shimoga crime news | ಶಿವಮೊಗ್ಗ : ರೀಲ್ಸ್ ಅಭಿಮಾನಿ ಎಂದು ಕರೆಯಿಸಿಕೊಂಡು ಶಿಕ್ಷಕನ ದರೋಡೆ ಮಾಡಿದ ಆರೋಪಿಗಳು!
ಶಿವಮೊಗ್ಗ (shivamogga), ನವೆಂಬರ್ 10: ಇನ್’ಸ್ಟಾಗ್ರಾಂ ರೀಲ್ಸ್ ಅಭಿಮಾನಿ ಎಂದು ನಂಬಿಸಿ ಶಿಕ್ಷಕರೋರ್ವರನ್ನು ನಿರ್ಜನ ಪ್ರದೇಶಕ್ಕೆ ಕರೆಯಿಸಿಕೊಂಡು ದುಷ್ಕರ್ಮಿಗಳ ತಂಡವೊಂದು, ನಗದು – ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಶಿವಮೊಗ್ಗದ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.
ಖಾಸಗಿ ಶಾಲೆಯೊಂದರ ಶಿಕ್ಷಕ, ದರೋಡೆಗೊಳಗಾದವರೆಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಶಿಕ್ಷಕನ ಬಳಿಯಿದ್ದ ಚಿನ್ನದ ಸರ, ಕಿವಿಯೊಲೆ ಹಾಗೂ ಮೊಬೈಲ್ ಫೋನ್ ಮೂಲಕ 3500 ನಗದನ್ನು ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನೀದು ಘಟನೆ : ಶಿಕ್ಷಕರು ಇನ್’ಸ್ಟಾಗ್ರಾಂನಲ್ಲಿ ರೀಲ್ಸ್ ಅಪ್’ಲೋಡ್ ಮಾಡುತ್ತಿದ್ದರು. ಅವರ ಇನ್’ಸ್ಟಾಗ್ರಾಂಗೆ ವ್ಯಕ್ತಿಯೋರ್ವರು ಮೆಸೇಜ್ ಮಾಡಿದ್ದರು. ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಭೇಟಿಯಾಗುವ ಇಚ್ಚೆ ವ್ಯಕ್ತಪಡಿಸಿದ್ದ.
ಅದರಂತೆ ನವೆಂಬರ್ 7 ರ ರಾತ್ರಿ 9. 30 ರ ಸುಮಾರಿಗೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಬೈಕ್ ನಲ್ಲಿ ಶಿಕ್ಷಕ ತೆರಳಿದ್ದು, ಈ ವೇಳೆ ಓಮ್ನಿ ಕಾರಿನಿಂದ ವ್ಯಕ್ತಿಯೋರ್ವ ಇಳಿದು ತಾನೇ ಮೆಸೇಜ್ ಮಾಡಿದ್ದಾಗಿ ತಿಳಿಸಿದ್ದಾನೆ.
ಮಾತುಕತೆ ನಡುವೆ ಕಾರಿನಿಂದ ಇಳಿದ ಮೂವರು ಆರೋಪಿಗಳು, ಚಾಕು ತೋರಿಸಿ ಶಿಕ್ಷಕನಿಗೆ ಬೆದರಿಕೆ ಹಾಕಿದ್ದಾರೆ. ನಗನಾಣ್ಯ ದೋಚಿ ಪರಾರಿಯಾಗಿದ್ದಾರೆ. ಪೊಲೀಸ್ ತನಿಖೆಯ ನಂತರವಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.
Shivamogga, November 10: A group of miscreants lured a teacher to a deserted area, pretending to be an Instagram Reels fan, robbed him of cash and jewellery and fled the scene. The incident took place on Airport Road in Shivamogga.
