
shimoga | ಶಿವಮೊಗ್ಗ – ಕಳವು ಪ್ರಕರಣದಲ್ಲಿ ಆಟೋ ಚಾಲಕ ಅರೆಸ್ಟ್ : ಲಕ್ಷಾಂತರ ರೂ. ನಗದು, ಚಿನ್ನಾಭರಣ ವಶ!
ಶಿವಮೊಗ್ಗ (shivamogga), ಸೆಪ್ಟೆಂಬರ್ 24: ಹಾಡಹಗಲೇ ಮನೆಯೊಂದರಲ್ಲಿ ಲಕ್ಷಾಂತರ ನಗದು ಹಾಗೂ ಚಿನ್ನಾಭರಣ ಅಪಹರಿಸಿ ಪರಾರಿಯಾಗಿದ್ದ ವ್ಯಕ್ತಿಯೋರ್ವನನ್ನು, ಶಿವಮೊಗ್ಗದ ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಶಿವಮೊಗ್ಗದ ಗೋಪಾಳದ ವಿಶ್ವೇಶ್ವರನಗರ ಬಡಾವಣೆ ನಿವಾಸಿ, ಆಟೋ ಚಾಲಕ ಅಶ್ರಫ್ ವುಲ್ಲಾ (35) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿಯಿಂದ 22,74,500 ನಗದು, 11.70 ಲಕ್ಷ ರೂ. ಮೌಲ್ಯದ 130 ಗ್ರಾಂ ತೂಕದ ಬಂಗಾರದ ಆಭರಣ, 65 ಸಾವಿರ ರೂ. ಮೌಲ್ಯದ 550 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತುಂಗಾನಗರ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕಿರಣ್ ಮೊರೆ, ಅರುಣ್ ಕುಮಾರ್, ಮೋಹನ್ ಕುಮಾರ್, ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ್, ರಂಗನಾಥ್, ಹರೀಶ್ ಎಮ್ ಜಿ, ಅನುಷಾ, ಚೈತ್ರಾ
ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಹೆಚ್ ಸಿ ಇಂದ್ರೇಶ್, ಗುರು ಮತ್ತು ವಿಜಯ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಪ್ರಕರಣದ ಹಿನ್ನೆಲೆ : 17/9/2025 ರಂದು ಗೋಪಾಳಗೌಡ ಬಡಾವಣೆ ಸಿ ಬ್ಲಾಕ್ ನಲ್ಲಿ ಹಾಡಹಗಲೇ ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಘಟನೆ ನಡೆದಿತ್ತು. ಈ ಸಂಬಂಧ ಮನೆ ಮಾಲೀಕರು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Shivamogga, September 24: A man who had stolen lakhs of rupees in cash and gold ornaments from a house in broad daylight and fled has been arrested by the Tunga Nagar police station in Shivamogga.