Shivamogga: Overflowing Tunge - Villagers' joy..! ಶಿವಮೊಗ್ಗ : ಉಕ್ಕಿ ಹರಿದ ತುಂಗೆ - ಗ್ರಾಮಸ್ಥರ ಸಂತಸ..!

shimoga news | ಶಿವಮೊಗ್ಗ : ಉಕ್ಕಿ ಹರಿದ ತುಂಗೆ – ಗ್ರಾಮಸ್ಥರ ಸಂತಸ..!

ಶಿವಮೊಗ್ಗ (shivamogga), ಜು. 28: ಶಿವಮೊಗ್ಗ ತಾಲೂಕಿನ ವಿವಿಧ ಗ್ರಾಮಗಳ 30 ಕೆರೆಗಳಿಗೆ, ತುಂಗಾ ನದಿಯಿಂದ ನೀರು ತುಂಬಿಸುವ ಮಹತ್ವದ ಯೋಜನೆಯ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಕೂಡ ಯಶಸ್ವಿಯಾಗಿದೆ.

ಈ ನಡುವೆ ಜು. 31 ರಂದು ಬಸವನಗಂಗೂರು ಗ್ರಾಮದ ಹಿರೇಕೆರೆಗೆ, ಅದಿಕೃತವಾಗಿ ತುಂಗಾ ನದಿಯಿಂದ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗ್ರಾಮದ ಕೆರೆಗೆ ತುಂಗಾ ನದಿ ನೀರು ಹರಿದು ಬರುತ್ತಿದ್ದಂತೆ ಬಸವನಗಂಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಾಗೂ ಬಡಾವಣೆಗಳ ನಿವಾಸಿಗಳು ಚಪ್ಪಾಳೆ ತಟ್ಟಿ ಸಂತಸ ಸಂತಸ ವ್ಯಕ್ತಪಡಿಸಿದರು. ಹಲವು ವರ್ಷಗಳ ಕನಸು ನನಸಾಗಿದ್ದಕ್ಕೆ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪುರುಷೋತ್ತಮ್ ಅವರು ಉಪಸ್ಥಿತರಿದ್ದರು. ಗ್ರಾಮಸ್ಥರು ಹಾಗೂ ರೈತರು ಅಧಿಕಾರಿಗಳಿಗೆ ಅಭಿನಂದಿಸಿದರು.

‘ಪ್ರಸ್ತುತ ಸಾಧಾರಣ ಮುಂಗಾರು ಮಳೆಯ ಕಾರಣದಿಂದ, ಸುಮಾರು 45 ಎಕೆರೆಗೂ ಅಧಿಕ ವಿಸ್ತೀರ್ಣದಲ್ಲಿರುವ ಬಸವನಗಂಗೂರು ಕೆರೆ ಭರ್ತಿಯಾಗಿಲ್ಲ. ಅರ್ಧ ಕೆರೆಯೂ ತುಂಬಿಲ್ಲ. ಮುಂದಿನ ದಿನಗಳಲ್ಲಿ ಕೆರೆ ಭರ್ತಿಯಾಗುವ ಸಾಧ್ಯತೆಯೂ ಕಡಿಮೆಯಿದೆ. ಈ ಕಾರಣದಿಂದ ತುಂಗಾ ನದಿಯಿಂದ ನೀರು ಹರಿಸುವ ಯೋಜನೆ ಮೂಲಕ ಕೆರೆ ಭರ್ತಿಗೊಳಿಸಲು ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿಕೊಂಡು ಬಂದಿದ್ದೆವು.

ಆದರೆ ನಾನಾ ಕಾರಣಗಳಿಂದ ನೀರು ಬಂದಿರಲಿಲ್ಲ. ಇದೀಗ ಸಣ್ಣ ನೀರಾವರಿ ಇಲಾಖೆಯು ಕೆರೆಗೆ ತುಂಗಾ ನದಿಯಿಂದ ನೀರು ಹರಿಸುತ್ತಿರುವುದು ಸಂತಸ ಉಂಟು ಮಾಡಿದೆ. ಇದೇ ರೀತಿ ನೀರು ಹರಿದರೆ ಮುಂದಿನ ಎರಡ್ಮೂರು ವಾರಗಳಲ್ಲಿ ಇಡೀ ಕೆರೆ ಭರ್ತಿಯಾಗಲಿದೆ’ ಎಂದು ಗ್ರಾಮಸ್ಥರು ತಿಳಿಸುತ್ತಾರೆ.

‘ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಬೋರ್’ವೆಲ್ ನೀರು ಕುಡಿಯುತ್ತಿದ್ದಾರೆ. ಇದರಲ್ಲಿ ಲವಣಾಂಶಗಳ ಪ್ರಮಾಣ ಹೆಚ್ಚಿದ್ದು, ಕುಡಿಯಲು ಅಯೋಗ್ಯವಾಗಿದೆ. ಈ ಕಾರಣದಿಂದ ಪ್ರಸ್ತುತ ಕೆರೆಗೆ ತುಂಗಾ ನದಿ ನೀರು ಪೂರೈಕೆ ಮಾಡಲಾಗುತ್ತಿದೆ. ಶುದ್ಧೀಕರಣ ಘಟಕ ಸ್ಥಾಪಿಸಿ, ಸದರಿ ತುಂಗಾ ನದಿಯ ನೀರನ್ನು ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮಕೈಗೊಳ್ಳಬೇಕು’ ಎಂದು ಮೋಜಪ್ಪನ ಹೊಸೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಹಕಾರಿ : ಕೆರೆಗಳಿಗೆ ತುಂಗಾ ನದಿಯಿಂದ ನೀರು ಪೂರೈಕೆಯಾಗುತ್ತಿರುವುದರಿಂದ, ಭವಿಷ್ಯದಲ್ಲಿ ಜನ – ಜಾನುವಾರುಗಳ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆ ಸಾಕಷ್ಟು ಅನುಕೂಲವಾಗಲಿದೆ. ಕೆರೆಗಳಲ್ಲಿ ಸದಾ ಕಾಲ ನೀರು ಇರುವುದರಿಂದ ಅಂತರ್ಜಲ ವೃದ್ದಿಗೆ ಸಹಕಾರಿಯಾಗಲಿದೆ.

ಒಟ್ಟಾರೆ ಅಬ್ಬಲಗೆರೆ, ಬಸವನಗಂಗೂರು, ತ್ಯಾಜವಳ್ಳಿ, ಕುಂಚೇನಹಳ್ಳಿ, ಹುಣಸೋಡು ಮೊದಲಾದ ಗ್ರಾಮಗಳ 29 ಕೆರೆಗಳಿಗೆ ತುಂಗಾ ನದಿಯಿಂದ ನೀರು ಪೂರೈಕೆಯಾಗುತ್ತಿರುವುದು ಸ್ಥಳೀಯ ಗ್ರಾಮಸ್ಥರು ಹಾಗೂ ರೈತರಲ್ಲಿ ಸಂತಕ್ಕೆ ಕಾರಣವಾಗಿರುವುದಂತೂ ಸತ್ಯವಾಗಿದೆ.

Shivamogga, July 28: The work of a major project to fill 30 lakes in various villages of Shivamogga taluk with water from the Tunga River has already been completed. The experimental water pumping work that has been going on for the past several days has also been successful. The work of officially releasing water from the Tunga River into Hirekere in Basavanagangur village has been launched. As the water from the Tunga River flowed into the village lake, residents of Basavanagangur and surrounding villages and settlements applauded and expressed happiness.

shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 31ರ ತರಕಾರಿ ಬೆಲೆಗಳ ವಿವರ
Important meeting of CM with Minister, MLA of Shimoga district! ಶಿವಮೊಗ್ಗ ಜಿಲ್ಲೆಯ ಸಚಿವರು, ಶಾಸಕರೊಂದಿಗೆ ಸಿಎಂ ಮಹತ್ವದ ಸಭೆ Next post shimoga | ಶಿವಮೊಗ್ಗ ಜಿಲ್ಲೆಯ ಸಚಿವರು, ಶಾಸಕರೊಂದಿಗೆ ಸಿಎಂ ಮಹತ್ವದ ಸಭೆ!