shimoga crime news | ಶಿವಮೊಗ್ಗ | ಮಚ್ಚು ಬೀಸಿದ್ದು ಮಗನ ಮೇಲೆ ; ಕೊಲೆಯಾಗಿದ್ದು ತಾಯಿ – ಸಹೋದರರ ದುಷ್ಕೃತ್ಯ!
ಶಿವಮೊಗ್ಗ (shivamogga), ನವೆಂಬರ್ 10: ಮಾರಕಾಸ್ತ್ರದಿಂದ ಹೊಡೆದು ಮಹಿಳೆಯೋರ್ವರನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ದುಮ್ಮಳ್ಳಿಯ ಸಿದ್ದೇಶ್ವರ ನಗರದಲ್ಲಿ ನವೆಂಬರ್ 9 ರ ರಾತ್ರಿ 11 ಗಂಟೆ ಸರಿಸುಮಾರಿಗೆ ನಡೆದಿದೆ.
ಗಂಗಮ್ಮ (45) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ. ತೀವ್ರ ರಕ್ತಸ್ರಾವದಿಂದ ಮಹಿಳೆಯು ಸ್ಥಳದಲ್ಲಿಯೇ ಅಸುನೀಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ಕುರಿತಂತೆ ಕೊಲೆಗೀಡಾದ ಗಂಗಮ್ಮರ ಎದುರು ಮನೆ ನಿವಾಸಿಗಳಾದ, ಹರೀಶ್ ನಾಯ್ಕ್ ಹಾಗೂ ನಾಗೇಶ್ ನಾಯ್ಕ್ ಎಂಬ ಸಹೋದರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗಳೊಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇವರಿಬ್ಬರು ದುಮ್ಮಳ್ಳಿ ಗ್ರಾಮದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಕುರಿತಂತೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಾಯ್ತು? : ಮಂಜುನಾಥ್ ಎಂಬುವರ ಮೇಲೆ ಆರೋಪಿಯೋರ್ವ ಹಲ್ಲೆ ನಡೆಸಿದ್ದ. ಗಾಯಾಳು ಮಂಜುನಾಥ್ ಗೆ ಗಂಗಮ್ಮ ಹಾಗೂ ಅವರ ಪುತ್ರ ಜೀವನ್ ಉಪಚರಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿ ಆರೋಪಿ ಸಹೋದರರಿಬ್ಬರು ಏಕಾಏಕಿ ಜೀವನ್ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಲಾಂಗ್ ಹೊಡೆತದಿಂದ ಜೀವನ್ ತಪ್ಪಿಸಿಕೊಂಡಿದ್ದು, ಸಮೀಪದಲ್ಲಿಯೇ ಇದ್ದ ಗಂಗಮ್ಮರ ಕುತ್ತಿಗೆಗೆ ಬಿದ್ದಿದೆ ಎಂದು ಹೇಳಲಾಗಿದೆ. ಘಟನೆಯ ಕುರಿತಂತೆ ಪೊಲೀಸರ ತನಿಖೆಯಿಂದ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.
ಕ್ರಿಮಿನಲ್ಸ್ ಗಳಿಗೆ ಪೊಲೀಸರ ಭಯವೇ ಇಲ್ಲ..!
*** ಇತ್ತೀಚೆಗೆ ಶಿವಮೊಗ್ಗ ನಗರದ ಹೊರವಲಯ ಹಾಗೂ ತಾಲೂಕಿನ ಗ್ರಾಮೀಣ ಭಾಗದಲ್ಲಿ ಪುಂಡ-ಪೋಕರಿಗಳು ನಾಗರೀಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದೆ. ಗಾಂಜಾ ನಶೆ ವಿಪರೀತ ಮಟ್ಟಕ್ಕೆ ತಲುಪಿದೆ. ಪುಂಡ – ಪೋಕರಿಗಳು ಪೊಲೀಸ್ ಠಾಣೆಗೆ ತೆರಳಿದ ವೇಳೆ ಅವರಿಗೆ ತಕ್ಕ ‘ಶಾಸ್ತಿ’ಯಾಗುತ್ತಿಲ್ಲ. ರಾಜ ಮರ್ಯಾದೆ ಸಿಗುತ್ತಿದೆ ಎಂಬ ದೂರುಗಳಿವೆ. ಇದರಿಂದ ಪುಂಡರ ಹಾವಳಿ ಮತ್ತಷ್ಟು ಹೆಚ್ಚಾಗುವಂತಾಗಿದೆ. ಪೊಲೀಸರ ಬಗ್ಗೆ ಭಯವೇ ಇಲ್ಲದಂತಾಗಿದೆ. ಹೇಳುವವರು, ಕೇಳುವವರೇ ಇಲ್ಲದಂತಾಗಿದೆ ಎಂದು ಕೆಲ ಗ್ರಾಮಸ್ಥರು ಆರೋಪಿಸುತ್ತಾರೆ. ಇನ್ನಾದರೂ ಪೊಲೀಸರು ಪುಂಡಾಟಿಕೆ ನಡೆಸುವವರಿಗೆ ತಕ್ಕ ಪಾಠ ಕಲಿಸುವ ಕಾರ್ಯ ನಡೆಸಬೇಕಾಗಿದೆ. ನಾಗರೀಕರು ನೆಮ್ಮದಿಯಾಗಿ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.
Shivamogga, November 10: An incident of a woman being beaten to death with a deadly weapon took place at around 11 pm on November 9 in Siddeshwara Nagar, Dummalli, Shivamogga taluk.
