Hosnagar - Police attack on Adde who was making a gun in the shed of the ginger field! ಹೊಸನಗರ – ಶುಂಠಿ ಹೊಲದ ಶೆಡ್ ನಲ್ಲಿ ನಾಡ ಬಂದೂಕು ತಯಾರಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ!

hosanagara | ಹೊಸನಗರ – ಶುಂಠಿ ಹೊಲದ ಶೆಡ್ ನಲ್ಲಿ ನಾಡ ಬಂದೂಕು ತಯಾರಿ..!

ಹೊಸನಗರ (hosanagara), ಸೆ. 11: ಜಮೀನೊಂದರಲ್ಲಿ ನಾಡ ಬಂದೂಕು (ಕೋವಿ) ತಯಾರಿಸುತ್ತಿದ್ದ ಶೆಡ್ (shed) ಮೇಲೆ ಪೊಲೀಸರು ದಾಳಿ (police raid) ನಡೆಸಿದ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಜೇನಿ ಹೋಬಳಿ ಕಾಳಿಕಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.

ಖಚಿತ ವರ್ತಮಾನದ ಮೇರೆಗೆ ಹೊಸನಗರ ಪೊಲೀಸ್ ಠಾಣೆ (hosanagara police station) ಸಬ್ ಇನ್ಸ್’ಪೆಕ್ಟರ್ ಶಂಕರಗೌಡ ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ಪೊಲೀಸರ ದಾಳಿಯ ಮಾಹಿತಿ ಅರಿತ ಆರೋಪಿಗಳು (accused), ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ತೀರ್ಥಹಳ್ಳಿ ಡಿವೈಎಸ್ಪಿ (dysp) ಗಜಾನನ ವಾಮನ ಸುತಾರ, ಇನ್ಸ್’ಪೆಕ್ಟರ್ (inspector) ಗುರಣ್ಣಹೆಬ್ಬಾರ್ ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊಸನಗರ ಠಾಣೆಯಲ್ಲಿ ಮೂವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.

ತಯಾರಿಗೆ ಸಜ್ಜು : ಮೂವರು ಆರೋಪಿಗಳು ಶುಂಠಿ ಹೊಲದ ಶೆಡ್ (ginger field shed) ನಲ್ಲಿ ನಾಡ ಬಂದೂಕು (country gun) ತಯಾರಿಗೆ ಸಕಲ ಸಿದ್ದತೆ ಮಾಡಿಕೊಂಡಿದ್ದರು. ದಾಳಿ ವೇಳೆ ಬಂದೂಕು ತಯಾರಿಗೆ ಬಳಸುವ ನಳಿಕೆಗಳು, ಮರದ ಹಿಡಿಕೆ, ಟ್ರಿಗರ್, ಕೇಪ್, ಮದ್ದುಗುಂಡುಗಳನ್ನು ಪೊಲೀಸರು (police) ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳ ಬಂಧನದ ನಂತರವಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.

shimoga | Shivamogga : Ganeshotsava witnessing Hindu-Muslim harmony in Ragigudda! ಶಿವಮೊಗ್ಗ : ರಾಗಿಗುಡ್ಡದಲ್ಲಿ ಹಿಂದೂ – ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಗಣೇಶೋತ್ಸವ! Previous post shimoga | ಶಿವಮೊಗ್ಗ : ರಾಗಿಗುಡ್ಡ ಬಡಾವಣೆಯಲ್ಲಿ ಹಿಂದೂ – ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಗಣೇಶೋತ್ಸವ!
bengaluru | Harassment of micro finance dealers in rural areas: What did the CM say? bengaluru | ಗ್ರಾಮೀಣ ಭಾಗದಲ್ಲಿ ಮೈಕ್ರೋ ಫೈನಾನ್ಸ್ ದಂಧೆಕೋರರ ಕಿರುಕುಳ : ಸಿಎಂ ಹೇಳಿದ್ದೇನು? Next post bengaluru | ಬೆಂಗಳೂರು | ‘ಸಿಎಂ ಹುದ್ದೆ ಖಾಲಿಯಿಲ್ಲ : ನಾನೇ ಮುಂದುವರೆಯುತ್ತೆನೆ’ : ಸಿದ್ದರಾಮಯ್ಯ