
shimoga | ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಬ್ಲಾಕ್ ಗಳ ಹಂಚಿಕೆ : DC ಮಹತ್ವದ ಆದೇಶ!
ಶಿವಮೊಗ್ಗ (shivamogga), ಫೆ. 19: ಜಿಲ್ಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವ್ಯಾಪ್ತಿಗೊಳಪಡುವ, ವಿವಿಧ ತಾಲೂಕುಗಳಲ್ಲಿನ ಮರಳು ಬ್ಲಾಕ್ ಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ವಿವಿಧ ಕಾರ್ಯಾನುಷ್ಟಾನ ಇಲಾಖೆಗಳಿಂದ, ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿರಿಸುವಂತೆ ಕೋರಿರುವ ಹಿನ್ನೆಲೆಯಲ್ಲಿ, ಸರ್ಕಾರದ ನಿಬಂಧನೆಗಳಿಗೊಳಪಟ್ಟು ಕಾಯ್ದಿರಿಸಲು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮರಳು ಬ್ಲಾಕ್ ಗಳನ್ನು ನಿರ್ವಹಿಸುವ ಕಾರ್ಯಾನುಷ್ಠಾನ ಇಲಾಖೆಯ ಜವಾಬ್ದಾರಿಯುತ ಹಿರಿಯ ಅಧಿಕಾರಿಗಳು, ತಮ್ಮ ವಶಕ್ಕೆ ಪಡೆದುಕೊಳ್ಳುವ ಬ್ಲಾಕ್ ಗಳನ್ನು ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ಹಾಗೂ ದೂರುಗಳು ಬಾರದಂತೆ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಸ್ಥಳದಲ್ಲಿ ಅಗತ್ಯ ಸಿಬ್ಬಂಧಿಯನ್ನು ನಿಯೋಜಿಸಿಕೊಳ್ಳುವಂತೆ ಸೂಚಿಸಿದರು.
ಪ್ರತಿ ಮರಳು ಬ್ಲಾಕ್ ಗಳಲ್ಲಿ ನಿಯಮಾನುಸಾರ ವೇಬ್ರಿಡ್ಜ್, ಕಣ್ಗಾವಲಿಗಾಗಿ ಸಿ.ಸಿ.ಕ್ಯಾಮರಾ ಅಳವಡಿಸಬೇಕು. ಮರಳು ಬ್ಲಾಕ್ ಗಳನ್ನು ವಶಕ್ಕೆ ಪಡೆದವರು ಕಟ್ಟುನಿಟ್ಟಾಗಿ ನಿಯಮಗಳ ಪಾಲನೆ ಮಾಡಬೇಕು. ಈ ಬಗ್ಗೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನಾ ವರದಿ ನೀಡಿದ ನಂತರ, ಬ್ಲಾಕ್ ಗಳ ಹಸ್ತಾಂತರಕ್ಕೆ ಕ್ರಮ ವಹಿಸಲಾಗುವುದು. ಈ ನಿಯಮ ಅನುಸರಣೆಯಲ್ಲಿ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳು, ದೂರುಗಳು ಬಂದಲ್ಲಿ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಕಾಯ್ದಿರಿಸಿದ ಮರಳು ಬ್ಲಾಕ್ ಗಳನ್ನು ಹೊರತುಪಡಿಸಿ, ಉಳಿದ ಬ್ಲಾಕ್ ಗಳನ್ನು ಮೀಸಲಾತಿಯನ್ವಯ ವಿಲೇಮಾಡಲು ಸೂಚಿಸಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಉಪಸ್ಥಿತ ಸಮಿತಿ ಸದಸ್ಯರ ಸಮ್ಮುಖದಲ್ಲಿ 25 ಮರಳು ಬ್ಲಾಕ್ ಗಳಿಗೆ ಲಾಟರಿ ಮೂಲಕ ಮೀಸಲಾತಿ ನಿಗಧಿಪಡಿಸಿ ಘೋಷಿಸಿದರು.
ಉಪಖನಿಜ ಕಾಯ್ದೆಗಳ ನಿಯಮಾನುಸಾರ ಈ ಹಿಂದೆ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿದ್ದ ಮರಳು ಬ್ಲಾಕ್ಗಳನ್ನು ವಿಲೇಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ತಿಳಿಸಿದ ಅವರು, ಮೀಸಲಿರಿಸಿದ ಮರಳು ಬ್ಲಾಕ್ಗಳನ್ನು ಹೊರತುಪಡಿಸಿ, ಉಳಿದವುಗಳಿಗೆ ಮೀಸಲಾತಿ ಪ್ರಕಟಿಸಿರುವುದಾಗಿ ತಿಳಿಸಿದರು.
ಹುಣಸವಳ್ಳಿ-01(ಪ.ಜಾ), ನಂಬಳ (ಇತರೆ), ಮಳಲೂರು-01 (ಪ.ಪಂ.),ತೂದೂರು-01 (ಇತರೆ), ಬೇಗುವಳ್ಳಿ-03 (ಇತರೆ), ಬೇಗುವಳ್ಳಿ-01(ಇತರೆ), ದಬ್ಬಣಗದ್ದೆ-03 (ಇತರೆ), ಸಿದ್ಲೀಪುರ-02(ವಿಕಲಚೇತನ),
ಗುರುವಿನಕಟ್ಟೆ- (ಪ.ಜಾ.),ದಬ್ಬಣಗದ್ದೆ-01 (ಇತರೆ), ಕೂಡಲಿ- (ಇತರೆ), ಬಗ್ಗೋಡಿಗೆ- (ಇತರೆ), ದಬ್ಬಣಗದ್ದೆ-06(ಇತರೆ), ಸುತ್ತಾ-02 (ಇತರೆ), ದಬ್ಬಣಗದ್ದೆ-07 (ಪ.ಜಾ), ಬಗ್ಗೋಡಿಗೆ-02 (ಇತರೆ), ಮಣಶೆಟ್ಟಿ- ( ಇತರೆ),
ಸನ್ಯಾಸಿಕೋಡಮಗ್ಗಿ-02 (ಪ.ಪಂ.), ತೂದೂರು-03 (ಇತರೆ), ಮಳಲೂರು-02 (ಇತರೆ), ಅರೆಹಳ್ಳಿ- ( ಇತರೆ), ಸೋನಲೆ-01 (ಇತರೆ), ಕೂಡಲಿ-01 (ವಿಕಲಚೇತನ ಪ.ಜಾ.) ಮರಳು ಬ್ಲಾಕ್ ಗಳಿಗೆ ಮೀಸಲಾತಿ ನಿಗಧಿಪಡಿಸಿ ಪ್ರಕಟಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಹಿರಿಯ ಭೂವಿಜ್ಞಾನಿ ಪಿ.ಕೆ.ನಾಯ್ಕ್ ಸೇರಿದಂತೆ ಸಂಬಂಧಿತ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
shimoga, february 19: In view of the request from the local people’s representatives and various working departments to earmark the sand blocks for various development works of the government, the Senior Geoscientists of the District Mines and Geology Department have been instructed to reserve them as per the government regulations. shimoga dc Gurudatta Hegade said.
Weybridge should be installed in each sand block as per rules, CC camera for surveillance. Those who take possession of the sand blocks must strictly follow the rules.