shimoga taluk rain | ಶಿವಮೊಗ್ಗ ತಾಲೂಕಿನ ವಿವಿಧೆಡೆ ಗುಡುಗು, ಬಿರುಗಾಳಿ ಮಳೆ!

shimoga taluk rain | ಶಿವಮೊಗ್ಗ ತಾಲೂಕಿನ ವಿವಿಧೆಡೆ ಗುಡುಗು, ಬಿರುಗಾಳಿ ಮಳೆ!

ಶಿವಮೊಗ್ಗ (shivamogga), ಮಾ. 25: ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳು ಮಾ. 25 ರ ಸಂಜೆ ವರ್ಷದ ಮೊದಲ ಮಳೆಯ ಸಿಂಚನಕ್ಕೆ ಸಾಕ್ಷಿಯಾದವು. ಹಲವೆಡೆ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ. ಕಳೆದ ಕೆಲ ತಿಂಗಳುಗಳಿಂದ ತಾಲೂಕಿನಲ್ಲಿ ಮಳೆ ಕಣ್ಮರೆಯಾಗಿತ್ತು. ಬಿಸಿಲ ಬೇಗೆಯ ಪ್ರಮಾಣ ಹೆಚ್ಚಾಗಿತ್ತು.

ಉಳಿದಂತೆ ಶಿವಮೊಗ್ಗ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿತು. ಆದರೆ ಮಳೆಯಾಗಲಿಲ್ಲ. ಇತ್ತೀಚೆಗೆ ನಗರದ ಹೊರವಲಯದ ಕೆಲ ಪ್ರದೇಶಗಳಲ್ಲಿ ಚದುರಿದಂತೆ ಮಳೆಯಾಗಿತ್ತು. ಈ ವೇಳೆ ಕೂಡ ನಗರ ಸೇರಿದಂತೆ ತಾಲೂಕಿನ ಹಲವೆಡೆ ಮಳೆಯಾಗಿರಲಿಲ್ಲ. ಮಂಗಳವಾರ ಸಂಜೆ ತಾಲೂಕಿನ ವಿವಿಧೆಡೆ ಬಿದ್ದ ಮಳೆಯು, ಬಿರು ಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ಭೂಮಿಯನ್ನು ಕೊಂಚ ತಂಪಾಗಿಸಿತು. ನಾಗರೀಕರು ನಿಟ್ಟುಸಿರು ಬಿಡುವಂತೆ ಮಾಡಿತು.

ಎಲ್ಲೆಲ್ಲಿ? : ತಾಲೂಕಿನ ಆಯನೂರು, ಕುಂಸಿ, ಹಾರನಹಳ್ಳಿ, ಬಾಳೆಕೊಪ್ಪ, ಬಸವನಗಂಗೂರು, ಮರಸ, ವಿಠಗೊಂಡನಕೊಪ್ಪ, ಮಲ್ಲಾಪುರ, ಕೋಟೆಗಂಗೂರು, ನಗರದ ಹೊರವಲಯ ಸೋಮಿನಕೊಪ್ಪ, ಆದರ್ಶ ಕಾಲೋನಿ, ಮೋಜಪ್ಪನ ಹೊಸೂರು, ಗೆಜ್ಜೇನಹಳ್ಳಿ, ಕೆಹೆಚ್’ಬಿ ಪ್ರೆಸ್ ಕಾಲೋನಿ ಸೇರಿದಂತೆ ಹಲವೆಡೆ ಗುಡುಗು, ಬಿರುಗಾಳಿ ಸಹಿತ ಮಳೆಯಾದ ಮಾಹಿತಿಗಳು ಬಂದಿವೆ.

ಕೆಲ ಗ್ರಾಮಗಳಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಉತ್ತಮ ಮಳೆಯಾಗಿದೆ. ಉಳಿದೆಡೆ ಸಾಧಾರಣ ಮಳೆಯಾಗಿದೆ. ಹಲವು ದಿನಗಳ ನಂತರ ಬಿದ್ದ ಮಳೆಯಿಂದ ನಾಗರೀಕರಲ್ಲಿ ನಿರಾಳ ಭಾವ ಮೂಡಿಸಿತ್ತು.

ಅಲರ್ಟ್ : ಮತ್ತೊಂದೆಡೆ, ಭಾರತೀಯ ಹವಾಮಾನ ಇಲಾಖೆಯು ಶಿವಮೊಗ್ಗ ಜಿಲ್ಲೆ ಸೇರಿದಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿ ಮಾ. 25 ರಿಂದ ಮಾ. 28 ರವರೆಗೆ ಮಳೆ ಮುನ್ಸೂಚನೆ ನೀಡಿದೆ. ಮಾ. 25 ಹಾಗೂ 26 ರಂದ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

Shivamogga, Mar. 25: Various villages in Shivamogga taluk witnessed the first rain of the year on the evening of Mar. 25. Some villages received rain accompanied by thunderstorms. The rain had disappeared in the taluk for the last few months. The heat wave had increased.

Where?: Thunderstorms and heavy rain accompanied by strong winds have been reported in many places in the taluk, including Ayanur, Kunsi, Haranahalli, Balekoppa, Basavanagangur, Marasa, Vitthagondanakoppa, Mallapur, Kotegangur, Sominakoppa on the outskirts of the city, Adarsh ​​Colony, Basavanagangur, Mojappana Hosur, Gejjenahalli, KHB Press Colony.

Shivamogga: DySP falls into Lokayukta trap while accepting bribe! ಶಿವಮೊಗ್ಗ : ಸಿಬ್ಬಂದಿಯಿಂದ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಡಿವೈಎಸ್ಪಿ! Previous post shimoga | ಶಿವಮೊಗ್ಗ : ಸಿಬ್ಬಂದಿಯಿಂದ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಡಿವೈಎಸ್ಪಿ!
Bhadravati police arrest notorious rowdy sheeter from Shivamogga by shooting him in the leg! ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಭದ್ರಾವತಿ ಪೊಲೀಸರು! Next post shimoga | ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಭದ್ರಾವತಿ ಪೊಲೀಸರು!