Jog Falls viewing allowed from May 1st ಮೇ 01 ರಿಂದ ಜೋಗ ಜಲಪಾತ ವೀಕ್ಷಣೆಗೆ ಅವಕಾಶ

jogfalls | ಲಿಂಗನಮಕ್ಕಿ ಡ್ಯಾಂ ಹೊರಹರಿವು ಹೆಚ್ಚಳ : ಜೋಗದಲ್ಲಿ ಜಲಧಾರೆಯ ಭೋರ್ಗರೆತ!

ಜೋಗಫಾಲ್ಸ್ (jogfalls), ಆ. 27: ಕಳೆದ ಕೆಲ ದಿನಗಳಿಂದ, ಮಲೆನಾಡಿನಲ್ಲಿ (malnad) ಮತ್ತೆ ಮುಂಗಾರು ಮಳೆ (monsoon rain) ಚುರುಕುಗೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶ (western ghat) ಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಈ ನಡುವೆ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ, ಲಿಂಗನಮಕ್ಕಿ ಜಲಾಶಯ ಒಳಹರಿವಿನಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.

ಹಾಗೆಯೇ, ಲಿಂಗನಮಕ್ಕಿ ಡ್ಯಾಂ (linganamakki dam) ನಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣವೂ ಏರಿಕೆಯಾಗಿದೆ. ಈ ಕಾರಣದಿಂದ ವಿಶ್ವ ವಿಖ್ಯಾತ ಜೋಗ ಜಲಪಾತ (jogfalls) ಮತ್ತೆ ಮೈದುಂಬಿ ಹರಿಯಲಾರಂಭಿಸಿದೆ. ಜಲಧಾರೆಯ ವೈಭೋಗಕ್ಕೆ ಸಾಕ್ಷಿಯಾಗಿದೆ.

ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ, ಲಿಂಗನಮಕ್ಕಿ ಡ್ಯಾಂನ (linganamakki reservoir) ಒಳಹರಿವು (inflow) 36,564 ಕ್ಯೂಸೆಕ್ ಗೆ ಏರಿಕೆಯಾಗಿದೆ. 25,202 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ (outflow). ಡ್ಯಾಂನ ನೀರಿನ ಮಟ್ಟ 1817. 55 (ಗರಿಷ್ಠ ಮಟ್ಟ : 1819) ಅಡಿಯಿದೆ.  

ಕಳೆದ ಮೂರ್ನಾಲ್ಕು ದಿನಗಳಿಂದ ಹೊಸನಗರ (hosanagara) ತಾಲೂಕಿನ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗಲಾರಂಭಿಸಿದೆ (heavy rainfall). ಈ ಕಾರಣದಿಂದ ಲಿಂಗನಮಕ್ಕಿ ಡ್ಯಾಂ ಒಳಹರಿವಿ (inflow) ನಲ್ಲಿ ನಿರಂತರವಾಗಿ ಏರಿಕೆ ಕಂಡುಬರಲಾರಂಭಿಸಿದೆ.

Highest 165 mm rain in Mastikatt! ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 165 ಮಿಲಿ ಮೀಟರ್ ಮಳೆ! #ಭದ್ರಾ ಡ್ಯಾಂ, #ಲಿಂಗನಮಕ್ಕಿಡ್ಯಾಂ, # bhadra dam linganamakki dam #ತುಂಗಾಡ್ಯಾಂ, #ಮಳೆ, #ಜಲಾಶಯ, #ಅಣೆಕಟ್ಟು, #ತುಂಗಭದ್ರಾಡ್ಯಾಂ Previous post ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 165 ಮಿಲಿ ಮೀಟರ್ ಮಳೆ!
shimoga | Unidentified woman dies in Shimoga: Police appeals to help trace the heirs ಶಿವಮೊಗ್ಗದಲ್ಲಿ ಅಪರಿಚಿತ ಮಹಿಳೆ ಸಾವು : ವಾರಸುದಾರರ ಪತ್ತೆಗೆ ಸಹಕರಿಸಲು ಪೊಲೀಸರ ಮನವಿ Next post shimoga | ಶಿವಮೊಗ್ಗದಲ್ಲಿ ಅಪರಿಚಿತ ಮಹಿಳೆ ಸಾವು : ವಾರಸುದಾರರ ಪತ್ತೆಗೆ ಪೊಲೀಸರ ಮನವಿ