shimoga | An anonymous person died at Shimoga KSRTC bus station! ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿ ಸಾವು!

shimoga | ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿ ಸಾವು!

ಶಿವಮೊಗ್ಗ (shivamogga), ಆ. 31: ಇತ್ತೀಚೆಗಷ್ಟೆ ಶಿವಮೊಗ್ಗ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ (ksrtc bus stand) ದಲ್ಲಿ ಅನಾಮಧೇಯ ಮಹಿಳೆಯೋರ್ವರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ, ಅನಾಮಧೇಯ ಪುರುಷರೋರ್ವರು ಮೃತಪಟ್ಟ ಘಟನೆ ನಡೆದಿದೆ.

ಬಸ್ ನಿಲ್ದಾಣದ ಬಳಿ ಸುಸ್ತಾಗಿ ಮಲಗಿದ್ದ ಸುಮಾರು 50 ರಿಂದ 55 ವರ್ಷ ವಯಸ್ಸಿನ ಅಪರಿಚಿತ ಪುರುಷನನ್ನು ಆ. 24 ರಂದು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮೃತ ವ್ಯಕ್ತಿಯು ಸರಿಸುಮಾರು 5 ಅಡಿ 6 ಇಂಚು ಎತ್ತರ, ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಸುಮಾರು 8 ಇಂಚು ಉದ್ದ ಬಿಳಿ ಕೂದಲು, ಹಣೆ ಮಧ್ಯಭಾಗದಲ್ಲಿ ಕಪ್ಪು ಹಚ್ಚೆ ಇರುತ್ತದೆ,

ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ (doddapete police station), ದೂ.ಸಂ: 08182-261414, 9916882544 ನ್ನು ಸಂಪರ್ಕಿಸಬಹುದೆಂದು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

anywhere registration of property system from Sep 2 ಸೆ. 2 ರಿಂದ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿ : ಏನೀದು ಹೊಸ ವ್ಯವಸ್ಥೆ? Previous post shimoga | ಸೆ. 2 ರಿಂದ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿ : ಏನೀದು ಹೊಸ ವ್ಯವಸ್ಥೆ?
Meeting at Bangalore KPCC office - CM, DCM meeting ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಸಭೆ - ಸಿಎಂ, ಡಿಸಿಎಂ ಸಭೆ Next post bengaluru | ಬೆಂಗಳೂರು KPCC ಕಚೇರಿಯಲ್ಲಿ ಸಭೆ – ಸಿಎಂ, ಡಿಸಿಎಂ ಭಾಗಿ