actor darshan case | ಬೆಂಗಳೂರು ಜೈಲ್ ನ 7 ಅಧಿಕಾರಿಗಳು ಸಸ್ಪೆಂಡ್ : ಬೇರೆ ಜೈಲಿಗೆ ನಟ ದರ್ಶನ್ ಶಿಫ್ಟ್ ಸಾಧ್ಯತೆ?
ಬೆಂಗಳೂರು (bengaluru), ಆ. 26: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ (chitradurga renukaswamy murder case) ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ (actor darshan) ಅವರು, ಕೆಲ ರೌಡಿ ಶೀಟರ್ ಗಳೊಂದಿಗೆ ಟೀ ಹಾಗೂ ಸಿಗರೇಟ್ ಸೇದುತ್ತಿರುವ ಪೋಟೋ ವೈರಲ್ ಆದ ಬೆನ್ನಲ್ಲೇ, ಹಲವು ಮಹತ್ವದ ಬೆಳವಣಿಗೆಗಳು ನಡೆಯಲಾರಂಭಿಸಿವೆ.
ನಟ ದರ್ಶನ್ (darshan) ಅವರನ್ನು ಪರಪ್ಪನ ಅಗ್ರಹಾರ ಜೈಲ್ (parappana agrahara jail) ನಿಂದ ಬಳ್ಳಾರಿ ಅಥವಾ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ವೈರಲ್ ಆದ ಫೋಟೋದಲ್ಲಿರುವ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ (rowdy sheeter naga wilson garden naga) ನನ್ನು ಕೂಡ ಬೇರೆ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಕಳೆದ 66 ದಿನಗಳಿಂದ ದರ್ಶನ್ ಜೈಲ್ ನಲ್ಲಿದ್ದಾರೆ (darshan in jail). ಜೈಲ್ ನಲ್ಲಿ ಇಬ್ಬರು ರೌಡಿ ಶೀಟರ್ ಹಾಗೂ ರೇಣುಕಾಸ್ವಾಮಿ ಹತ್ಯೆ (renukaswamy murder) ಪ್ರಕರಣದ ಮತ್ತೋರ್ವ ಆರೋಪಿಯೊಂದಿಗೆ, ದರ್ಶನ್ ಪ್ಲಾಸ್ಟಿಕ್ ಚೇರ್ ನಲ್ಲಿ ಕುಳಿತುಕೊಂಡು ಒಂದು ಕೈಯಲ್ಲಿ ಟೀ ಕಪ್ ಹಾಗೂ ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡಿರುವ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (darshan jail viral photo) ಆಗಿತ್ತು.
ಇದರ ಬೆನ್ನಲ್ಲೆ, ದರ್ಶನ್ ಅವರು ವೀಡಿಯೋ ಕಾಲ್ ನಲ್ಲಿ (darshan video call) ವ್ಯಕ್ತಿಯೋರ್ವರೊಂದಿಗೆ ಮಾತನಾಡಿರುವ ವೀಡಿಯೋ ಕೂಡ ವೈರಲ್ (viral) ಆಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗಲಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಬಂಧೀಖಾನೆ ಇಲಾಖೆಯು ಆಂತರಿಕ ತನಿಖೆಗೆ ಆದೇಶಿಸಿತ್ತು.
ಈ ನಡುವೆ ಜೈಲ್ ನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ಕಲ್ಪಿಸಲು ಅವಕಾಶ ನೀಡಿದ ಆರೋಪದ ಮೇರೆಗೆ ಏಳು ಜನ ಅಧಿಕಾರಿ – ಸಿಬ್ಬಂದಿಗಳನ್ನು ಅಮಾನತ್ತುಗೊಳಿಸಲಾಗಿದೆ (jail officer suspended). ಮತ್ತೊಂದೆಡೆ, ಜೈಲ್ ನ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
