Transporting cannabis leaves - 5 people including four from Shivamogga arrested : A brilliant operation by Inspector Ravi NS's team! ಗಾಂಜಾ ಸೊಪ್ಪು ಸಾಗಾಣೆ - ಶಿವಮೊಗ್ಗದ ನಾಲ್ವರು ಸೇರಿದಂತೆ 5 ಜನರ ಬಂಧನ : ಇನ್ಸ್ಪೆಕ್ಟರ್ ರವಿ ಎನ್ ಎಸ್ ತಂಡದ ಭರ್ಜರಿ ಕಾರ್ಯಾಚರಣೆ!

nyamathi police news | ಗಾಂಜಾ ಸೊಪ್ಪು ಸಾಗಾಣೆ – ಶಿವಮೊಗ್ಗದ ನಾಲ್ವರು ಸೇರಿದಂತೆ 5 ಜನರ ಬಂಧನ : ಇನ್ಸ್‌ಪೆಕ್ಟರ್ ರವಿ ಎನ್ ಎಸ್ ತಂಡದ ಭರ್ಜರಿ ಕಾರ್ಯಾಚರಣೆ!

ನ್ಯಾಮತಿ (nyamathi), ನವೆಂಬರ್ 02: ಗಾಂಜಾ ಸೊಪ್ಪು ಸಾಗಾಣೆ ಮಾಡುತ್ತಿದ್ದ ಆರೋಪದ ಮೇರೆಗೆ, ಶಿವಮೊಗ್ಗದ ನಾಲ್ವರು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ, ನ್ಯಾಮತಿ ಠಾಣೆ ಇನ್ಸ್‌ಪೆಕ್ಟರ್ ರವಿ ಎನ್ ಎಸ್ ನೇತೃತ್ವದ ಪೊಲೀಸ್ ತಂಡ ಯಶಸ್ವಿಯಾಗಿರುವ ಘಟನೆ ನವೆಂಬರ್ 1 ರಂದು ನಡೆದಿದೆ.

ಶಿವಮೊಗ್ಗದ ಇಲಿಯಾಸ್ ನಗರದ ನಿವಾಸಿಯಾದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಅರ್ಬಾಜ್ ಖಾನ್ (27), ನ್ಯಾಮತಿ ತಾಲೂಕಿನ ಹೊಸ ಜೋಗ ಗ್ರಾಮದ ನಿವಾಸಿಯಾದ ಕೂಲಿ ಕೆಲಸ ಮಾಡುವ  ಶಂಕರನಾಯ್ಕ್ (29),

ಶಿವಮೊಗ್ಗದ ಇಲಿಯಾಸ್ ನಗರದ ನಿವಾಸಿಯಾದ ಕೂಲಿ ಕೆಲಸ ಮಾಡುವ ಮಹಮ್ಮದ್ ಹುಸೈನ್ ರಝಾ (23), ಟ್ಯಾಂಕ್ ಮೊಹಲ್ಲಾದ ನಿವಾಸಿಯಾದ ಆಟೋ ಚಾಲಕ ಜಾಫರ್ ಸಾಧಿಕ್ (22) ಹಾಗೂ ಶಿವಮೊಗ್ಗ ತಾಲೂಕಿನ ರಾಮನಗರ ಗ್ರಾಮದ ನಿವಾಸಿಯಾದ ಕೂಲಿ ಕೆಲಸ ಮಾಡುವ ಮಹಮ್ಮದ್ ರೋಹಿತ್ (31) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಹೊನ್ನಾಳ್ಳಿ – ಶಿವಮೊಗ್ಗ ರಸ್ತೆಯ ಸಾಲುಬಾಳು ಕ್ರಾಸ್ ಸಮೀಪದ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಕಚ್ಚಾ ರಸ್ತೆಯಲ್ಲಿ, ಆರೋಪಿಗಳು ಬೈಕ್ ಗಳನ್ನು ನಿಲ್ಲಿಸಿಕೊಂಡು ಕುಳಿತ್ತಿದ್ದ ವೇಳೆ, ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಪ್ಲಾಸ್ಟಿಕ್ ಚೀಲ ಮತ್ತು ಸಣ್ಣ ಪ್ಲಾಸ್ಟಿಕ್ ಕವರ್ ಗಳಲ್ಲಿ ಗಾಂಜಾ ಸೊಪ್ಪು ಪತ್ತೆಯಾಗಿದೆ. 3.20 ಲಕ್ಷ ರೂ. ಮೌಲ್ಯದ 3 ಕೆಜಿ 154 ಗ್ರಾಂ ತೂಕದ ಗಾಂಜಾ, 3 ಮೊಬೈಲ್ ಫೋನ್, 2 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊನ್ನಾಳ್ಳಿ, ನ್ಯಾಮತಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾಡಲು ಶಿವಮೊಗ್ಗದಿಂದ ತಂದಿರುವುದಾಗಿ ಆರೋಪಿಗಳು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ ಹೆಗಡೆ, ಚನ್ನಗಿರಿ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ನ್ಯಾಮತಿ ಠಾಣೆ ಇನ್ಸ್‌ಪೆಕ್ಟರ್ ರವಿ ಎನ್ ಎಸ್ ನೇತೃತ್ವದಲ್ಲಿ ಪಿಎಸ್ಐ ಹೊಳಬಸಪ್ಪ ಹೋಳಿ, ಸಿಬ್ಬಂದಿಗಳಾದ ಮಂಜಪ್ಪ, ಮಲ್ಲೇಶಪ್ಪ, ತೀರ್ಥಪ್ಪ, ವಿಕ್ರಮ್, ಚಂದ್ರಶೇಖರ್, ನಾಗರಾಜನಾಯ್ಕ್, ಶಿವರಾಜ್, ಆನಂದ್, ಚನ್ನೇಶ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ನ್ಯಾಮತಿ ಪೊಲೀಸ್ ತಂಡದ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿ ಅಭಿನಂದಿಸಿದ್ದಾರೆ.

Nyamati, November 02: On November 1, a police team led by Nyamati Police Station Inspector Ravi NS succeeded in arresting five accused, including four from Shivamogga, on charges of transporting marijuana leaves.

Shimoga District Principal District Judge Manjunath Naik transferred ಮಹತ್ತರ ಸೇವೆಯ ಮೂಲಕ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಮಂಜುನಾಥ ನಾಯಕ್ ವರ್ಗಾವಣೆ Previous post shimoga news | ಮಹತ್ತರ ಸೇವೆಯ ಮೂಲಕ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಮಂಜುನಾಥ ನಾಯಕ್ ವರ್ಗಾವಣೆ