ಶಿವಮೊಗ್ಗ (shivamogga), ಆ. 6: ಮನೆಯ ಹಿಂಭಾಗದ ಹುಲ್ಲಿನ ಬಣವೆಯ ಬಿಲದ ಬಳಿ ಅವಿತುಕೊಂಡಿದ್ದ, ಭಾರೀ ಗಾತ್ರದ ಹೆಬ್ಬಾವೊಂದನ್ನು (python) ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಸಂರಕ್ಷಿಸಿದ ಘಟನೆ ಶಿವಮೊಗ್ಗದ (shimoga) ತೀರ್ಥಹಳ್ಳಿ ರಸ್ತೆಯ ಕುರುಬರ ಪಾಳ್ಯದಲ್ಲಿ ನಡೆದಿದೆ.
ಸುಹಾಸ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಹುಲ್ಲಿನ ಬಣವೆಯ ಬಳಿ ಹಾವು ಕಾಣಿಸಿಕೊಂಡಿತ್ತು. ನಂತರ ಅದು ಸಮೀಪದ ಬಿಲದಲ್ಲಿ ಅಡಗಿತ್ತು. ಈ ಕುರಿತಂತೆ ಅವರು ಉರಗ ಸಂರಕ್ಷಕ ಸ್ನೇಕ್ ಕಿರಣ್ (snake rescuer snake kiran) ಅವರಿಗೆ ಮಾಹಿತಿ ರವಾನಿಸಿದ್ದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಿರಣ್ ಅವರು ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ರಕ್ಷಿಸಿದ್ದಾರೆ. ಸದರಿ ಹಾವು (snake) ಸುಮಾರು ಏಳೂವರೆ ಅಡಿ ಉದ್ದವಿದೆ. 705 ಗ್ರಾಂ ತೂಕವಿದೆ. ಅರಣ್ಯ ಇಲಾಖೆ (forest dept) ಸಿಬ್ಬಂದಿಗಳ ಸಮ್ಮುಖದಲ್ಲಿ ಹಾವನ್ನು ಕಾಡಿಗೆ ಬಿಡಲಾಯಿತು ಎಂದು ಸ್ನೇಕ್ ಕಿರಣ್ ಅವರು ಮಾಹಿತಿ ನೀಡಿದ್ದಾರೆ.
‘ಹಾವುಗಳು (snakes) ಪ್ರಕೃತಿಯ ಅಪರೂಪದ ಜೀವ ವೈವಿಧ್ಯಗಳಲ್ಲಿ ಒಂದಾಗಿವೆ. ಇವುಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಂಡಾಗ ಹೊಡೆದು ಸಾಯಿಸಬೇಡಿ. ತಮಗೆ ಮಾಹಿತಿ ನೀಡಿದರೆ ಸಂರಕ್ಷಣೆ ಮಾಡುವುದಾಗಿ’ ಸ್ನೇಕ್ ಕಿರಣ್ (snake kiran) ಅವರು ನಾಗರೀಕರಿಗೆ ಮನವಿ ಮಾಡಿಕೊಂಡಿದ್ದಾರೆ.

