Holiday declared for Anganwadi schools and colleges in Shivamogga and Bhadravati taluks on July 4 ಶಿವಮೊಗ್ಗ ಭದ್ರಾವತಿ ತಾಲೂಕುಗಳ ಅಂಗನವಾಡಿ ಶಾಲೆ – ಕಾಲೇಜುಗಳಿಗೆ ಜುಲೈ 4 ರಂದು ರಜೆ ಘೋಷಣೆ

rain alert | ಬೇಸಿಗೆ ರಣ ಬಿಸಿಲಿನ ನಡುವೆ ಮಳೆ ಮುನ್ಸೂಚನೆ : ಯಾವಾಗ? ಎಲ್ಲೆಲ್ಲಿ?

ಬೆಂಗಳೂರು (bengaluru), ಮಾ. 10: ರಾಜ್ಯಾದ್ಯಂತ ರಣ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತಾಪಮಾನದ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಮತ್ತೊಂದೆಡೆ, ಕೆಲ ತಿಂಗಳುಗಳಿಂದ ಮಲೆನಾಡು ಸೇರಿದಂತೆ ವಿವಿಧೆಡೆ ಮಳೆ ಕಣ್ಮರೆಯಾಗಿದೆ.

ಈ ನಡುವೆ ಭಾರತೀಯ ಹವಾಮಾನ ಇಲಾಖೆಯು, ಮಳೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ, ಕರ್ನಾಟಕದ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.

ರಾಜ್ಯಕ್ಕೆ ಶೀಘ್ರದಲ್ಲಿಯೇ ಪೂರ್ವ ಮುಂಗಾರು ಮಳೆ ಆಗಮನವಾಗಲಿದೆ. ಮಾರ್ಚ್ 11 ಹಾಗೂ 12 ರಂದು ದಕ್ಷಿಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಕು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ಹೇಳಲಾಗಿದೆ.

ಕಣ್ಮರೆ : ಮಲೆನಾಡು ಭಾಗದಲ್ಲಿ ಸರಿಸುಮಾರು ಕಳೆದೆರೆಡು ತಿಂಗಳುಗಳಿಂದ ಮಳೆ ಕಣ್ಮರೆಯಾಗಿದೆ. ಬಿಸಿಲ ಬೇಗೆ ಹೆಚ್ಚಾಗಿದೆ. ತಾಪಮಾನ ಏರಿಕೆಯಿಂದ ಜಲಮೂಲಗಳು ಒಣಗಲಾರಂಭಿಸಿವೆ.  ಮುಂಗಾರು ಪೂರ್ವ ಮಳೆಯ ನಿರೀಕ್ಷೆಯಲ್ಲಿ ನಾಗರೀಕರಿದ್ದಾರೆ.

Bengaluru, Mar 10: The scorching heat across the state is increasing day by day. This time, there has been a significant increase in the temperature compared to last year. On the other hand, rains have disappeared in various places including Malnad for the past few months.

Meanwhile, the Indian Meteorological Department has issued a rain forecast. It has informed that there is a possibility of rain in many parts of Karnataka due to the weather disturbance in the Bay of Bengal.

The Meteorological Department forecast states that there is a possibility of rain in Uttara Kannada, Dakshina Kannada, Udupi, Bangalore Rural, Bangalore Urban, Chamarajanagar, Chikkamagaluru, Hassan, Kodak, Kolar, Mandya, Mysore, Ramanagara, and Shivamogga districts.

Champions Trophy 2025: India's huge win – a new record in Champions Trophy history! cricket | Champions Trothy 2025 | ಭಾರತಕ್ಕೆ ಭರ್ಜರಿ ಜಯ – ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಹೊಸ ದಾಖಲೆ! Previous post cricket | Champions Trothy 2025 | ಭಾರತಕ್ಕೆ ಭರ್ಜರಿ ಜಯ – ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಹೊಸ ದಾಖಲೆ!
Bengaluru: Actress Shabana Azmi honoured with award bengaluru | ಬೆಂಗಳೂರು : ಚಿತ್ರನಟಿ ಶಬಾನಾ ಆಜ್ಮಿಗೆ ಪ್ರಶಸ್ತಿ ಗೌರವ Next post bengaluru | Actress Shabana Azmi | ಬೆಂಗಳೂರು : ಚಿತ್ರನಟಿ ಶಬಾನಾ ಆಜ್ಮಿಗೆ ಪ್ರಶಸ್ತಿ ಗೌರವ