪ್ರಸ್ತುತ ಸ್ವಾತಂತ್ರ್ಯೋತ್ವವದ ವೇಳೆ ಪರಿಸರ ಸಂರಕ್ಷಣೆಯ ಪಣ ತೊಡಬೇಕಾಗಿದೆ. ಗಿಡ, ಮರಗಳನ್ನು ಬೆಳೆಸಿ ದೇಶದ ಪ್ರಕೃತಿ ಸಂಪತ್ತು ಸಂರಕ್ಷಿಸಬೇಕಾಗಿದೆ. ದೇಶ ಪ್ರೇಮ ಬೆಳೆಸಿಕೊಂಡು ನಾಡಿನ ಪ್ರಗತಿ, ವಿಕಾಸಕ್ಕೆ ಕಟಿಬದ್ಧರಾಗಬೇಕಾಗಿದೆ ಎಂದು ಕರೆ ನೀಡಿದರು.

ಸಹಾಯಕ ಸಬ್ ಇನ್ಸ್’ಪೆಕ್ಟರ್ (ಎಎಸ್ಐ) ಶ್ರೀಹರ್ಷ ಅವರು ಮಾತನಾಡಿ, ನಿವಾಸಿಗಳು ಒಟ್ಟಾಗಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡುತ್ತಿರುವುದು ಸಂತಸಕರ ಸಂಗತಿಯಾಗಿದೆ. ಒಗ್ಗಟ್ಟಿನಲ್ಲಿ ನಾವೆಲ್ಲರೂ ಮುನ್ನಡೆದು, ದೇಶದ ಪ್ರಗತಿಗೆ ಸಹಕರಿಸೋಣ. ಸ್ವಾತಂತ್ರ್ಯೋತ್ಸವದ ಮಹತ್ವ ಅರಿತು ಜವಾಬ್ದಾರಿಯುತ ನಾಗರೀಕರೋಣ ಎಂದು ತಿಳಿಸಿದರು.

ಕೆ ಹೆಚ್ ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್ ಅವರು ಮಾತನಾಡಿ, ಬ್ರಿಟಿಷರ ದಾಸ್ಯದಿಂದ ದೇಶ ಮುಕ್ತಗೊಳಿಸಲು ಹಲವರು ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಇಂತಹ ಅಮೂಲ್ಯವಾದ ಸ್ವಾತಂತ್ರ್ಯವನ್ನು ಉಳಿಸಿ, ಬೆಳೆಸಿಕೊಂಡು ಹೋಗೋಣ. ಸಕುಂಚಿತ, ಸ್ವಾರ್ಥ ಭಾವನೆಯಿಂದ ಹೊರಬಂದು ದೇಶದ ಪ್ರಗತಿಗೆ ಕೈಜೋಡಿಸೋಣ ಎಂದರು.

ಯುವ ಮುಖಂಡ ಗುರುಚರಣ್ ಅವರು ದೇಶಭಕ್ತಿ ಗೀತೆಗಳ ಗಾಯನ ನಡೆಸಿಕೊಟ್ಟರು. ಸಮಾರಂಭದಲ್ಲಿ ಸ್ಥಳೀಯ ಬಡಾವಣೆಗಳ ನಿವಾಸಿಗಳಾದ ಗುರುಚರಣ್, ಸುರೇಶ್ ಹೆಚ್ ಹೆಚ್, ಮಂಜುನಾಥ್ ಜಿ, ಗೋಪಾಲ್ ಪೂಜಾರಿ, ಮಿದ್ದೆ ಮಾರುತಿ, ರವಿ ಎಸ್, ಸುರೇಶ್ ಬಾಬು, ಪದ್ಮನಾಭ್, ಅಬ್ಬಲಗೆರೆ ಗ್ರಾಮ ಪಂಚಾಯ್ತಿ ನೀರುಗಂಟಿ ಪ್ರಸನ್ನ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Shimoga, August 15: On Friday morning, August 15, 79th Independence Day celebrations were held at Sominakoppa KHB Press Colony in Shimoga city. Even in the rain, the residents participated in the Independence Day celebrations with great enthusiasm. Photographer and environmentalist R M Kushakumar was the chief guest of the event. He hoisted the national flag and paid his respects.

'The memory of freedom fighters remains eternal in the minds of the people': Minister Madhu Bangarappa ‘ಸ್ವಾತಂತ್ರ್ಯ ಹೋರಾಟಗಾರರ ನೆನಪು ಜನಮಾನಸದಲ್ಲಿ ಚಿರಸ್ಥಾಯಿ’ : ಸಚಿವ ಮಧು ಬಂಗಾರಪ್ಪ Previous post shimoga | ‘ಸ್ವಾತಂತ್ರ್ಯ ಹೋರಾಟಗಾರರ ನೆನಪು ಜನಮಾನಸದಲ್ಲಿ ಚಿರಸ್ಥಾಯಿ’ : ಸಚಿವ ಮಧು ಬಂಗಾರಪ್ಪ
Bengaluru cylinder explosion: Instructions to repair damaged houses - Compensation announced ಬೆಂಗಳೂರಲ್ಲಿ ಭೀಕರ ಸಿಲಿಂಡರ್ ಸ್ಫೋಟ : ಹಾನಿಗೀಡಾಗಿರುವ ಮನೆಗಳ ದುರಸ್ತಿಗೆ ಸೂಚನೆ – ಪರಿಹಾರ ಘೋಷಣೆ Next post bengaluru | ಬೆಂಗಳೂರಲ್ಲಿ ಭೀಕರ ಸಿಲಿಂಡರ್ ಸ್ಫೋಟ : ಹಾನಿಗೀಡಾಗಿರುವ ಮನೆಗಳ ದುರಸ್ತಿಗೆ ಸೂಚನೆ – ಪರಿಹಾರ ಘೋಷಣೆ