Shikaripura: Police discover marijuana crop in a farm! ಶಿಕಾರಿಪುರ : ಜಮೀನಿನಲ್ಲಿ ಗಾಂಜಾ ಬೆಳೆ ಪತ್ತೆ ಹಚ್ಚಿದ ಪೊಲೀಸರು!

shikaripura news | ಶಿಕಾರಿಪುರ : ಜಮೀನಿನಲ್ಲಿ ಗಾಂಜಾ ಬೆಳೆ ಪತ್ತೆ ಹಚ್ಚಿದ ಪೊಲೀಸರು!

ಶಿಕಾರಿಪುರ (shikaripur), ಅಕ್ಟೋಬರ್ 17: ಜಮೀನಿನಲ್ಲಿ ಗಾಂಜಾ ಬೆಳೆ ಬೆಳೆದಿದ್ದ ಆರೋಪದ ಮೇರೆಗೆ, ಓರ್ವನನ್ನು ಪೊಲೀಸರು ಬಂಧಿಸಿದ ಘಟನೆ ಶಿಕಾರಿಪುರ ತಾಲೂಕಿನ ದಿಂಡದಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ 17 ರಂದು ನಡೆದಿದೆ.

ಬಸವರಾಜ್ (34) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಖಚಿತ ವರ್ತಮಾನದ ಮೇರೆಗೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ದಾಳಿಯ ವೇಳೆ 35 ಸಾವಿರ ರೂ. ಮೌಲ್ಯದ 13 ಕೆಜಿ ತೂಕದ ಒಟ್ಟಾರೆ 28 ಹಸಿ ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶಿಕಾರಿಪುರ ಡಿವೈಎಸ್ಪಿ ಕೇಶವ್ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಆರ್ ಆರ್ ಪಾಟೀಲ್ ನೇತೃತ್ವದಲ್ಲಿ ಸದರಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಅಕ್ಟೋಬರ್ 17 ರಂದು  ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

Shikaripura, October 17: An incident occurred on October 17 in Dindadahalli village of Shikaripura taluk where the police arrested a man on charges of growing marijuana on his land.

shimoga drinking water | Shivamogga: Drinking water supply likely to be disrupted in various parts of the city on October 18! ಶಿವಮೊಗ್ಗ : ಅಕ್ಟೋಬರ್ 18 ರಂದು ನಗರದ ವಿವಿಧೆಡೆ ಕುಡಿಯುವ ನೀರು ವ್ಯತ್ಯಯ ಸಾಧ್ಯತೆ! Previous post shimoga drinking water | ಶಿವಮೊಗ್ಗ : ಅಕ್ಟೋಬರ್ 18 ರಂದು ನಗರದ ವಿವಿಧೆಡೆ ಕುಡಿಯುವ ನೀರು ವ್ಯತ್ಯಯ ಸಾಧ್ಯತೆ!