
shimoga | ಶಿವಮೊಗ್ಗ : ಭಾರೀ ಪ್ರಮಾಣದ ಗಾಂಜಾ ನಾಶಗೊಳಿಸಿದ ಪೊಲೀಸ್ ಇಲಾಖೆ!
ಶಿವಮೊಗ್ಗ (shivamogga), ಜ. 16: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ವಶಕ್ಕೆ ಪಡೆದಿದ್ದ ಭಾರೀ ಪ್ರಮಾಣದ ಗಾಂಜಾವನ್ನು, ಜ. 16 ರಂದು ಪೊಲೀಸ್ ಇಲಾಖೆ ನಾಶಗೊಳಿಸಿದೆ.
ಈ ಕುರಿತಂತೆ ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ನಗರದ ಹೊರವಲಯ ಮಾಚೇನಹಳ್ಳಿಯಲ್ಲಿರುವ ಶುಶೃತ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್’ಮೆಂಟ್ ಸೊಸೈಟಿ ಸಂಕೀರ್ಣದಲ್ಲಿರುವ ದಹನ ಕೇಂದ್ರದಲ್ಲಿ ಗಾಂಜಾ ನಾಶಗೊಳಿಸಲಾಗಿದೆ.
ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿ ಅಧ್ಯಕ್ಷರೂ ಆದ ಎಸ್ಪಿ ಜಿ ಕೆ ಮಿಥುನ್ ಕುಮಾರ್ ಸಮ್ಮುಖದಲ್ಲಿ ಗಾಂಜಾ ನಾಶಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಒಟ್ಟಾರೆ 43 ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದ, 21. 84 ಲಕ್ಷ ರೂ. ಮೌಲ್ಯದ 56 ಕೆಜಿ 740 ಗ್ರಾಂ ತೂಕದ ಗಾಂಜಾ ನಾಶಗೊಳಿಸಲಾಗಿದೆ. ಗಾಂಜಾ ಮಾರಾಟ, ಸಾಗಾಟ, ಸಂಗ್ರಹಣೆ ಮಾಡುವವರ ಹಾಗೂ ಬೆಳೆಯುವವರ ವಿರುದ್ದ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳುತ್ತಿದೆ ಎಂದು ಇಲಾಖೆ ತಿಳಿಸಿದೆ.
ಗಾಂಜಾ ಮಾರಾಟ, ಸಾಗಟ, ಸಂಗ್ರಹಣೆ ಮತ್ತು ಬೆಳೆಯುವವರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿದುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸ್ ಇಲಾಖೆ ಹೇಳಿದೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎ ಜಿ ಕಾರ್ಯಪ್ಪ, ಶುಶೃತ ಬಯೋ ಮೆಡಿಕಲ್ ಪ್ರೈವೇಟ್ ಲಿಮಿಟೆಡ್ ಸೊಸೈಟಿ ಸಂಸ್ಥಾಪಕರಾದ ಶೇಖರ್, ಅಧ್ಯಕ್ಷರಾದ ಡಾ ಗಿರೀಶ್ ಸಿ ಎಸ್,
ಪರಿಸರ ಅಧಿಕಾರಿ ರಮೇಶ್ ವಿ, ಶಿವಮೊಗ್ಗ ಉಪ ವಿಭಾಗದ ಡಿವೈಎಸ್ಪಿ ಬಾಬು ಆಂಜನಪ್ಪ, ಭದ್ರಾವತಿ ಉಪ ವಿಭಾಗದ ಡಿವೈಎಸ್ಪಿ ನಾಗರಾಜ್ ಮೊದಲಾದವರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
On January 16, the police department destroyed the huge amount of ganja that was seized from different parts of the district.
The District Police Department has issued a press release in this regard. The cannabis was destroyed at the incineration center at Sushruta Bio-Medical Waste Management Society’s complex in Machenahalli on the outskirts of the city.
If the public knows information about the sale, transportation, storage and cultivation of ganja, they should inform the police department and cooperate. The police department said that the details of the informant will be kept confidential.