shimoga | ಶಿವಮೊಗ್ಗ : ಶೂ ಒಳಗೆ ಅಡಗಿದ್ದ ನಾಗರಹಾವಿನ ಮರಿ..!
ಶಿವಮೊಗ್ಗ (shivamogga), ಡಿ. 22: ಮನೆಯೊಳಗೆ ಆಗಮಿಸಿದ ನಾಗರಹಾವಿನ ಮರಿಯೊಂದು, ಶೂ ಒಳಗೆ ಅವಿತುಕೊಂಡಿದ್ದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಡಿ. 20 ರಂದು ಗೋಪಾಳಗೌಡ ಬಡಾವವಣೆಯ ಆದಾಯ ತೆರಿಗೆ ಇಲಾಖೆಗೆ ಸೇರಿದ ಕ್ವಾಟರ್ಸ್ ನಲ್ಲಿನ ಸೇವಂತ್ ಎಂಬುವರಿಗೆ ಸೇರಿದ ಮನೆಯ ಬಳಿ ಸದರಿ ಘಟನೆ ನಡೆದಿದೆ.
ಮನೆಯ ಹೊರಭಾಗದಲ್ಲಿ ನಾಗರಹಾವಿನ ಮರಿ ಕಾಣಿಸಿಕೊಂಡಿತ್ತು. ತದನಂತರ ಮನೆಯೊಳಗೆ ಪ್ರವೇಶಿಸಿ, ಶೂ ಒಳಗೆ ಸೇರಿಕೊಂಡಿತ್ತು. ಇದನ್ನು ಗಮನಿಸಿದ ಕುಟುಂಬದವರು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು.
ಸ್ಥಳಕ್ಕಾಗಮಿಸಿದ ಕಿರಣ್ ಅವರು ಸುರಕ್ಷಿತವಾಗಿ ಹಾವಿನ ಮರಿಯನ್ನು ಸಂರಕ್ಷಣೆ ಮಾಡಿದ್ದಾರೆ. ಇದರಿಂದ ಕುಟುಂಬದವರು ನಿಟ್ಟುಸಿರು ಬಿಡುವಂತಾಗಿದೆ.
‘ಸದರಿ ಹಾವು ಸುಮಾರು ಒಂದೂವರೆ ಅಡಿಯಷ್ಟು ಉದ್ದವಿದೆ. ಶೂಗಳನ್ನು ಹಾಕಿಕೊಳ್ಳುವ ಮುನ್ನ ಪರಿಶೀಲಿಸಿ ಹಾಕಿಕೊಳ್ಳಬೇಕು’ ಎಂದು ಕಿರಣ್ ಅವರು ನಾಗರೀಕರಿಗೆ ಸಲಹೆ ನೀಡಿದ್ದಾರೆ.
shivamogga, december 22: The incident took place in Shimoga city where a baby cobra got inside the house and got stuck inside the shoe.
On December 20, the said incident took place near the house belonging to Sevant in the quarters belonging to the Income Tax Department of Gopalagowda Badavavane.
shimoga city snake rescuer snake Kiran reached the spot and saved the baby snake safely. This has given the family a sigh of relief.
