shimoga | Heavy rain is possible in Shimoga district : Yellow alert forecast! ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆ : ಯೆಲ್ಲೋ ಅಲರ್ಟ್ ಮುನ್ಸೂಚನೆ!

shimoga | ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆ : ಯೆಲ್ಲೋ ಅಲರ್ಟ್ ಮುನ್ಸೂಚನೆ!

ಶಿವಮೊಗ್ಗ (shivamogga), ಆ. 26: ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಮುಂಗಾರು ಮಳೆ (monsoon rain) ಚುರುಕುಗೊಂಡಿದೆ. ಈ ನಡುವೆ ಮುಂದಿನ 24 ಗಂಟೆಗಳ ಅವಧಿಯಲ್ಲಿ, ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗುವ (heavy rainfall) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

6 ರಿಂದ 11 ಸೆಂಟಿ ಮೀಟರ್ ನಷ್ಟು ಮಳೆ ಸಾಧ್ಯತೆಯಿದೆ ಎಂದು ತಿಳಿಸಿರುವ ಹವಾಮಾನ ಇಲಾಖೆಯು (meteorological department), ಈ ಸಂಬಂಧ ಶಿವಮೊಗ್ಗ ಜಿಲ್ಲೆಗೆ ಯೆಲ್ಲೋ ಅಲರ್ಟ್ (yellow alert) ಮುನ್ಸೂಚನೆ ನೀಡಿದೆ.

ಇತ್ತೀಚೆಗೆ ಜಿಲ್ಲೆಯಲ್ಲಿ ಮುಂಗಾರು ಮಳೆಯ (rain) ಪ್ರಮಾಣ ಕಡಿಮೆಯಾಗಿತ್ತು. ಉಕ್ಕಿ ಹರಿಯುತ್ತಿದ್ದ ಕೆರೆಕಟ್ಟೆ, ಹಳ್ಳಕೊಳ್ಳಗಳು ಸಹಜ ಸ್ಥಿತಿಗೆ ಮರಳಿದ್ದವು. ಇದೀಗ ಮತ್ತೆ ವರ್ಷಧಾರೆ ಚುರುಕುಗೊಂಡಿದೆ. ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಇದು ನಾಗರೀಕರನ್ನು ಕಂಗೆಡಿಸುವಂತೆ ಮಾಡಿದೆ.

ಸದ್ಯ ಬೀಳುತ್ತಿರುವ ಮಳೆಯು, ಮೆಕ್ಕೆಜೋಳ (maize) ಬೆಳೆಗಾರರ ನಿದ್ದೆಗಡುವಂತೆ ಮಾಡಿದೆ. ಜುಲೈ ತಿಂಗಳ ಮಳೆಗೆ ಜಿಲ್ಲೆಯ ಹಲವೆಡೆ ಮೆಕ್ಕೆಜೋಳ ಬೆಳೆ (maize crop) ಸಂಪೂರ್ಣ ಹಾಳಾಗಿತ್ತು. ಇದೀಗ ಮತ್ತೆ ಮಳೆಯಾಗುತ್ತಿರುವುದರಿಂದ ಅಳಿದುಳಿದ ಫಸಲು ನಷ್ಟವಾಗುವ ಆತಂಕ ರೈತರದ್ದಾಗಿದೆ.

Shikaripura : A young man's foot slipped and fell into a pond and he died tragically! ಶಿಕಾರಿಪುರ : ನೀರಿನ ಕೊಳಕ್ಕೆ ಕಾಲು ಜಾರಿ ಬಿದ್ದು ಯುವಕನ ದಾರುಣ ಸಾವು! Previous post shiralkoppa | ನೀರಿನ ಕೊಳಕ್ಕೆ ಕಾಲು ಜಾರಿ ಬಿದ್ದು ಯುವಕನ ದಾರುಣ ಸಾವು!
7 officials of Bengaluru Jail suspended : Actor Darshan likely to shift to another jail? ಬೆಂಗಳೂರು ಜೈಲ್ ನ 7 ಅಧಿಕಾರಿಗಳು ಸಸ್ಪೆಂಡ್ : ಬೇರೆ ಜೈಲಿಗೆ ನಟ ದರ್ಶನ್ ಶಿಫ್ಟ್ ಸಾಧ್ಯತೆ? Next post actor darshan case | ಬೆಂಗಳೂರು ಜೈಲ್ ನ 7 ಅಧಿಕಾರಿಗಳು ಸಸ್ಪೆಂಡ್ : ಬೇರೆ ಜೈಲಿಗೆ ನಟ ದರ್ಶನ್ ಶಿಫ್ಟ್ ಸಾಧ್ಯತೆ?