Private bus accident near Hulikal Ghat: Child dies - 10 passengers injured ಹುಲಿಕಲ್ ಘಾಟ್ ಬಳಿ ಖಾಸಗಿ ಬಸ್ ಅಪಘಾತ : ಮಗು ಸಾವು – 10 ಪ್ರಯಾಣಿಕರಿಗೆ ಗಾಯ

hosanagara accident news | ಹುಲಿಕಲ್ ಘಾಟ್ ಬಳಿ ಖಾಸಗಿ ಬಸ್ ಅಪಘಾತ : ಮಗು ಸಾವು – 10 ಪ್ರಯಾಣಿಕರಿಗೆ ಗಾಯ

ಹೊಸನಗರ (hosanagar), ಡಿಸೆಂಬರ್ 30: ಖಾಸಗಿ ಬಸ್ ವೊಂದು ರಸ್ತೆ ಬದಿಯ ಧರೆಗೆ ಡಿಕ್ಕಿಯಾದ ಪರಿಣಾಮ, ಮಗುವೊಂದು ಸ್ಥಳದಲ್ಲಿಯೇ ಮೃತಪಟ್ಟು 10 ಪ್ರಯಾಣಿಕರು ಗಾಯಗೊಂಡ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಲಿಕಲ್ ಘಾಟಿ ಮಾರ್ಗದಲ್ಲಿ ನಡೆದಿದೆ.

ಡಿಸೆಂಬರ್ 30 ರ ಮುಂಜಾನೆ 2. 30 ರಿಂದ 3 ಗಂಟೆ ಅವಧಿಯಲ್ಲಿ ಸದರಿ ಅಪಘಾತ ಸಂಭವಿಸಿದೆ. ಬಂಟ್ವಾಳದ ಮುಸ್ತಾಫ ಎಂಬುವರ ಪುತ್ರಿ, ಒಂದೂವರೆ ವರ್ಷದ ರೀಶ್ನಾ ಫಾತಿಮಾ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ.

ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ದುರ್ಗಾಂಬ ಸಂಸ್ಥೆಗೆ ಸೇರಿದ ಖಾಸಗಿ ಬಸ್ ಅಪಘಾತಕ್ಕೀಡಾದ ಬಸ್ ಆಗಿದೆ. ಘಟನೆಯಲ್ಲಿ ಮೂವರು ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದ ಪ್ರಯಾಣಿಕರು ಸ್ಥಳೀಯ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಕ್ಕಿಯ ತೀವ್ರತೆಗೆ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಬಸ್ ಚಾಲಕನ ಅಜಾಗರೂಕ ಚಾಲನೆಯೇ ಅವಘಡಕ್ಕೆ ಕಾರಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ ಶಿವಾನಂದ ಕೋಳಿ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hosanagar, December 30: A child died on the spot and 10 passengers were injured when a private bus hit a roadside embankment on the Hulikal Ghati route in Hosanagar taluk of Shivamogga district.

Shivamogga: ‘A penny’s worth of buttermilk for an elephant’s stomach…!’ - Basavanagangur Lake not filling up even after water is diverted from Tunga River! *Villagers’ discontent with the Small Irrigation Department ಶಿವಮೊಗ್ಗ : ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ…!’ - ತುಂಗಾ ನದಿಯಿಂದ ನೀರು ಹರಿಸಿದರೂ ಭರ್ತಿಯಾಗದ ಬಸವನಗಂಗೂರು ಕೆರೆ! *ಸಣ್ಣ ನೀರಾವರಿ ಇಲಾಖೆ ವಿರುದ್ದ ಗ್ರಾಮಸ್ಥರ ಅಸಮಾಧಾನ Previous post shimoga news | ಶಿವಮೊಗ್ಗ : ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ…!’ – ತುಂಗಾ ನದಿಯಿಂದ ನೀರು ಹರಿಸಿದರೂ ಭರ್ತಿಯಾಗದ ಬಸವನಗಂಗೂರು ಕೆರೆ!
Shivamogga: Houses damaged by cylinder explosion – Donors join hands with Red Cross to help ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ರೆಡ್’ಕ್ರಾಸ್ ಸಂಸ್ಥೆ ಸೇರಿದಂಥೆ ದಾನಿಗಳ ನೆರವಿನಹಸ್ತ Next post shimoga news | ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ರೆಡ್’ಕ್ರಾಸ್ ಸಂಸ್ಥೆ ಸೇರಿದಂತೆ ದಾನಿಗಳ ನೆರವಿನಹಸ್ತ