shimoga | Shimoga: Dangerous roads near schools - Children's Welfare Committee President's visit! shimoga | ಶಿವಮೊಗ್ಗ : ಶಾಲೆಗಳ ಸಮೀಪ ಅಪಾಯಕಾರಿ ಹೆದ್ಧಾರಿಗಳು - ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಭೇಟಿ!

shimoga | ಶಿವಮೊಗ್ಗ : ಶಾಲೆಗಳ ಸಮೀಪ ಅಪಾಯಕಾರಿ ಹೆದ್ಧಾರಿಗಳು – ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಭೇಟಿ!

ಶಿವಮೊಗ್ಗ (shivamogga), ಫೆ. 25: ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪ ಬಡಾವಣೆಯಲ್ಲಿ ಶಾಲೆಗಳ ಸಮೀಪವೇ ಹಾದು ಹೋಗಿರುವ, ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳನ್ನು ಫೆ. 25 ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿಯಿತ್ತು ಪರಿಶೀಲಿಸಿದರು.

ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಹಾಗೂ ಸದಸ್ಯರಾದ ಗಣಪತಿರವರು ಭೇಟಿ ವೇಳೆ ಉಪಸ್ಥಿತರಿದ್ದರು. ಸರ್ಕಾರಿ ಶಾಲೆ, ಖಾಸಗಿ ಶಾಲೆಗಳ ಬಳಿಯ ಹೆದ್ದಾರಿಗಳ ವೀಕ್ಷಣೆ ಮಾಡಿದರು. ಶಾಲೆಗಳ ಶಿಕ್ಷಕರನ್ನು ಭೇಟಿಯಾಗಿ ಚರ್ಚಿಸಿದರು.

‘ಸೋಮಿನಕೊಪ್ಪ ಮೂಲಕ ಹಾದು ಹೋಗಿರುವ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ, ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಜನ – ವಾಹನ ನಿಬಿಡ ರಸ್ತೆಗಳಾಗಿವೆ. ಶಾಲೆಗಳ ಬಳಿ ಕನಿಷ್ಠ ಸುರಕ್ಷತಾ ಕ್ರಮಗಳ ಪಾಲನೆಯಾಗಿಲ್ಲ. ಮಿತಿಮೀರಿದ ವೇಗದಲ್ಲಿ ವಾಹನಗಳು ಸಂಚರಿಸುವುದರಿಂದ, ಶಾಲಾ ಮಕ್ಕಳು ಜೀವ ಕೈಯಲ್ಲಿಡುದ ಹೆದ್ದಾರಿ ದಾಟುವಂತಹ ದುಃಸ್ಥಿತಿಯಿದೆ’ ಎಂದು ಸ್ಥಳೀಯ ಯುವ ಮುಖಂಡ ಮುಸ್ಸೀ ಗೌಡ ಅವರು ತಿಳಿಸಿದ್ದಾರೆ.

ಈ ಕಾರಣದಿಂದ ಶಾಲೆಗಳ ಬಳಿ ವೈಜ್ಞಾನಿಕ ರಸ್ತೆ ಉಬ್ಬು, ಸೂಚನಾ ಫಲಕಗಳ ಅಳವಡಿಕೆ, ಬ್ಯಾರಿಕೇಡ್ ಗಳನ್ನು ಹಾಕಬೇಕು. ಶಾಲಾ ಮಕ್ಕಳು ಸುರಕ್ಷಿತವಾಗಿ ಓಡಾಡಲು ಪಿಡಬ್ಲ್ಯೂಡಿ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸ್ಥಳಕ್ಕಾಗಮಿಸಿ ಸಮಸ್ಯೆಯ ಖುದ್ದು ಅವಲೋಕನ ನಡೆಸಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಮುಸ್ಸೀಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಮುಖಂಡ ಮೊಹಮ್ಮದ್ ಮೌಸೀನ್ ಅವರು ಮಾತನಾಡಿ, ಇತ್ತೀಚೆಗೆ ರಸ್ತೆ ದಾಟುತ್ತಿದ್ದ ತಮ್ಮ ಪುತ್ರನಿಗೆ ಬೈಕ್ ವೊಂದು ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ನಡೆದಿದೆ. ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿವೆ. ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡುವಂತೆ ಮಕ್ಕಳ ಕಲ್ಯಾಣ ಸಮಿತಿಗೆ ಮನವಿ ಮಾಡಿದರು.

ಸಾರ್ವಜನಿಕರು ಹಾಗೂ ಶಿಕ್ಷಕರ ಅಹವಾಲು ಆಲಿಸಿದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಅವರು ಮಾತನಾಡಿ, ‘ಈ ಕುರಿತಂತೆ ಸಮಿತಿ ಮೂಲಕ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತರುವ ಕಾರ್ಯ ನಡೆಸಲಾಗುವುದು. ಹಾಗೆಯೇ ಪತ್ರ ಬರೆದು, ಹೆದ್ದಾರಿಗಳ ಬಳಿ ಮಕ್ಕಳ ಸುರಕ್ಷತೆಗೆ ಅಗತ್ಯವಾದ ಎಲ್ಲ ಕ್ರಮಗಳ ಪಾಲನೆ ಮಾಡುವಂತೆ ಕೋರಲಾಗುವುದು’ ಎಂದು ತಿಳಿಸಿದ್ದಾರೆ.

ವರದಿಗೆ ಸ್ಪಂದನೆ : ಸೋಮಿನಕೊಪ್ಪದ ಮೂಲಕ ಹಾದು ಹೋಗಿರುವ ರಾಜ್ಯ ಹಾಗೂ ಜಿಲ್ಲಾ ಹೆದ್ಧಾರಿಗಳು, ಅಪಾಯಕಾರಿ ಸ್ಥಿತಿಯಲ್ಲಿರುವ ಕುರಿತಂತೆ ಇತ್ತೀಚೆಗೆ www.udayasaakshi.com ನ್ಯೂಸ್ ವೆಬ್’ಸೈಟ್ ವರದಿ ಪ್ರಕಟಿಸಿತ್ತು. ಸದರಿ ವರದಿ ಗಮನಿಸಿದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ತಾಜುದ್ಧೀನ್ ಅವರು, ಖುದ್ದು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅವರ ಜನಪರ ಕಾಳಜಿ ಅಭಿನಂದನಾರ್ಹವಾದುದಾಗಿದೆ.

Shimoga, February 25: On February 25, the chairman and members of the district child welfare committee met and inspected the state and district highways that pass near schools in Sominakoppa extension, the outskirts of Shimoga city.

Committee Chairman Tajuddin and member Ganapathi were present during the meeting. He observed the highways near government schools and private schools. He met and discussed with the teachers of the schools.

The news website www.udayasaakshi.com recently published a report about the state and district highways passing through Sominakoppa, which are in a dangerous condition. Taking note of the report, Child Welfare Committee Chairman Tajuddin personally went to the spot and inspected it. His concern for the people is commendable. Local citizens have expressed appreciation for this.

Shimoga: The case of three dead bodies found in Tunga Dam backwater – what is the police announcement? shimoga | ಶಿವಮೊಗ್ಗ : ಮೂವರ ಶವ ಪತ್ತೆ ಪ್ರಕರಣ – ಪೊಲೀಸ್ ಪ್ರಕಟಣೆಯೇನು? Previous post shimoga | ಶಿವಮೊಗ್ಗ : ಮೂವರ ಶವ ಪತ್ತೆ ಪ್ರಕರಣ – ಪೊಲೀಸ್ ಪ್ರಕಟಣೆಯೇನು?
shimoga | ಶಿವಮೊಗ್ಗ : ಶಿವರಾತ್ರಿ ಜಾತ್ರಾ ಮಹೋತ್ಸವ - ವಾಹನಗಳ ಸಂಚಾರ ಮಾರ್ಗ ಬದಲಾವಣೆ! Shimoga: Shivratri Jatra celebration - change of traffic route of vehicles! Next post shimoga | ಶಿವಮೊಗ್ಗ : ಶಿವರಾತ್ರಿ ಜಾತ್ರಾ ಮಹೋತ್ಸವ – ವಾಹನಗಳ ಸಂಚಾರ ಮಾರ್ಗ ಬದಲಾವಣೆ!